ಆ್ಯಪ್ನಗರ

ಪುಳಿಕುತ್ತಿ, ಅಗರ್ತಿಮೂಲೆಯಲ್ಲಿ ಹುಲಿಯಲ್ಲ, ಕಾಡು ಬೆಕ್ಕು

ಮಂಗಲ್ಪಾಡಿ ಗ್ರಾ.ಪಂ.ವ್ಯಾಪ್ತಿಯ ಪುಳಿಕುತ್ತಿ, ಅಗರ್ತಿಮೂಲೆ ಎಂಬೆಡೆಗಳಲ್ಲಿ ಕಂಡು ಬಂದಿರುವುದು ಕಾಡು ಬೆಕ್ಕಿನ ಹೆಜ್ಜೆಗಳಾಗಿವೆ ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

Vijaya Karnataka 17 May 2018, 2:59 pm
ಉಪ್ಪಳ: ಮಂಗಲ್ಪಾಡಿ ಗ್ರಾ.ಪಂ.ವ್ಯಾಪ್ತಿಯ ಪುಳಿಕುತ್ತಿ, ಅಗರ್ತಿಮೂಲೆ ಎಂಬೆಡೆಗಳಲ್ಲಿ ಕಂಡು ಬಂದಿರುವುದು ಕಾಡು ಬೆಕ್ಕಿನ ಹೆಜ್ಜೆಗಳಾಗಿವೆ ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
Vijaya Karnataka Web wild cat
ಪುಳಿಕುತ್ತಿ, ಅಗರ್ತಿಮೂಲೆಯಲ್ಲಿ ಹುಲಿಯಲ್ಲ, ಕಾಡು ಬೆಕ್ಕು


ಪರಿಸರಕ್ಕೆ ಸೋಮವಾರ ಭೇಟಿ ನೀಡಿದ ಅರಣ್ಯಾಧಿಕಾರಿಗಳು ಹುಲಿ ಹೆಜ್ಜೆ ಗುರುತುಗಳಾಗಿವೆ ಎನ್ನಲಾದ ಹೆಜ್ಜೆ ಗುರುತುಗಳನ್ನು ಪರಿಶೀಲಿಸಿ ಈ ನಿರ್ಧಾರ ಕೈಗೊಂಡಿದ್ದಾರೆ.

ಅಗರ್ತಿಮೂಲೆಯಲ್ಲಿ ವ್ಯಕ್ತಿಯೊಬ್ಬರ ಮನೆಯ ಅಂಗಳದಲ್ಲಿ , ಪುಳಿಕುತ್ತಿ ಸ್ಮಶಾನ ಪರಿಸರದಲ್ಲಿ ಹುಲಿಯದ್ದೆಂದು ಸಂಶಯಿಸಲಾದ ಹೆಜ್ಜೆ ಗುರುತುಗಳು ಕಂಡು ಬಂದಿತ್ತು. ಇದರಿಂದ ಭಯ ಭೀತರಾದ ಜನರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಇದೇ ವೇಳೆ ಇತ್ತೀಚೆಗೆ ಸಮೀಪದ ಪಚ್ಚಂಬಳದಲ್ಲಿಯೂ ಎರಡು ಹುಲಿಗಳನ್ನು ಕಂಡಿರುವುದಾಗಿ ನಾಗರಿಕರು ತಿಳಿಸಿದ್ದರು. ಈ ಭಾಗದಲ್ಲಿಯೂ ಪೊಲೀಸರು ಹಾಗೂ ಅರಣ್ಯಾಧಿಕಾರಿಗಳು ಶೋಧ ನಡೆಸಿದರೂ ಹುಲಿಯದ್ದೆಂದು ಸಂಶಯಿಸಲಾದ ಹೆಜ್ಜೆ ಗುರುತು ಕಂಡು ಬಂದಿದೆ. ಆದರೆ ಹುಲಿಯನ್ನು ಪತ್ತೆ ಹಚ್ಚಲಾಗಲಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ