ಆ್ಯಪ್ನಗರ

ರಾಮೇಶ್ವರ ಸಹಕಾರ ಸಂಘಕ್ಕೆ 16 ಲಕ್ಷ ರೂ. ಲಾಭ

ಕೂಡುಮಂಗಳೂರು ರಾಮೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2017-18ನೇ ಸಾಲಿನಲ್ಲಿ 16 ಲಕ್ಷ ರೂ. ಲಾಭಗಳಿಸಿದೆ ಎಂದು ರಾಮೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಕೆ.ಹೇಮಂತ್‌ಕುಮಾರ್‌ ತಿಳಿಸಿದರು.

Vijaya Karnataka 25 Jun 2018, 5:00 am
ಕುಶಾಲನಗರ: ಕೂಡುಮಂಗಳೂರು ರಾಮೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2017-18ನೇ ಸಾಲಿನಲ್ಲಿ 16 ಲಕ್ಷ ರೂ. ಲಾಭಗಳಿಸಿದೆ ಎಂದು ರಾಮೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಕೆ.ಹೇಮಂತ್‌ಕುಮಾರ್‌ ತಿಳಿಸಿದರು.
Vijaya Karnataka Web 16 lakhs profit for rameshwara co operative society
ರಾಮೇಶ್ವರ ಸಹಕಾರ ಸಂಘಕ್ಕೆ 16 ಲಕ್ಷ ರೂ. ಲಾಭ


ಸಂಘದ ವಾರ್ಷಿಕ ಮಹಾಸಭೆ ಅಧ್ಯಕ್ಷ ತೆಯನ್ನು ವಹಿಸಿ ಮಾತನಾಡಿದ ಅವರು, ಸಂಘದ ಬೆಳವಣಿಗೆಗೆ ಹಾಗೂ ಕಳೆದ ವಾರ್ಷಿಕ ಸಭೆಯಲ್ಲಿ ಕೈಗೊಂಡ ತೀರ್ಮಾನಗಳನ್ನು ಅನುಷ್ಠಾನಗೊಳಿಸುವುದರ ಮೂಲಕ ರೈತರ ಪ್ರಗತಿಗೆ ಸಹಕಾರಿಯಾಗಿದ್ದೇವೆ. ಈ ಸಾಲಿನಿಂದ ರೈತರ ಆರ್‌ಟಿಸಿಗೆ ಅನುಗುಣವಾಗಿ ವಾರ್ಷಿಕ ಶೇ.15ರಷ್ಟು ದರದಲ್ಲಿ ಹೊಸದಾಗಿ ಗೊಬ್ಬರ ಸಾಲ ನೀಡಲು ಕ್ರಮಕೈಗೊಳ್ಳಲಾಗಿದೆ. ಸಂಘವು 3632 ಸದಸ್ಯರನ್ನು ಹೊಂದಿದ್ದು, ಇದುವರೆಗೂ ಸದಸ್ಯರಿಗೆ ವಿವಿಧ ರೀತಿಯ ಸಾಲಗಳನ್ನು ವಿತರಿಸಲಾಗಿದೆ ಎಂದರು.

ವಾರ್ಷಿಕ ಮಹಾಸಭೆಯಲ್ಲಿ ಚರ್ಚೆಯಾದಂತೆ ಕಲ್ಯಾಣ ಮಂಟಪದ ದುರಸ್ತಿ ಹಾಗೂ ರೈತ ಸದಸ್ಯರಿಗೆ ಅನುಕೂಲವಾಗುವ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲು ಮಹಾಸಭೆ ಅನುಮತಿ ನೀಡಿದ್ದು, ಈ ಮೂಲಕ ಸಂಘದ ಅಭಿವೃದ್ಧಿಗೆ ಕಾರ್ಯೋನ್ಮುಖರಾಗಿದ್ದೇವೆ ಎಂದರು.

ಸಂಘದ ಸದಸ್ಯರಾದ ಕೆ.ಸಿ.ನಂಜುಂಡಸ್ವಾಮಿ, ಕೆ.ಆರ್‌.ರಂಗಸ್ವಾಮಿ, ತಮ್ಮಣ್ಣೇಗೌಡ, ಕೆ.ಕೆ.ಸೋಮಣ್ಣ, ಕೆ.ಬಿ.ಸಣ್ಣಪ್ಪ ವಾರ್ಷಿಕ ಮಹಾಸಭೆಯಲ್ಲಿ ವಿವಿಧ ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು.

ಸಭೆಯಲ್ಲಿ ಹಿಂದಿನ ಸಾಲಿನ ವಾರ್ಷಿಕ ವರದಿ ಮಂಡಿಸಿ, 2017-18ನೇ ಸಾಲಿನ ಲೆಕ್ಕ ಪರಿಶೋಧನಾ ವರದಿ ಮತ್ತು ಅದರ ಮೇಲಿನ ಸಮಿತಿಯ ವರದಿ ಪರಿಶೀಲನೆ ನಡೆಯಿತು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಸಂಘದ ಸದಸ್ಯರ ಮಕ್ಕಳಿಗೆ ಬಹುಮಾನ ವಿತರಿಸಿ, ಪ್ರೋತ್ಸಾಹ ಧನ ನೀಡಲಾಯಿತು.

ಕೂಡಿಗೆ ಗ್ರಾ.ಪಂ. ಅಧ್ಯಕ್ಷೆ ಪ್ರೇಮಲೀಲಾ, ತಾ.ಪಂ. ಸದಸ್ಯ ಗಣೇಶ್‌, ಸಂಘದ ಉಪಾಧ್ಯಕ್ಷ ವಿ.ಎಲ್‌.ಪ್ರಕಾಶ್‌, ನಿರ್ದೇಶಕರಾದ ಎಸ್‌.ಎನ್‌.ರಾಜಾರಾವ್‌, ಕೆ.ಕೆ.ಭೋಗಪ್ಪ, ಟಿ.ಕೆ.ವಿಶ್ವನಾಥ್‌, ಟಿ.ಪಿ.ಹಮೀದ್‌, ಕೆ.ಮಹೇಶ್‌ಕಾಳಪ್ಪ, ಕೆ.ಜಿ.ಮಂಜಯ್ಯ, ಎಚ್‌.ಆರ್‌.ಪಾರ್ವತಮ್ಮ, ಕೆ.ಜೆ.ಮೋಜಿನಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಪಿ.ಮೀನಾ ಪಾಲ್ಗೊಂಡಿದ್ದರು. ಕೆ.ಕೆ.ಭೋಗಪ್ಪ , ಎಸ್‌.ಎನ್‌.ರಾಜಾರಾವ್‌ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ