ಆ್ಯಪ್ನಗರ

ಯಾಗದ ಹವಿಸ್ಸು ಭತ್ತ ಕೃಷಿ ನಾಟಿ

ಅನನ್ಯ ಭಕ್ತಿಭಾವಗಳೊಂದಿಗೆ ಭತ್ತದ ತೆನೆಯನ್ನು ಗದ್ದೆಯಲ್ಲಿ ನಾಟಿ ಮಾಡುವ ಮೂಲಕ ದೇವರಗುಡ್ಡೆ ಶ್ರೀಶೈಲ ಮಹಾದೇವ ಕ್ಷೇತ್ರದಲ್ಲಿ ನಡೆಯಲಿರುವ ಅತಿರುದ್ರ ಮಹಾಯಾಗಕ್ಕೆ ಯಾಗದ ಹವಿಸ್ಸು ಭತ್ತ ಕೃಷಿ ನಾಟಿ ಮಹೋತ್ಸವ ಬೇಳ ಚೌಕ್ಕಾರು ಕರ್ಪಿತ್ತಿಲು ಅರಿಕ್ಕೆಲ್‌ ಮರಾಟಿಕೆರೆಯಲ್ಲಿ ಭಾನುವಾರ ಜರುಗಿತು.

Vijaya Karnataka 5 Aug 2019, 5:00 am
ಬದಿಯಡ್ಕ: ಅನನ್ಯ ಭಕ್ತಿಭಾವಗಳೊಂದಿಗೆ ಭತ್ತದ ತೆನೆಯನ್ನು ಗದ್ದೆಯಲ್ಲಿ ನಾಟಿ ಮಾಡುವ ಮೂಲಕ ದೇವರಗುಡ್ಡೆ ಶ್ರೀಶೈಲ ಮಹಾದೇವ ಕ್ಷೇತ್ರದಲ್ಲಿ ನಡೆಯಲಿರುವ ಅತಿರುದ್ರ ಮಹಾಯಾಗಕ್ಕೆ ಯಾಗದ ಹವಿಸ್ಸು ಭತ್ತ ಕೃಷಿ ನಾಟಿ ಮಹೋತ್ಸವ ಬೇಳ ಚೌಕ್ಕಾರು ಕರ್ಪಿತ್ತಿಲು ಅರಿಕ್ಕೆಲ್‌ ಮರಾಟಿಕೆರೆಯಲ್ಲಿ ಭಾನುವಾರ ಜರುಗಿತು.
Vijaya Karnataka Web yagada havissu pady krishi nati
ಯಾಗದ ಹವಿಸ್ಸು ಭತ್ತ ಕೃಷಿ ನಾಟಿ


2020ರ ಫೆಬ್ರವರಿ 26ರಿಂದ ಮಾರ್ಚ್‌ 2ರ ತನಕ ಅತಿ ವಿಶಿಷ್ಟವಾದ ಅತಿರುದ್ರ ಮಹಾಯಾಗ ನಡೆಯಲಿದೆ. ಯಾಗದ ಸಿದ್ಧತೆಗಳು ಈಗಾಗಲೇ ಆರಂಭಗೊಂಡಿದ್ದು, ಆಹುತಿಯನ್ನು ನೀಡುವ ಹವಿಸ್ಸುಗಳೆಲ್ಲವನ್ನೂ ವಿಷಮುಕ್ತವಾಗಿ ಸಾವಯವ ಕೃಷಿ ಮೂಲಕ ನಡೆಸಲಾಗುವುದು.

ಸಿದ್ಧತೆ ಅಂಗವಾಗಿ ನಾನಾ ಕಡೆ ಈಗಾಗಲೇ ಸಮಿತಿಗಳನ್ನು ರೂಪಿಸಲಾಗಿದ್ದು, ನೀರ್ಚಾಲು ಸಮಿತಿ ನೇತೃತ್ವದಲ್ಲಿ ಚೌಕ್ಕಾರು ಕರ್ಪಿತ್ತಿಲು ನಾರಾಯಣ ರೈ ಹಾಗೂ ದೂಮಣ್ಣ ರೈಯವರ ಗದ್ದೆಯಲ್ಲಿ ನಡೆದ ಭತ್ತ ಕೃಷಿ ನಾಟಿ ಮಹೋತ್ಸವಕ್ಕೆ ಹರ ಹರ ಮಹಾದೇವ್‌ ದೇವನಾಮದೊಂದಿಗೆ ಕ್ಷೇತ್ರದ ತಂತ್ರಿವರ್ಯ ಬ್ರಹ್ಮಶ್ರೀ ಉಳಿಯ ವಿಷ್ಣು ಆಸ್ರ ಭತ್ತದ ತೆನೆಯನ್ನು ಭಕ್ತರಿಗೆ ಹಸ್ತಾಂತರಿಸಿ ಅನುಗ್ರಹಿಸಿದರು. ದೇವರ ನಾಮಸ್ಮರಣೆಯೊಂದಿಗೆ ನಮ್ಮ ಪಾಲಿಗೊದಗಿದ ದೇವರ ಸೇವೆಯನ್ನು ಕೈಗೊಳ್ಳಲು ನೂರಾರು ಭಕ್ತಾದಿಗಳು ಒಂದುಗೂಡಿದ್ದರು. ಪುಟ್ಟ ಮಕ್ಕಳು, ವಿದ್ಯಾರ್ಥಿಗಳು, ಮಾತೆಯರು, ಮಹನೀಯರು ಒಟ್ಟು ಸೇರಿ ಶೀಘ್ರದಲ್ಲಿ ನಾಟಿ ಕಾರ್ಯ ಮುಗಿಸಿದರು. ಈ ಸಂದರ್ಭ ಊರ ಪರವೂರ ಅನೇಕ ಮಂದಿ ಗಣ್ಯರು ಪಾಲ್ಗೊಂಡಿದ್ದರು.

ಯಾಗದ ಪೂರ್ವಭಾವಿ ಸಿದ್ಧತೆಗಳು ಈಗಾಗಲೇ ಆರಂಭವಾಗಿದ್ದು, ಯಾಗಕ್ಕೆ ಅಗತ್ಯವಿರುವ ಧಾನ್ಯಗಳನ್ನು ಪ್ರಕೃತಿ ಸಹಜವಾಗಿ ಉತ್ಪಾದಿಸುವ ಉದ್ದೇಶದಿಂದ ಭತ್ತದ ಕೃಷಿಯನ್ನು ಮಾಡಲಾಗುತ್ತದೆ. ಎಲ್ಲ ಸಮಾಜಬಾಂಧವರು ಪವಿತ್ರವಾದ ಮಹಾ ಯಾಗವನ್ನು ಅತ್ಯಂತ ಯಶಸ್ವಿಯಾಗಿ ನಡೆಸಲು ಸಹಕರಿಸಬೇಕು.
- ಬ್ರಹಶ್ರೀ ಉಳಿಯ ವಿಷ್ಣು ಆಸ್ರ, ತಂತ್ರಿಗಳು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ