ಆ್ಯಪ್ನಗರ

ಜಿಲ್ಲಾ ಮಟ್ಟದ ನಾಕೌಟ್‌ ಹಾಕಿ ಪಂದ್ಯಾವಳಿ

5ನೇ ಜಿಲ್ಲಾ ಮಟ್ಟದ ನಾಕೌಟ್‌ ಹಾಕಿ ಪಂದ್ಯಾವಳಿಯನ್ನು ಅ.26ರಿಂದ ನ.1ರವರೆಗೆ ಕಾಕೋಟುಪರಂಬುವಿನಲ್ಲಿ ಆಯೋಜಿಸಲಾಗಿದೆ ಎಂದು ಕಾಕೋಟುಪರಂಬು ಸ್ಪೋಟ್ಸ್‌ ಮತ್ತು ರಿಕ್ರಿಯೇಶನ್‌ ಕ್ಲಬ್‌ ಅಧ್ಯಕ್ಷ ಮೇವಡ ಚಿಣ್ಣಪ್ಪ ತಿಳಿಸಿದ್ದಾರೆ.

ವಿಕ ಸುದ್ದಿಲೋಕ 27 Sep 2016, 9:00 am

ಮಡಿಕೇರಿ: 5ನೇ ಜಿಲ್ಲಾ ಮಟ್ಟದ ನಾಕೌಟ್‌ ಹಾಕಿ ಪಂದ್ಯಾವಳಿಯನ್ನು ಅ.26ರಿಂದ ನ.1ರವರೆಗೆ ಕಾಕೋಟುಪರಂಬುವಿನಲ್ಲಿ ಆಯೋಜಿಸಲಾಗಿದೆ ಎಂದು ಕಾಕೋಟುಪರಂಬು ಸ್ಪೋಟ್ಸ್‌ ಮತ್ತು ರಿಕ್ರಿಯೇಶನ್‌ ಕ್ಲಬ್‌ ಅಧ್ಯಕ್ಷ ಮೇವಡ ಚಿಣ್ಣಪ್ಪ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿ, ಹಾಕಿ ಕೂರ್ಗ್‌ ಸಂಸ್ಥೆಯ ಸಹಯೋಗದೊಂದಿಗೆ ಕ್ಲಬ್‌ ವತಿಯಿಂದ 5ನೇ ಜಿಲ್ಲಾಮಟ್ಟದ ನಾಕೌಟ್‌ ಹಾಕಿ ಪಂದ್ಯಾವಳಿಯನ್ನು ಅ.26ರಿಂದ ನ.1ರವರೆಗೆ ಕಾಕೋಟುಪರಂಬುವಿನಲ್ಲಿ ಆಯೋಜಿಸಲಾಗಿದೆ. ಪಂದ್ಯಾವಳಿಯಲ್ಲಿ ಹಾಕಿ ಕೂರ್ಗ್‌ ಸಂಸ್ಥೆಯಲ್ಲಿ ನೋಂದಾಯಿಸಿದ ತಂಡಗಳೂ ಭಾಗವಹಿಸಬಹುದು ಎಂದರು.

ಪ್ರತೀ ತಂಡಗಳು 5 ಮಂದಿ ಅತಿಥಿ ಆಟಗಾರರನ್ನು ಸೇರಿಸಿಕೊಳ್ಳಬಹುದಾಗಿದೆ. ಕ್ರೀಡಾಕೂಟದಲ್ಲಿ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಹಾಕಿಪಟುಗಳು ಭಾಗವಹಿಸುವ ನಿರೀಕ್ಷೆ ಇದೆ. ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ತಂಡಕ್ಕೆ 1 ಲಕ್ಷ ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು. ಆಸಕ್ತ ತಂಡಗಳು ಅ.5ರೊಳಗೆ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಕಾಕೋಟು ಪರಂಬು ಸ್ಪೋಟ್ಸ್‌ ಮತ್ತು ರಿಕ್ರಿಯೇಶನ್‌ ಕ್ಲಬ್‌ ಕೋರಿದೆ.

ಕ್ಲಬ್‌ ಉಪಾಧ್ಯಕ್ಷ ಐಚೇಟ್ಟಿರ ಮೋಹನ್‌, ನಿರ್ದೇಶಕರಾದ ಪಳೆಯಂಡ ರಾಬಿನ್‌ ದೇವಯ್ಯ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ