ಆ್ಯಪ್ನಗರ

ಪುತ್ತರಿ ನಮ್ಮೆ ಆಚರಣೆ

ಕೊಡವ ನ್ಯಾಷನಲ್‌ ಕೌನ್ಸಿಲ್‌ ವತಿಯಿಂದ ಪುತ್ತರಿ ನಮ್ಮೆ ಆಚರಣೆ ಸಾರ್ವತ್ರಿಕವಾಗಿ ನಡೆಯಿತು.

Vijaya Karnataka 24 Nov 2018, 3:53 pm
ಕುಶಾಲನಗರ: ಕೊಡವ ನ್ಯಾಷನಲ್‌ ಕೌನ್ಸಿಲ್‌ ವತಿಯಿಂದ ಪುತ್ತರಿ ನಮ್ಮೆ ಆಚರಣೆ ಸಾರ್ವತ್ರಿಕವಾಗಿ ನಡೆಯಿತು.
Vijaya Karnataka Web MDK-23 kus 02


ಕೊಡವ ನ್ಯಾಷನಲ್‌ ಕೌನ್ಸಿಲ್‌ ಅಧ್ಯಕ್ಷ ಎನ್‌.ಯು ನಾಚಪ್ಪ ಅವರ ನೇತೃತ್ವದಲ್ಲಿ ಕುಶಾಲನಗರ ಸಮೀಪ ಚಿಕ್ಕಬೆಟ್ಟಗೇರಿ ಗ್ರಾಮದಲ್ಲಿರುವ ನಂದಿನೆರವಂಡ ಉತ್ತಪ್ಪನವರ ಗದ್ದೆಯಲ್ಲಿ ಸಾಮೂಹಿಕ ಕದಿರು ತೆಗೆಯುವ ಮೂಲಕ ಸಾಂಪ್ರದಾಯಿಕ ಆಚರಣೆ ನಡæಯಿತು.

ಮನೆಯ ನೆಲ್ಲಕ್ಕಿ ಅಡಿಯಲ್ಲಿ 5 ಬಗೆಯ ಮರದ ಎಲೆಗಳಿಂದ ನೆರೆ ಕಟ್ಟಿದ ನಂತರ ಗುರುಕಾರಣರಿಗೆ ನೈವೇದ್ಯ ಅರ್ಪಿಸಿ ನಮನ ಸಲ್ಲಿಸಿ ಮೆರವಣಿಗೆಯಲ್ಲಿ ತೆರಳಿದ ಸಿಎನ್‌ಸಿ ಸದಸ್ಯರು ಸಾಂಪ್ರದಾಯಿಕ ಕೊಡವ ಓಲಗದೊಂದಿಗೆ ಗದ್ದೆಗೆ ತೆರಳಿದರು. ಸಿಎನ್‌ಸಿ ಅಧ್ಯಕ್ಷ ಎನ್‌.ಯು. ನಾಚಪ್ಪ ಸಾಂಪ್ರದಾಯಿಕವಾಗಿ ಸಕಲ ವಿಧಿವಿಧಾನಗಳೊಂದಿಗೆ 'ಪೊಲಿ ಪೊಲಿಯೆ ದೇವಾ ಪೊಲಿಯೇ ಬಾ' ಉದ್ಗಾರದೊಂದಿಗೆ ಕದಿರು ತೆಗೆದರು.

ಈ ಸಂದರ್ಭ ಸಾಂಪ್ರದಾಯಿಕ ಉಡುಪಿನಲ್ಲಿದ್ದ ಸಿಎನ್‌ಸಿ ಸದಸ್ಯರು ದೇವರಿಗೆ ನಮಿಸಿ ಕದಿರಿನೊಂದಿಗೆ ಮೆರವಣಿಗೆ ತೆರಳಿ ಕಣದಲ್ಲಿ ಕದಿರನ್ನು ಇಟ್ಟು ಅಲ್ಲಿ ಪರೆಯಕಳಿ, ಕೋಲಾಟ, ವಾಲಗತ್ತಾಟ್‌, ದುಡಿಕೊಟ್ಟ್‌ ಪಾಟ್‌ ನಡæಸಿದರು. ನಂತರ ಕದಿರನ್ನು ನೆಲ್ಲಕ್ಕಿಯಡಿಯಲ್ಲಿಟ್ಟು ದೇವರಿಗೆ ಪ್ರಾರ್ಥಿಸಿದರು.

ಕದಿರು ವಿತರಣೆಯೊಂದಿಗೆ ಮನೆಯಲ್ಲಿ ಪ್ರಮುಖ ಭಾಗಗಳಾದ ಮುಖ್ಯದ್ವಾರ, ಕಣಜ, ಅಡಿಗೆಮನೆ, ನೀರಿನ ಬಾವಿ, ಕೊಟ್ಟಿಗೆ ಮತ್ತಿತರ ಜಾಗಗಳಲ್ಲಿ ಕದಿರು ಕಟ್ಟಲಾಯಿತು. ನಂತರ ಕೊಡವ ಪದ್ಧತಿಯ ಸಾಂಪ್ರದಾಯಿಕ ಅಡುಗೆಯೊಂದಿಗೆ ಸಹಭೋಜನ ಕಾರ್ಯಕ್ರಮ ನಡೆಯಿತು.

ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ನಾಚಪ್ಪ, ಹುತ್ತರಿ ಅಂಗವಾಗಿ ಕೊಡಗು ಜಿಲ್ಲೆಗೆ ಸೀಮಿತಗೊಳಿಸಿ ಸಾರ್ವತ್ರಿಕ ರಜೆ ಘೋಷಿಸಲಾಗಿದೆ. ಮುಂದಿನ ಹುತ್ತರಿಯಿಂದ ರಾಜ್ಯಮಟ್ಟದ ರಜೆ ಘೋಷಣೆಗೆ ಸರಕಾರ ಕ್ರಮಕೈಗೊಳ್ಳಬೇಕಿದೆ ಎಂದು ಆಗ್ರಹಿಸಿದರು.

ಕೊಡಗು ಜಿಲ್ಲೆಯಲ್ಲಿ ಉಂಟಾದ ಪ್ರಕೃತಿ ವಿಕೋಪದಲ್ಲಿ ಸಂತ್ರಸ್ತರಾದವರಿಗೆ ಹರಿದು ಬಂದ ಪರಿಹಾರ ನಿಧಿ ವ್ಯಾಪಕ ಪ್ರಮಾಣದಲ್ಲಿ ದುರುಪಯೋಗಗೊಂಡಿದೆ. ಇದೀಗ ಸಂತ್ರಸ್ಥರ ಕಲ್ಯಾಣಕ್ಕಾಗಿ ಬಿಡುಗಡೆಗೊಂಡ ಅನುದಾನವನ್ನು ಇತರೆಡೆಗಳಿಗೆ ಬಳಸುವ ಹುನ್ನಾರ ನಡೆಯುತ್ತಿದ್ದು ಸಂಪೂರ್ಣ ಅನುದಾನ ಕೊಡಗು ಜಿಲ್ಲೆಗೆ ಬಳಕೆಯಾಗಬೇಕಿದೆ ಎಂದು ಅವರು ಆಗ್ರಹಿಸಿದರು.

ಈ ಸಂದರ್ಭ ಸಿಎನ್‌ಸಿ ಪ್ರಮುಖರಾದ ನಂದಿನೆರವಂಡ ವಿಜು, ಉತ್ತಪ್ಪ, ನಿಶಾ, ಬೀನಾ, ರೇಖಾ, ಅಪ್ಪಣ್ಣ, ಶಶಾಂಕ್‌, ಬೋಪಣ್ಣ, ಅನಿರುದ್ದ್‌, ಕಲಿಯಂಡ ಪ್ರಕಾಶ್‌, ಕಾಂಡೇರ ಸುರೇಶ್‌, ಪುಲ್ಲೇರ ಬೋಪಯ್ಯ, ಕನ್ನಿಕೆ, ಚೆಂಬಂಡ್‌ ಜನತ್‌ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ