ಆ್ಯಪ್ನಗರ

ವಿರಾಜಪೇಟೆಯಲ್ಲಿ ದರೋಡೆಗೆ ಹೊಂಚು ಹಾಕುತ್ತಿದ್ದ 9 ಮಂದಿ ಬಂಧನ

ಖಾಸಗಿ ಹೋಟೆಲ್ ಬಳಿ ದರೋಡೆಗೆ ಹೊಂಚು ಹಾಕುತ್ತಿದ್ದ ಒಂಬತ್ತು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿದ್ದ ಎರಡೂ ವಾಹನಗಳಲ್ಲಿ ಮೂರು ಕಬ್ಬಿಣದ ರಾಡು, ಒಂದು ಚಾಕು, ಲಾಂಗ್‌ ಮಚ್ಚು, ಎರಡು ತಲವಾರ್‌, ಕಾರದ ಪುಡಿ ಮತ್ತು ಸುಮಾರು ಎಂಟು ಕೆಜಿಯಷ್ಟು ಪಾದರಸ ಇಟ್ಟುಕೊಂಡು ದರೋಡೆಗೆ ಹೊಂಚು ಹಾಕುತ್ತಿದ್ದರು ಎಂಬುದು ತಿಳಿದು ಬಂದಿದೆ.

Vijaya Karnataka Web 7 Sep 2020, 9:33 am
ವಿರಾಜಪೇಟೆ: ಕೇರಳದ ರಸ್ತೆಯಲ್ಲಿರುವ ಖಾಸಗಿ ಹೋಟೆಲ್‌ ಬಳಿ ದರೋಡೆಗೆ ಹೊಂಚು ಹಾಕುತ್ತಿದ್ದ ಒಂಬತ್ತು ಆರೋಪಿಗಳನ್ನು ನಗರ ಪೊಲೀಸರು ಬಂಧಿಸಿದ್ದು, ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ.
Vijaya Karnataka Web ಬಂಧನ
ಸಾಂದರ್ಭಿಕ ಚಿತ್ರ


ಇವರಲ್ಲಿ ಇಬ್ಬರು ಕೇರಳ ಹಾಗೂ ಏಳು ಮಂದಿ ಬೆಂಗಳೂರಿನವರು. ಕೇರಳಕ್ಕೆ ತೆರಳುವ ರಸ್ತೆ ಬದಿ ಬಿಳಿ ಮತ್ತು ಕೆಂಪು ಬಣ್ಣದ ಎರಡು ಕಾರುಗಳು ನಿಂತಿದ್ದು, ಪೊಲೀಸ್‌ ವಾಹನ ಕಂಡು ತರಾತುರಿಯಲ್ಲಿ ಹೊರಡಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ವಾಹನಗಳನ್ನು ಹಿಂಬಾಲಿಸಿ ತಪಾಸಣೆ ಮಾಡಿದಾಗ ಎರಡೂ ವಾಹನಗಳಲ್ಲಿ ಮೂರು ಕಬ್ಬಿಣದ ರಾಡು, ಒಂದು ಚಾಕು, ಲಾಂಗ್‌ ಮಚ್ಚು, ಎರಡು ತಲವಾರ್‌, ಕಾರದ ಪುಡಿ ಮತ್ತು ಸುಮಾರು ಎಂಟು ಕೆಜಿಯಷ್ಟು ಪಾದರಸ ಇಟ್ಟುಕೊಂಡು ದರೋಡೆಗೆ ಹೊಂಚು ಹಾಕುತ್ತಿದ್ದರು ಎಂಬುದು ತಿಳಿದು ಬಂದಿದೆ.

ಕೊರೊನಾದಿಂದ ಬಂದ್‌ ಆಗಿದ್ದ ರಸ್ತೆ ಸಂಚಾರಕ್ಕೆ ತೆರೆಯುತ್ತಿದ್ದಂತೆ ಖದೀಮರು ಈ ರಸ್ತೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಗುಂಪಿನ ಹಿಂದೆ ಬೃಹತ್‌ ಜಾಲವಿರಬಹದು ಎಂದು ಪೊಲೀಸ್‌ ಠಾಣಾಧಿಕಾರಿ ಭೋಜಪ್ಪ ಶಂಕಿಸಿದ್ದಾರೆ.

ಸದ್ಯಕ್ಕೆ ಇವರನ್ನು ವಿರಾಜಪೇಟೆ ನ್ಯಾಯಾಧೀಶರ ಆದೇಶ ಪಡೆದು ಹದಿನೈದು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಒಬ್ಬ ವ್ಯಕ್ತಿಗೆ ಕೊರೊನಾ ಪಾಸಿಟಿವ್‌ ಇರುವ ಹಿನ್ನೆಲೆ ಆತನನ್ನು ಮಡಿಕೇರಿ ಕೊರೊನಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಗರ ಠಾಣಾಧಿಕಾರಿ ಭೋಜಪ್ಪ, ಎನ್‌ ಸಿ ಲೋಕೇಶ್‌, ಮುಸ್ತಫಾ, ಸಂತೋಷ, ಗಿರೀಶ್‌, ಮಧು, ಮುನಿರ್‌, ರಜನ್‌, ಲೋಹಿತ್‌, ಮಲ್ಲಿಕಾರ್ಜುನ, ಚಾಲಕ ಯೋಗೇಶ್‌ ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ