ಆ್ಯಪ್ನಗರ

ಟ್ಯಾಂಕ್‌ ಮರು ನಿರ್ಮಾಣಕ್ಕೆ ಒತ್ತಾಯ

ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಅರಸುನಗರದಲ್ಲಿರುವ 3 ಲಕ್ಷ ಗ್ಯಾಲನ್‌ ಸಾಮರ್ಥ್ಯ‌ದ ಕುಡಿಯುವ ನೀರು ಶೇಖರಣ ಟ್ಯಾಂಕ್‌ ದುಸ್ಥಿತಿಗೆ ತಲುಪಿದ್ದು, ತಕ್ಷ ಣ ಮರು ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಜನತಾದಳ ಅಧ್ಯಕ್ಷ ಮೇರಿಯಂಡ ಸಂಕೇತ್‌ ಪೂವಯ್ಯ ಶಾಸಕರನ್ನು ಮತ್ತು ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದ್ದಾರೆ.

Vijaya Karnataka 1 Jul 2018, 5:00 am
ವಿರಾಜಪೇಟೆ: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಅರಸುನಗರದಲ್ಲಿರುವ 3 ಲಕ್ಷ ಗ್ಯಾಲನ್‌ ಸಾಮರ್ಥ್ಯ‌ದ ಕುಡಿಯುವ ನೀರು ಶೇಖರಣ ಟ್ಯಾಂಕ್‌ ದುಸ್ಥಿತಿಗೆ ತಲುಪಿದ್ದು, ತಕ್ಷ ಣ ಮರು ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಜನತಾದಳ ಅಧ್ಯಕ್ಷ ಮೇರಿಯಂಡ ಸಂಕೇತ್‌ ಪೂವಯ್ಯ ಶಾಸಕರನ್ನು ಮತ್ತು ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದ್ದಾರೆ.
Vijaya Karnataka Web
ಟ್ಯಾಂಕ್‌ ಮರು ನಿರ್ಮಾಣಕ್ಕೆ ಒತ್ತಾಯ


ಅರಸುನಗರದ ನಿವಾಸಿಗಳ ಬೇಡಿಕೆಯ ಮೇರೆಗೆ ಅಲ್ಲಿಗೆ ಭೇಟಿ ನೀಡಿ ಟ್ಯಾಂಕ್‌ ಪರಿಶೀಲಿಸಿ ಮಾತನಾಡಿ, '' ಸುಮಾರು 40 ವರ್ಷಗಳ ಹಿಂದೆ ಈ ಟ್ಯಾಂಕ್‌ ಅನ್ನು ಪಟ್ಟಣ ಪಂಚಾಯಿತಿಯಿಂದ ನಿರ್ಮಿಸಲಾಗಿದೆ. ವಿರಾಜಪೇಟೆಗೆ ನಲ್ಲಿ ನೀರು ಪೂರೈಸುವ ಮುಖ್ಯ ಟ್ಯಾಂಕ್‌ ಇದಾಗಿದ್ದು, ಇದರ ದುರಸ್ತಿಗಿಂತ ಹೊಸ ಟ್ಯಾಂಕ್‌ ನಿರ್ಮಿಸುವುದು ಒಳ್ಳೆಯದು.

ಟ್ಯಾಂಕ್‌ 40 ಅಡಿ ಉದ್ದ, 15 ಅಡಿ ಅಗಲ ಹಾಗೂ 12 ಅಡಿ ಎತ್ತರ ಇದೆ. ನೆಲ ಮಟ್ಟದಿಂದ ಆರು ಅಡಿಗಳಷ್ಟು ಮೇಲಿನಿಂದ ನೀರು ನಿರಂತರ ಸೋರಿಕೆಯಾಗುತ್ತಿದೆ. ಜತೆಗೆ ಇದರ ಮೇಲಿನ ಭಾಗದ ಆರ್‌ಸಿಸಿ ಕಿತ್ತು ಹೋಗಿದ್ದು, ಅಪಾಯದಲ್ಲಿದೆ. ಶಿಥಿಲಾವಸ್ಥೆಯಲ್ಲಿ ಕುಸಿಯುವ ಹಂತದಲ್ಲಿರುವ ಟ್ಯಾಂಕ್‌ನಲ್ಲಿ ಶೇಖರಣೆಗೊಂಡ ಶೇ. 40ರಷ್ಟು ನೀರು ಸೋರಿಕೆಯಿಂದ ವ್ಯರ್ಥವಾಗುತ್ತಿದೆ. ಈ ಟ್ಯಾಂಕ್‌ ಏನಾದರು ಕುಸಿದರೆ ಇಡೀ ಪಟ್ಟಣಕ್ಕೆ ಕುಡಿಯುವ ನೀರಿನ ಪೂರೈಕೆ ಸ್ಥಗಿತವಾಗುತ್ತದೆ. ಹಾಗಾಗಿ ಪಟ್ಟಣದ ಜನತೆಗೆ ನಿರಂತರವಾಗಿ ನೀರು ಪೊರೈಕೆಗೆ ಹೊಸ ಟ್ಯಾಂಕ್‌ ಸೌಲಭ್ಯದ ಅಗತ್ಯ ಇದ್ದು, ತಕ್ಷ ಣ ಹಣ ಬಿಡುಗಡೆಮಾಡಿ ಕಾಮಗಾರಿ ಆರಂಭಿಸಬೇಕು,'' ಎಂದು ಒತ್ತಾಯಿಸಿದರು.

ಪಕ್ಷ ದ ನಗರ ಸಮಿತಿ ಅಧ್ಯಕ್ಷ ಪಿ.ಎ.ಮಂಜುನಾಥ್‌ ಮತ್ತಿತರರು ಹಾಜರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ