ಆ್ಯಪ್ನಗರ

ಎಸಿಬಿ ಬಲೆಗೆ ಬಿದ್ದವರ ಅಮಾನತಿಗೆ ಸೂಚನೆ: ಸಾರಾ

ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಮಾಯಾದೇವಿ ಗಲಾಗಲಿ ಹಾಗೂ ಗುಮಾಸ್ತ ಕೆ.ಬಿ ಮೋಹನ್‌ ಅವರನ್ನು ಅಮಾನತುಗೊಳಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಪ್ರವಾಸೋದ್ಯಮ ಸಚಿವ ಸಾ.ರಾ ಮಹೇಶ್‌ ಹೇಳಿದರು.

Vijaya Karnataka 17 Nov 2018, 5:00 am
ಮಡಿಕೇರಿ: ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಮಾಯಾದೇವಿ ಗಲಾಗಲಿ ಹಾಗೂ ಗುಮಾಸ್ತ ಕೆ.ಬಿ ಮೋಹನ್‌ ಅವರನ್ನು ಅಮಾನತುಗೊಳಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಪ್ರವಾಸೋದ್ಯಮ ಸಚಿವ ಸಾ.ರಾ ಮಹೇಶ್‌ ಹೇಳಿದರು.
Vijaya Karnataka Web
ಎಸಿಬಿ ಬಲೆಗೆ ಬಿದ್ದವರ ಅಮಾನತಿಗೆ ಸೂಚನೆ: ಸಾರಾ


ಮಡಿಕೇರಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಮಾಯಾದೇವಿ ಗಲಾಗಲಿ ಹಾಗೂ ಗುಮಾಸ್ತ ಲಂಚ ಪಡೆಯಲು ಮುಂದಾಗಿರುವುದು ತಪ್ಪು. ಈ ಭಾಗದ ಜನರು ಈಗಾಗಲೇ ಸಮಸ್ಯೆಯಲ್ಲಿದ್ದಾರೆ. ಲಂಚ ಪಡೆಯಲು ಮುಂದಾದ ಇವರನ್ನು ಅಮಾನತುಗೊಳಿಸಲು ಸೂಚಿಸಲಾಗಿದೆ ಎಂದರು. ಮಾತ್ರವಲ್ಲದೇ ಸಾರ್ವಜನಿಕರಿಗೆ ನೋವು ನೀಡುವ ಕೆಲಸ ಯಾರೇ ಮಾಡಿದರೂ ಅವರ ವಿರುದ್ಧ ನಿರ್ದಾಕ್ಷ್ಯೀಣ ಕ್ರಮ ಕೈಗೊಳ್ಳುದಾಗಿ ಎಚ್ಚರಿಕೆ ನೀಡಿದರು.

ಜರ್ನಾದನ ರೆಡ್ಡಿ ಜೈಲಿನಿಂದ ಬಿಡುಗಡೆಯಾದ ನಂತರ ಮುಖ್ಯಮಂತ್ರಿ ಕುಮಾರಸ್ವಾಮಿ ದ್ವೇಷ ರಾಜಕರಣದಿಂದ ಈ ರೀತಿ ಮಾಡುತ್ತಿದ್ದಾರೆ ಎಂದು ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಸಾ.ರಾ. ಮಹೇಶ್‌, ತಪ್ಪು ಮಾಡಿದವರು ಶಿಕ್ಷೆಯನ್ನು ತಪ್ಪಿಸಲು ಸಾಧ್ಯವಿಲ್ಲ. ರೆಡ್ಡಿ ತಮ್ಮನ್ನು ತಾವು ಪುಣ್ಯಕೋಟಿ ಎಂದು ಹೇಳಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.

ಮೈಸೂರು ಮೇಯರ್‌ ಸ್ಥಾನದ ಚುನಾವಣೆ ವಿಷಯವಾಗಿ ಬೆಳಗ್ಗೆಯಿಂದ ರಾಷ್ಟ್ರೀಯ ನಾಯಕ ದೇವೆಗೌಡ ಹಾಗೂ ಹಲವು ನಾಯಕರೊಂದಿಗೆ ಚರ್ಚೆ ನಡೆಸಿದ್ದೇವೆ. ಮುಖ್ಯಮಂತ್ರಿಗಳಿಗೂ ಈ ವಿಷಯದ ಬಗ್ಗೆ ಮಾಹಿತಿ ನೀಡಲಾಗಿದೆ. ಮೊದಲು ಮೇಯರ್‌ ಆಗುವವರು ಎರಡು ವರ್ಷ, ನಂತರ ಮೂರು ವರ್ಷದ ಅವಧಿ ನೀಡಲಾಗುತ್ತದೆ. ಆದರೆ ಮೊದಲು ಹಾಗೂ ನಂತರ ಮೇಯರ್‌ ಆಗುವವರು ಯಾರು ಎಂಬುದನ್ನು ಮಂಗಳೂರಿನಲ್ಲಿರುವ ರಾಷ್ಟ್ರೀಯ ನಾಯಕ ದೇವೆಗೌಡರು ನಿರ್ಧರಿಸುತ್ತಾರೆ. ರಾಜ್ಯದಲ್ಲಿ ಸಂಮಿಶ್ರ ಸರಕಾರ ಅಧಿಕಾರದಲ್ಲಿರುದರಿಂದ ಸ್ಥಳೀಯವಾಗಿ ನಾವು ಯಾವುದೇ ತೀರ್ಮಾನವನ್ನು ಕೈಗೊಳ್ಳುವಂತಿಲ್ಲ. ರಾಷ್ಟ್ರೀಯ ನಾಯಕರ ತೀರ್ಮಾನವೇ ಅಂತಿಮ ಎಂದರು.

ಸಚಿವರ ಹೆಸರು ಹೇಳಿಕೊಂಡು ಲಕ್ಷ ರೂ. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯವರೊಂದಿಗೆ ಚರ್ಚೆ ನಡೆಸಲಾಗಿದ್ದು, ವಂಚನೆ ಮಾಡಿದವರ ಮೇಲೆ ನಿರ್ದಾಕ್ಷ್ಯಿಣ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ