ಆ್ಯಪ್ನಗರ

ಜಾತಿ ಪತ್ರ ರದ್ದತಿಗೆ ತಡೆಯಾಜ್ಞೆ: ಜಿಪಂ ಸದಸ್ಯೆ ಮಂಜುಳಾ ಹೇಳಿಕೆ

ಕುಶಾಲನಗರ: ಜಿಪಂ ಚುನಾವಣಾ ಸಂದರ್ಭ ಸಲ್ಲಿಸಿದ್ದ ಜಾತಿ ದೃಢೀಕರಣ ಪತ್ರ ನಕಲಿ ಎಂದು ಜಾತಿ ದೃಢೀಕರಣ ಪತ್ರ ರದ್ದತಿಗೆ ಕೊಡಗು ಜಿಲ್ಲೆಯ ಉಪ ವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ನೀಡಿದ್ದ ತೀರ್ಪಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ ಎಂದು ಕೂಡಿಗೆ ಜಿಪಂ ಕ್ಷೇತ್ರದ ಸದಸ್ಯೆ ಕೆ.ಆರ್.ಮಂಜುಳಾ ತಿಳಿಸಿದರು.

ವಿಕ ಸುದ್ದಿಲೋಕ 23 Jul 2016, 4:04 am
ಕುಶಾಲನಗರ: ಜಿಪಂ ಚುನಾವಣಾ ಸಂದರ್ಭ ಸಲ್ಲಿಸಿದ್ದ ಜಾತಿ ದೃಢೀಕರಣ ಪತ್ರ ನಕಲಿ ಎಂದು ಜಾತಿ ದೃಢೀಕರಣ ಪತ್ರ ರದ್ದತಿಗೆ ಕೊಡಗು ಜಿಲ್ಲೆಯ ಉಪ ವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ನೀಡಿದ್ದ ತೀರ್ಪಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ ಎಂದು ಕೂಡಿಗೆ ಜಿಪಂ ಕ್ಷೇತ್ರದ ಸದಸ್ಯೆ ಕೆ.ಆರ್.ಮಂಜುಳಾ ತಿಳಿಸಿದರು.
Vijaya Karnataka Web abolition of caste injunction letter zilla panchayat member manjula statement
ಜಾತಿ ಪತ್ರ ರದ್ದತಿಗೆ ತಡೆಯಾಜ್ಞೆ: ಜಿಪಂ ಸದಸ್ಯೆ ಮಂಜುಳಾ ಹೇಳಿಕೆ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಪತ್ರಿಕೆಗಳಲ್ಲಿ ಪ್ರಕಟಗೊಂಡ ವಿಚಾರ ಹಾಗೂ ಕಾಂಗ್ರೆಸ್ಸಿನ ಪದಾಧಿಕಾರಿಗಳು ಆರೋಪಿಸಿರುವ ಸಂಗತಿಯು ಸತ್ಯಕ್ಕೆ ದೂರವಾದ ಮಾತಾಗಿದ್ದು, ನಾನು ಪ್ರಾಥಮಿಕ ಹಂತದಿಂದ ನಾಯಕ ಜಾತಿಗೆ ಸೇರಿರುವ ಜಾತಿ ದಢೀಕರಣ (ಎಸ್‌ಟಿ) ಪತ್ರದ ಮುಖೇನ ವ್ಯಾಸಂಗ ಮಾಡಿರುತ್ತೇನೆ. ಅಲ್ಲದೆ, ಇದುವರೆಗೆ ನಾನು ಯಾವುದೇ ಸರಕಾರಿ ಉದ್ಯೋಗದಲ್ಲಿ ಇರಲಿಲ್ಲ. ಅಲ್ಲದೆ, ಯಾವುದೆ ಸರಕಾರಿ ಉದ್ಯೋಗಕ್ಕೆ ಅರ್ಜಿಯನ್ನು ಹಾಕಿಲ್ಲ. ಮೂಲತಹ ನಾನು ನಾಯಕ ಜನಾಂಗದಲ್ಲೇ ಬೆಳೆದು ಬಂದಿರುತ್ತೇನೆ ಎಂದು ಹೇಳಿದರು.
ರಾಜಕೀಯ ವಿಷಯವಾಗಿ ಇಲ್ಲದಲ್ಲದ ಆರೋಪ ಮಾಡುತ್ತಿರುವುದು ಸರಿಯಲ್ಲ. ಈ ರೀತಿಯ ಆಪಾದನೆ ಮಾಡುತ್ತಿರುವ ವ್ಯಕ್ತಿಗಳು ನನ್ನ ಹೆಸರಿನಲ್ಲಿ ಜಾತಿ ದಢೀಕರಣ ಪತ್ರಕ್ಕೆ ಅರ್ಜಿ ಸಲ್ಲಿಸುವ ಸಂದರ್ಭ ನನ್ನ ನಕಲಿ ಸಹಿಯನ್ನು ಬಳಕೆ ಮಾಡಿರುವುದು ಮತ್ತು ಉದ್ಯೋಗಕ್ಕಾಗಿ ಜಾತಿ ದಢೀಕರಣ ಪತ್ರಕ್ಕಾಗಿ ಕೋರಿರುವ ಅರ್ಜಿಯು ನಕಲಿಯಾಗಿ ನನ್ನ ಮೇಲೆ ಸುಳ್ಳು ಆಪಾದನೆ ಮಾಡಿ ದಕ್ಕೆಯನ್ನುಂಟು ಮಾಡುವ ಕೆಲಸ ಮಾಡುತ್ತಿದ್ದಾರೆ. ಈ ವಿಷಯವಾಗಿ ನಾನು ಯಾವುದೇ ರೀತಿಯ ಜಾತಿ ದಢೀಕರಣ ಪತ್ರಕ್ಕೆ ಅರ್ಜಿ ಸಲ್ಲಿಸಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಗೋಷ್ಠಿಯಲ್ಲಿ ಕೊಡಗು ಜಿಲ್ಲಾ ಪರಿಶಿಷ್ಟ ಪಂಗಡದ ಅಧ್ಯಕ್ಷ ಎಸ್.ಎನ್.ರಾಜಾರಾವ್, ಸೋಮವಾರಪೇಟೆ ತಾಲೂಕು ಬಿಜೆಪಿ ಉಪಾಧ್ಯಕ್ಷ ಕೆ.ಕೆ.ಭೋಗಪ್ಪ, ತಾ.ಪಂ ಸದಸ್ಯ ಗಣೇಶ್, ಮುಳ್ಳುಸೋಗೆ ಗ್ರಾ.ಪಂ ಮಾಜಿ ಸದಸ್ಯ ಗಣಪತಿ ಸಿ.ಬಿ, ಕೊಡಗು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಗಣಿ ಪ್ರಸಾದ್, ಬಿಜೆಪಿ ಕಾರ್ಯಕರ್ತರುಗಳಾದ ಶಿವಪ್ಪ, ವಾಸುದೇವ್, ರಾಮಶೆಟ್ಟಿ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ