ಆ್ಯಪ್ನಗರ

ಉತ್ತರಾಖಂಡ್‌ನ ಜುಮಾಖಾನ್‌ ಈಗ ನಿರಾಳ

ಹೊಸ ಲಾರಿಯ ಚ್ಯಾಸಿಗಳನ್ನು ಉತ್ತರಾಖಂಡ್‌ನಿಂದ ಎರ್ನಾಕುಳಂಗೆ ಸಾಗಾಟ ಮಾಡುತ್ತಿದ್ದ ವೇಳೆ ಬಿರುಸಿನ ಮಳೆಯಿಂದಾಗಿ ಪ್ರಯಾಣ ಮುಂದುವರಿಸಲಾಗದೆ ಕಾಸರಗೋಡು ಪಿಲಿಕ್ಕೋಡು ಮಟ್ಟಲಾಯಿ ಪೆಟ್ರೋಲ್‌ ಪಂಪ್‌ನ ಮುಂಭಾಗ ಲಾರಿ ನಿಲ್ಲಿಸಿ ಚಾಲಕ ನಿದ್ರೆಗೆ ಜಾರಿದ್ದ ಸಂದರ್ಭ ಲಾರಿಯ ಡಿಸ್ಕ್‌ ಸಹಿತ ನಾಲ್ಕು ಟಯರ್‌ಗಳನ್ನು ಕಳ್ಳರು ಹೊತ್ತೊಯ್ದು, ಸಂಕಷ್ಟದ ಸ್ಥಿತಿಯಲ್ಲಿದ್ದ ಚಾಲಕ ಜುಮಾಖಾನ್‌ ಈಗ ನಿರಾಳರಾಗಿದ್ದಾರೆ.

Vijaya Karnataka 14 Jul 2019, 5:00 am
ಕಾಸರಗೋಡು: ಹೊಸ ಲಾರಿಯ ಚ್ಯಾಸಿಗಳನ್ನು ಉತ್ತರಾಖಂಡ್‌ನಿಂದ ಎರ್ನಾಕುಳಂಗೆ ಸಾಗಾಟ ಮಾಡುತ್ತಿದ್ದ ವೇಳೆ ಬಿರುಸಿನ ಮಳೆಯಿಂದಾಗಿ ಪ್ರಯಾಣ ಮುಂದುವರಿಸಲಾಗದೆ ಕಾಸರಗೋಡು ಪಿಲಿಕ್ಕೋಡು ಮಟ್ಟಲಾಯಿ ಪೆಟ್ರೋಲ್‌ ಪಂಪ್‌ನ ಮುಂಭಾಗ ಲಾರಿ ನಿಲ್ಲಿಸಿ ಚಾಲಕ ನಿದ್ರೆಗೆ ಜಾರಿದ್ದ ಸಂದರ್ಭ ಲಾರಿಯ ಡಿಸ್ಕ್‌ ಸಹಿತ ನಾಲ್ಕು ಟಯರ್‌ಗಳನ್ನು ಕಳ್ಳರು ಹೊತ್ತೊಯ್ದು, ಸಂಕಷ್ಟದ ಸ್ಥಿತಿಯಲ್ಲಿದ್ದ ಚಾಲಕ ಜುಮಾಖಾನ್‌ ಈಗ ನಿರಾಳರಾಗಿದ್ದಾರೆ.
Vijaya Karnataka Web uttarakhand jumakhan free
ಉತ್ತರಾಖಂಡ್‌ನ ಜುಮಾಖಾನ್‌ ಈಗ ನಿರಾಳ


10 ದಿನಗಳ ಹಿಂದೆ ಉತ್ತರಾಖಂಡ್‌ನಿಂದ ಹೊಸ ಲಾರಿಗಳ ಚ್ಯಾಸಿಗಳನ್ನು ಹೇರಿಕೊಂಡು ಲಾರಿಯಲ್ಲಿ ಹೊರಟಿದ್ದ ಉತ್ತರಾಖಂಡ್‌ನ ಚಾಲಕ ಜುಮಾಖಾನ್‌ಗೆ ಕೇರಳದಲ್ಲಿ ವಿಚಿತ್ರ ಅನುಭವವಾಗಿದೆ. ಪಿಲಿಕ್ಕೋಡು ಮಟ್ಟಲಾಯಿಗೆ ತಲುಪುತ್ತಿದ್ದಂತೆ ಭಾರೀ ಮಳೆ ಎದುರಾಯಿತು. ಪ್ರಯಾಣ ಮುಂದುವರಿಸಲಾಗದೆ ಮಧ್ಯರಾತ್ರಿ ಮಟ್ಟಲಾಯಿ ಪೆಟ್ರೋಲ್‌ ಬಂಕ್‌ ಮುಂಭಾಗ ಲಾರಿ ನಿಲ್ಲಿಸಿ ನಿದ್ರೆಗೆ ಜಾರಿದ ಜುಮಾಖಾನ್‌ ಬೆಳಗ್ಗೆ ಎದ್ದು ನೋಡುವಷ್ಟರಲ್ಲಿ ತನ್ನ ಲಾರಿಯ ಸುಮಾರು 2 ಲಕ್ಷ ರೂ. ಮೌಲ್ಯದ ನಾಲ್ಕು ಟಯರ್‌ಗಳು ನಾಪತ್ತೆಯಾಗಿದ್ದವು. ಮುಂದಿನ ಪ್ರಯಾಣ ಹೇಗೆಂದು ಚಿಂತಾಕ್ರಾಂತರಾಗಿ ಕುಳಿತಿದ್ದರು.

ಒಂದು ಕ್ಷಣ ಕೇರಳೀಯರಿಗೆ ಹಿಡಿಶಾಪ ಹಾಕಿದ್ದ ಜುಮಾಖಾನ್‌ಗೆ ಕೆಲವೇ ಕ್ಷಣಗಳಲ್ಲಿ ಕೇರಳೀಯರ ಉದಾರ ಮನಸ್ಸು ಅರಿವಾಗತೊಡಗಿತ್ತು. ಉತ್ತರಾಖಂಡ್‌ನ ಚ್ಯಾಸಿ ಕಂಪನಿಗೆ ಕರೆ ಮಾಡಿ ಮಾಹಿತಿ ನೀಡಿದಾಗ ಚ್ಯಾಸಿ ಸಾಗಾಟ ಮಾಡುವ ವಾಹನದ ಜವಾಬ್ದಾರಿ ಚಾಲಕರಿಗೆ ಸೇರಿದ್ದು ಎಂಬ ಪ್ರತಿಕ್ರಿಯೆ ಲಭಿಸಿತ್ತು. ಇದರಿಂದ ಇನ್ನಷ್ಟು ಚಿಂತೆ ಜುಮಾಖಾನ್‌ ಅವರನ್ನು ಕಾಡಿತು.

ಚ್ಯಾಸಿಯನ್ನು ಎರ್ನಾಕುಳಂಗೆ ತಲುಪಿಸಿದರೆ 7500 ರೂ. ವೇತನ ಲಭಿಸುತ್ತದೆ. ಏನು ಮಾಡಬೇಕು ಎಂದು ತಿಳಿಯದೆ ಇದ್ದ ಜುಮಾಖಾನ್‌ನ ಕುರಿತು ಕೇರಳದ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾದಾಗ ಹಲವರು ಸಹಾಯ ಮಾಡುವುದಕ್ಕಾಗಿ ಮುಂದೆ ಬಂದರು. ಕಂಪನಿ ಅಧಿಕಾರಿಗಳಿಗೂ ಈ ಕುರಿತು ತಿಳಿಸಲಾಯಿತು.

ಜುಮಾಖಾನ್‌ನ ಸಂಕಷ್ಟ ಅರ್ಥ ಮಾಡಿಕೊಂಡ ಕಂಪನಿ ಟಯರ್‌ನ ಮೌಲ್ಯ ತಮ್ಮಿಂದ ವಸೂಲಿ ಮಾಡುವುದಿಲ್ಲ ಎಂದು ತಿಳಿಸಿತು. ಇದರಿಂದ ಜುಮಾಖಾನ್‌ನ ಮನಸ್ಸು ನಿರಾಳವಾಯಿತು. ಜತೆಗೆ ಇದ್ದ ಇನ್ನೆರಡು ಚ್ಯಾಸಿಗಳ ಟಯರ್‌ಗಳನ್ನು ಲಾರಿಗೆ ಅಳವಡಿಸಿ ಪ್ರಯಾಣ ಮುಂದುವರಿಸಲಾಯಿತು. ಪೊಲೀಸ್‌ ಠಾಣೆಯಲ್ಲಿ ನಡೆಯಬೇಕಿದ್ದ ಪ್ರಕ್ರಿಯೆಗಳನ್ನು ಶೀಘ್ರಗೊಳಿಸಲು ಸ್ಥಳೀಯರು ಸಹಕರಿಸಿದರು.

ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ ಜುಮಾಖಾನ್‌ ಪ್ರಯಾಣ ಮುಂದುವರಿಸಿದರು. ಕೇರಳ ನಲ್ಮೆಯ ನಾಡು. ಆದರೆ ನಲ್ಮೆ ಇಲ್ಲದ ಕೆಲವರಿದ್ದಾರೆ ಎಂದು ಹೇಳಲು ಮರೆಯಲಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ