ಆ್ಯಪ್ನಗರ

ಹಾರಂಗಿಯಿಂದ ನದಿಗೆ ಕಲುಷಿತ ನೀರು

ಹಾರಂಗಿ ಅಣೆಕಟ್ಟೆಯಿಂದ ಕೆಳಗಿನ ಗೇಟ್‌ ಮೂಲಕ ನದಿ ಗೆ ಹರಿಸಲಾದ ನೀರು ಸಂಪೂರ್ಣ ಕಲುಷಿತಗೊಂಡಿದೆ ಎಂದು ಕೂಡುಮಂಗಳೂರು ಗ್ರಾಪಂ ಸದಸ್ಯ ಭಾಸ್ಕರ ನಾಯಕ್‌ ಆರೋಪಿಸಿದ್ದಾರೆ.

Vijaya Karnataka 31 May 2018, 5:00 am
ಕುಶಾಲನಗರ: ಹಾರಂಗಿ ಅಣೆಕಟ್ಟೆಯಿಂದ ಕೆಳಗಿನ ಗೇಟ್‌ ಮೂಲಕ ನದಿ ಗೆ ಹರಿಸಲಾದ ನೀರು ಸಂಪೂರ್ಣ ಕಲುಷಿತಗೊಂಡಿದೆ ಎಂದು ಕೂಡುಮಂಗಳೂರು ಗ್ರಾಪಂ ಸದಸ್ಯ ಭಾಸ್ಕರ ನಾಯಕ್‌ ಆರೋಪಿಸಿದ್ದಾರೆ.
Vijaya Karnataka Web
ಹಾರಂಗಿಯಿಂದ ನದಿಗೆ ಕಲುಷಿತ ನೀರು


ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ''ಕಳೆದ ವಾರ ಹಾರಂಗಿ ಅಣೆಕಟ್ಟೆಯ ಕೆಳಗಿನ ಗೇಟ್‌ಗಳಿಂದ ಕುಡಿಯುವ ಉದ್ದೇಶಕ್ಕಾಗಿ ನದಿಗೆ ನೀರು ಹರಿಸಲಾಗಿತ್ತು. ಆದರೆ, ಈ ನೀರು ಸಂಪೂರ್ಣ ಕಲುಷಿತಗೊಂಡಿದ್ದು, ಬಳಸಲು ಯೋಗ್ಯವಲ್ಲದ ಸ್ಥಿತಿಯಲ್ಲಿದೆ. ಜಲಾಶಯದ ಹಿಂಭಾಗ ವ್ಯಾಪ್ತಿಯಲ್ಲಿ ಕಾಫಿ ಪಲ್ಪಿಂಗ್‌ ಮಾಡಿದ ಅನುಪಯುಕ್ತ ನೀರು ಜಲಾಶಯದಲ್ಲಿ ತಳಭಾಗದಲ್ಲಿ ಶೇಖರಣಗೊಳ್ಳುತ್ತಿದೆ. ಈ ಸಂಗ್ರಹ ನೀರನ್ನು ನದಿಗೆ ಹರಿಸಲಾಗಿದ್ದು ಕಲುಷಿತಗೊಂಡಿರುವ ಕಾರಣ ನೀರು ಸಂಪೂರ್ಣ ಕಂದು ಬಣ್ಣಕ್ಕೆ ತಿರುಗಿದೆ. ಈ ನೀರಿನಲ್ಲಿ ಸ್ನಾನ ಮಾಡಿದ ಹಲವು ಮಂದಿಗೆ ಚರ್ಮ ರೋಗ ಕಾಣಿಸಿಕೊಂಡಿದೆ. ನದಿಯಲ್ಲಿ ಸ್ನಾನ ಮಾಡಿದ ಜನರ ಮೈಗೆ ಜಿಡ್ಡಿನ ಅಂಶ ಅಂಟಿಕೊಂಡು ತುರಿಕೆ ಪ್ರಾರಂಭವಾಗುತ್ತಿದೆ,'' ಎಂದರು.

''ನೀರು ಹರಿದ ಕಲ್ಲು ಪೊದೆಗಳ ಮೇಲೆ ಕಂದುಬಣ್ಣ ಅಂಟಿಕೊಂಡಿರುವ ದೃಶ್ಯ ಗೋಚರಿಸಿದೆ. ಈ ಜಲಾಶಯದಿಂದ ಹರಿಸಲಾಗುವ ನೀರನ್ನು ಸೋಮವಾರಪೇಟೆ, ಅತ್ತೂರು ಗ್ರಾಮ, ಹಾರಂಗಿ ಗ್ರಾಮಗಳಿಗೆ ಸರಬರಾಜು ಮಾಡಲಾಗುತ್ತಿದ್ದು, ಇದನ್ನು ಬಳಸಿದರೆ ಭಾರಿ ಅಪಾಯ ಉಂಟಾಗುವ ಸಾಧ್ಯತೆಯಿದೆ. ಕಳೆದ ಹಲವು ವರ್ಷಗಳಿಂದ ಸಂಗ್ರಹಗೊಂಡ ಡೆಡ್‌ ಸ್ಟೋರೆಜ್‌ ನೀರನ್ನು ಹರಿಯಬಿಡಲಾಗಿದೆ. ಪ್ರತಿ ವರ್ಷ ಕೆಳಗಿನ ಗೇಟ್‌ಗಳನ್ನು ತೆರೆದು ನೀರನ್ನು ಹರಿಯಬಿಟ್ಟಲ್ಲಿ ಈ ರೀತಿಯ ಸಮಸ್ಯೆ ಉಂಟಾಗುವುದಿಲ್ಲ. ಈ ಬಗ್ಗೆ ಜಿಲ್ಲಾಡಳಿತ ತಕ್ಷ ಣ ಗಮನಹರಿಸಬೇಕಿದೆ,'' ಎಂದು ಆಗ್ರಹಿಸಿದರು.
ಗ್ರಾಪಂ ಮಾಜಿ ಸದಸ್ಯ ದೇವರಾಜು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ