ಆ್ಯಪ್ನಗರ

ಲೋಕಸಭೆ ಚುನಾವಣೆಗೆ ವಿಶೇಷಚೇತನ ಸತಿ ಅಂಬಾಸಿಡರ್‌

ಶಾರೀರಿಕ ಅಸ್ವಸ್ಥತೆಗಳನ್ನು ಓದು ಎಂಬ ಔಷಧದಿಂದ ಸೋಲಿಸಿದ ಕಾಸರಗೋಡು ಜಿಲ್ಲೆಯ ಚೆರುವತ್ತೂರು ಕೊಡಕ್ಕಾಡ್‌ ಪೊಳ್ಳಾಪೊಯಿಲಿನೆಂ ವಿ ಸತಿ ಚುನಾವಣೆ ಆಯೋಗದ ಅಂಬಾಸಿಡರ್‌ ಆಗಿದ್ದಾರೆ...

Vijaya Karnataka 11 Jan 2019, 5:00 am
ಕಾಸರಗೋಡು: ಶಾರೀರಿಕ ಅಸ್ವಸ್ಥತೆಗಳನ್ನು ಓದು ಎಂಬ ಔಷಧದಿಂದ ಸೋಲಿಸಿದ ಕಾಸರಗೋಡು ಜಿಲ್ಲೆಯ ಚೆರುವತ್ತೂರು ಕೊಡಕ್ಕಾಡ್‌ ಪೊಳ್ಳಾಪೊಯಿಲಿನೆಂ. ವಿ. ಸತಿ ಚುನಾವಣೆ ಆಯೋಗದ ಅಂಬಾಸಿಡರ್‌ ಆಗಿದ್ದಾರೆ. ಮತದಾನದಲ್ಲಿ ವಿಶೇಷಚೇತನರ ಪಾಲ್ಗೊಳ್ಳುವಿಕೆಯನ್ನು ಖಾತರಿಪಡಿಸುವುದಕ್ಕಾಗಿ ಜಾರಿಗೊಳಿಸುವ ಪ್ರಚಾರ ಕಾರ್ಯಕ್ರಮಗಳಲ್ಲಿ ಜಿಲ್ಲೆಯ ಅಂಬಾಸಿಡರ್‌ ಆಗಿ ಸತಿ ಆಯ್ಕೆಯಾಗಿದ್ದಾರೆ.
Vijaya Karnataka Web v sati ambassodor to kasaragodu lokasabha election
ಲೋಕಸಭೆ ಚುನಾವಣೆಗೆ ವಿಶೇಷಚೇತನ ಸತಿ ಅಂಬಾಸಿಡರ್‌


ಸಮಸ್ಯೆಗಳಿಂದ ಒದ್ದಾಡುತ್ತಿರುವವರ ಮುಂದೆ ಸ್ವ ಇಚ್ಛೆಯಿಂದ ಮುಂದೆ ಬಂದ ಯುವತಿಯಾಗಿದ್ದಾರೆ ಸತಿ. ಸಣ್ಣ ಅಸ್ವಸ್ಥತೆ ಕಾರಣ ಪ್ರಜಾಪ್ರಭುತ್ವ ಹಕ್ಕಾದ ಮತ ಚಲಾಯಿಸದವರನ್ನು ಮತಗಟ್ಟೆಗೆ ತಲುಪಿಸಲಿರುವ ಪ್ರಯತ್ನವನ್ನು ಇಂತಹ ವ್ಯಕ್ತಿಗಳನ್ನು ಎತ್ತಿ ತೋರಿಸುವ ಮೂಲಕ ಉದ್ದೇಶಿಸಲಾಗುತ್ತಿದೆ. ಕೂತಲ್ಲಿಂದ ಎದ್ದು ನಿಲ್ಲಲು ಕೂಡ ಸಾಧ್ಯವಾಗದಿದ್ದರೂ ಓದಿನ ಮೂಲಕ ಸತಿ ಗಮನ ಸೆಳೆದಿದ್ದರು. ಸ್ಪೈನಲ್‌ ಅಟ್ರೋಫಿ ಟೈಪ್‌ 2 ಎಂಬ ರೋಗ ಹುಟ್ಟಿನಿಂದಲೇ ಬಾಧಿಸಿದೆ. ಪ್ರಯಾಣ ಕಷ್ಟವಾಗಿರುವುದರಿಂದ ನಾಲ್ಕನೇ ತರಗತಿಯವರೆಗೆ ಮಾತ್ರ ಶಾಲೆಗೆ ಹೋಗಿದ್ದಾರೆ.

ಆದರೆ ಮನೆಯಲ್ಲಿ ಸುಮ್ಮನೇ ಕುಳಿತುಕೊಳ್ಳದೆ ಸತಿ ಪುಸ್ತಕಗಳ ಗೆಳತಿಯಾದಳು. ಮಕ್ಕಳ ಕಥೆಗಳು, ಕವಿತೆಗಳು, ಕಾದಂಬರಿಗಳನ್ನೆಲ್ಲ ಓದಿ ವಾಚನ ಲೋಕಕ್ಕೆ ಹಾರಿ ಬಂದಳು. ಮೂರು ಸಾವಿರದಷ್ಟು ಪುಸ್ತಕಗಳನ್ನು ಸತಿ ಓದಿ ಮುಗಿಸಿದ್ದಾರೆ. ಮೂರನೇ ತರಗತಿಯ ಮಲೆಯಾಳ ಪಠ್ಯಪುಸ್ತಕದಲ್ಲಿ 2013ರವರೆಗೆ ಸತಿಯೊಂದಿಗಿನ ಸಂದರ್ಶನ ಓದಲು ಇತ್ತು.

ಓದಿನ ಲೋಕದಿಂದ ಬರವಣಿಗೆಯ ಲೋಕಕ್ಕೆ ಸತಿ ಹಾದು ಬಂದರು. ಗುಳಿಗ ವರಚ್ಚ ಚಿತ್ರಂಙಳ್‌ ಎಂಬ ಹೆಸರಿನಲ್ಲಿ 14 ಕಥೆಗಳ ಸಂಕಲನವನ್ನು ಹೊರ ತಂದಿದ್ದಾರೆ. ಸತಿ ಕೊಡಕ್ಕಾಡ್‌ ಬರೆದು ಅಭಿನಯಿಸಿದ ಕುಂಞæೂೕಳಙಳ್‌ ಎಂಬ ವೀಡಿಯೋ ಆಲ್ಬಂ ಇತ್ತೀಚೆಗೆ ಬಿಡುಗಡೆಗೊಂಡಿದೆ. ಓದು ಹಾಗೂ ಪುಸ್ತಕಗಳನ್ನು ಸಂಗಾತಿಗಳನ್ನಾಗಿ ಮಾಡಿಕೊಟ್ಟ ತಂದೆ ಸಿವಿಕ್‌ ಕೊಡಕ್ಕಾಡ್‌ ನಾಲ್ಕು ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ.

ಈಗ ತಾಯಿ ಹಾಗೂ ಸಹೋದರರ ಜತೆ ವಾಸವಿರುವ ಸತಿ ತನಗೆ ಲಭಿಸಿದ ಮಾನ್ಯತೆ ಹೆಚ್ಚು ಸಂತೋಷ ತಂದಿರುವುದಾಗಿ ಹೇಳುತ್ತಿದ್ದಾರೆ. ಜಿಲ್ಲಾಧಿಕಾರಿ ಡಾ. ಡಿ. ಸಜಿತ್‌ಬಾಬು ಸತಿಯ ಮನೆಗೆ ತೆರಳಿ ಆದೇಶವವನ್ನು ಹಸ್ತಾಂತರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ