ಆ್ಯಪ್ನಗರ

ಎರಡೂವರೆ ಲಕ್ಷ ರೂ. ಮೌಲ್ಯದ ಬೀಟೆ ಮರ ವಶ

ಅಕ್ರಮ ಸಾಗಣೆಗೆ ಯತ್ನಿಸುತ್ತಿದ್ದ 2.5 ಲಕ್ಷ ರೂ. ಮೌಲ್ಯದ ಬೀಟೆ ಮರವನ್ನು ವಾಹನಗಳ ಸಮೇತ ಅರಣ್ಯ ಇಲಾಖೆ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ.

Vijaya Karnataka Web 1 May 2019, 5:00 am
ಶನಿವಾರಸಂತೆ: ಅಕ್ರಮ ಸಾಗಣೆಗೆ ಯತ್ನಿಸುತ್ತಿದ್ದ 2.5 ಲಕ್ಷ ರೂ. ಮೌಲ್ಯದ ಬೀಟೆ ಮರವನ್ನು ವಾಹನಗಳ ಸಮೇತ ಅರಣ್ಯ ಇಲಾಖೆ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ.
Vijaya Karnataka Web 2 5 laksh worh log confiscated
ಎರಡೂವರೆ ಲಕ್ಷ ರೂ. ಮೌಲ್ಯದ ಬೀಟೆ ಮರ ವಶ


ಮಂಗಳವಾರ ಬೆಳಗಿನ ಜಾವ 3ರ ಸುಮಾರಿಗೆ ಸೋಮವಾರಪೇಟೆ ತಾಲೂಕಿನ ನಿಡ್ತ ಸಮೀಪದ ಚೌಡೇನಹಳ್ಳಿ ಗ್ರಾಮದ ಕಾಫಿ ತೋಟವೊಂದರಲ್ಲಿ ಬೀಟೆ ಮರವನ್ನು ಕಡಿದು ಅದನ್ನು 5 ತುಂಡುಗಳನ್ನಾಗಿ ಮಾಡಿ ಎರಡು ಓಮ್ನಿ ವಾಹನದಲ್ಲಿ ಅರಕಲಗೂಡು ತಾಲೂಕಿನ ಕೊಣನೂರು ಮಾರ್ಗವಾಗಿ ಹಾಸನಕ್ಕೆ ಸಾಗಣೆ ಮಾಡಲು ತಯಾರಿ ನಡೆಸುತ್ತಿರುವ ಮಾಹಿತಿ ಮೇರೆಗೆ ಶನಿವಾರಸಂತೆ ಆರ್‌ಎಫ್‌ಒ ಕೆ.ಕೊಟ್ರೇಶ್‌ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಆ ವೇಳೆ ಆರೋಪಿಗಳು ಪರಾರಿಯಾಗಿದ್ದಾರೆ. ಹೊಸೂರಿನ ಅಣ್ಣಯ್ಯ ಮತ್ತು ಗುಂಡೂರಾವ್‌ ಬಡಾವಣೆಯ ಜೈಸಸ್‌ ಪ್ರಮುಖ ಆರೋಪಿಗಳಾಗಿದ್ದು, ನಾಟಾ ಸಮೇತ ಸಾಗಣೆಗೆ ಬಳಸಿದ 2 ವಾಹನಗಳನ್ನು ವಶ ಪಡಿಸಿಕೊಳ್ಳಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಉಪ ವಲಯಾಧಿಕಾರಿ ಎಚ್‌.ಎಸ್‌.ಶಿವಕುಮಾರ್‌, ಅರಣ್ಯ ರಕ್ಷ ಕರಾದ ಲೋಹಿತ್‌, ಜಯಕುಮಾರ್‌, ಅರಣ್ಯ ವೀಕ್ಷ ಕರಾದ ರಮೇಶ್‌, ನವೀನ್‌, ಶೇಖರ್‌, ಹರೀಶ್‌, ಭರತ್‌ ಪಾಲ್ಗೊಂಡಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ