ಆ್ಯಪ್ನಗರ

ಪೊಲೀಸರ ಮೇಲೆ ಹಲ್ಲೆ ಆರೋಪ: ಗ್ರಾಪಂ ಸದಸ್ಯ, ಸಹೋದರನ ಸೆರೆ

ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಕರೆತಂದ ವೇಳೆ ಕರ್ತವ್ಯ ನಿರತ ಪೊಲೀಸ್‌ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಆರೋಪದ ಮೇರೆಗೆ ಗ್ರಾಪಂ ಸದಸ್ಯ ಹಾಗೂ ಆತನ ಸಹೋದನನ್ನು ಬಂಧಿಸಲಾಗಿದೆ.

Vijaya Karnataka 26 Feb 2019, 5:00 am
ಕುಶಾಲನಗರ (ಕೊಡಗು ಜಿಲ್ಲೆ): ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಕರೆತಂದ ವೇಳೆ ಕರ್ತವ್ಯ ನಿರತ ಪೊಲೀಸ್‌ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಆರೋಪದ ಮೇರೆಗೆ ಗ್ರಾಪಂ ಸದಸ್ಯ ಹಾಗೂ ಆತನ ಸಹೋದನನ್ನು ಬಂಧಿಸಲಾಗಿದೆ.
Vijaya Karnataka Web accused of assaulting police gp member brothers custody
ಪೊಲೀಸರ ಮೇಲೆ ಹಲ್ಲೆ ಆರೋಪ: ಗ್ರಾಪಂ ಸದಸ್ಯ, ಸಹೋದರನ ಸೆರೆ


ಕೂಡುಮಂಗಳೂರು ಗ್ರಾ.ಪಂ. ಸದಸ್ಯ ಸುರೇಶ ಮತ್ತು ಆತನ ಸಹೋದರ ಸ್ವಾಮಿ ಬಂಧಿತರು. ಇವರ ವಿರುದ್ಧ ಎರಡು ಪ್ರತ್ಯೇಕ ದೂರು ದಾಖಲಾಗಿದೆ.

ವಿವರ: ''ಮದ್ಯಪಾನ ಮಾಡಿದ್ದ ಆರೋಪಿಗಳಿಬ್ಬರೂ ನೆರೆಮನೆಯವರೊಂದಿಗೆ ಗಲಾಟೆ ಮಾಡಿದ್ದಲ್ಲದೆ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು ಎಂದು ರಮೇಶ್‌ ಎಂಬುವವರು ದೂರು ನೀಡಿದ್ದರು. ಈ ಮೇರೆಗೆ ವಿಚಾರಣೆಗೆ ಗ್ರಾಮಾಂತರ ಠಾಣೆಗೆ ಆರೋಪಿಗಳನ್ನು ಕರೆತರಲಾಗಿತ್ತು. ಬಳಿಕ ವೈದ್ಯ ಪರೀಕ್ಷೆಗೆ ಕರೆದೊಯ್ಯಲು ಮುಂದಾದಾಗ ಗ್ರಾ.ಪಂ. ಸದಸ್ಯ ಸುರೇಶ್‌, ತಾನು ಚುನಾಯಿತ ಜನಪ್ರತಿನಿಧಿಯಾಗಿದ್ದು ವೈದ್ಯ ಪರೀಕ್ಷೆಗೆ ಒಳಪಡಿಸಬಾರದು ಎಂದು ಆಕ್ಷೇಪ ವ್ಯಕ್ತಪಡಿಸಿ ತನ್ನ ಸಹೋದರ ಸ್ವಾಮಿ ಒಡಗೂಡಿ ಪೊಲೀಸ್‌ ಸಿಬ್ಬಂದಿ ಮಹೇಶ್‌ ಎಂಬುವವರ ಮೇಲೆ ಹಲ್ಲೆ ನಡೆಸಿದ್ದಾರೆ. ಮಹೇಶ್‌ ಮೂಗು ಮತ್ತು ತಲೆಗೆ ಗಾಯವಾಗಿದ್ದು, ಕುಶಾಲನಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕರ್ತವ್ಯಕ್ಕೆ ಹಾಜರಾಗಿದ್ದಾರೆ,'' ಎಂದು ಪೊಲೀಸರು ತಿಳಿಸಿದ್ದಾರೆ.

ಕೆ.ಸಿ.ರಮೇಶ್‌ ನೀಡಿದ ದೂರಿನ ಅನ್ವಯ ಹಾಗೂ ಕರ್ತವ್ಯ ನಿರತ ಪೊಲೀಸ್‌ ಮೇಲೆ ಹಲ್ಲೆಗೆ ಸಂಬಂಧಿಸಿದಂತೆ ಎರಡು ಮೊಕದ್ದಮೆ ದಾಖಲಿಸಿಕೊಳ್ಳಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ