ಆ್ಯಪ್ನಗರ

ಸಾಧಕರ ಆದರ್ಶ ಮೈಗೂಡಿಸಿಕೊಳ್ಳಿ

ಸಾಧಕ ಮಹಿಳೆಯರ ಆದರ್ಶಗಳನ್ನು ಮೈಗೂಡಿಸಿಕೊಂಡು, ಛಲ ಮತ್ತು ಗುರಿಯೊಂದಿಗೆ ಮುನ್ನೆಡೆದರೆ ಸಾಧನೆಯ ಮೆಟ್ಟಿಲೇರಬಹುದು ಎಂದು ಆಲೂರು ಸಿದ್ದಾಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ...

Vijaya Karnataka 9 Mar 2019, 5:00 am
ಸೋಮವಾರಪೇಟೆ: ಸಾಧಕ ಮಹಿಳೆಯರ ಆದರ್ಶಗಳನ್ನು ಮೈಗೂಡಿಸಿಕೊಂಡು, ಛಲ ಮತ್ತು ಗುರಿಯೊಂದಿಗೆ ಮುನ್ನೆಡೆದರೆ ಸಾಧನೆಯ ಮೆಟ್ಟಿಲೇರಬಹುದು ಎಂದು ಆಲೂರು ಸಿದ್ದಾಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾದ ಭಾರತಿ ಚಂದ್ರಶೆಟ್ಟಿ ಹೇಳಿದರು.
Vijaya Karnataka Web MDK-MDK8SPT1


ಮಹಿಳಾ ಸಹಕಾರ ಸಂಘದ ವತಿಯಿಂದ ಮಹಿಳಾ ಸಮಾಜದಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆಯ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಜ್ಞಾನದ ಹಿಂದೆ ಹೋದವರು ಜೀವನದಲ್ಲಿ ಯಶಸ್ಸು ಕಾಣುತ್ತಾರೆ. ಹೆಣ್ಣಿಗೆ ಶಿಕ್ಷ ಣ ನೀಡಿದರೆ, ಇಡೀ ಕುಟುಂಬ ವಿದ್ಯಾವಂತರಾಗುತ್ತಾರೆ. ಪ್ರತಿಯೊಬ್ಬ ಮಹಿಳೆಯರು ಮಕ್ಕಳ ಶಿಕ್ಷ ಣಕ್ಕೆ ಪ್ರಮುಖ ಅದ್ಯತೆ ನೀಡಬೇಕು ಎಂದು ಹೇಳಿದರು.

ದೇಶಸೇವೆ ದೇವರ ಕೆಲಸ. ತನ್ನ ಪತಿ, ತನ್ನ ಮಗನನ್ನು ಸೈನಿಕರನ್ನಾಗಿ ಮಾಡಿ, ತಾನು ಒಂಟಿಯಾಗಿ ಇಡೀ ಕುಟುಂಬವನ್ನು ಸಲುಹುವ ಹೆಣ್ಣು ನಿಜವಾದ ದೇಶಪ್ರೇಮಿ ಎಂದು ಅಭಿಪ್ರಾಯಪಟ್ಟರು.

ರಾಣಿ ಚೆನ್ನಮ್ಮ, ಝಾನ್ಸಿರಾಣಿ ಲಕ್ಷ್ಮೀಬಾಯಿ, ಸಾವಿತ್ರಿ ಬಾಯಿಪುಲೆ, ಮಾಜಿ ಪ್ರಧಾನಿ ಇಂದಿರಾಗಾಂಧಿ, ಅಂತರಿಕ್ಷ ದಲ್ಲೇ ಭಸ್ಮವಾದ ಕಲ್ಪನಾ ಚಾವ್ಲ, ತಾಯಿ ಹೃದಯದ ಮದರ್‌ ಥೆರೆಸಾ, ಮ್ಯಾನ್ಮಾರ್‌ನ ಹೋರಾಟಗಾರ್ತಿ ಆಂಗ್‌ ಸಾನ್‌ ಸೂಕಿ, ಇನ್ಫೋಸಿಸ್‌ನ ಸುಧಾಮೂರ್ತಿ, ಪಾಕಿಸ್ತಾನದ ಮಲಾಲ ಮುಂತಾದವರೆಲ್ಲ ಜನೋಪಯೋಗಿ ಕೆಲಸಗಳನ್ನು ಮಾಡಿ ಯುವಪೀಳಿಗೆಗೆ ಮಾದರಿಯಾಗಿದ್ದಾರೆ ಎಂದರು.

ಮಹಿಳೆಯರು ಇಂತಹ ಸಾಧನೆಗಳನ್ನು ಮಾಡತ್ತಲೆ ಬರುತ್ತಿದ್ದರೂ, ವರ್ಷದಿಂದ ವರ್ಷಕ್ಕೆ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚುತ್ತಿರುವುದು ದುರಂತ ಎಂದ ಅವರು, ಮಹಿಳಾ ಪರವಾದ ಕಾನೂನು ಬಲಿಷ್ಠವಾಗಬೇಕು ಎಂದು ಒತ್ತಾಯಿಸಿದರು.

ವೇದಿಕೆಯಲ್ಲಿ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಗಾಯಿತ್ರಿ ನಾಗರಾಜ್‌, ಉಪಾಧ್ಯಕ್ಷೆ ಉಷಾತೇಜಸ್ವಿ, ಗೌರವ ಕಾರ್ಯದರ್ಶಿ ಜಲಜಾ ಶೇಖರ್‌, ಪದಾಧಿಕಾರಿಗಳಾದ ಸುಮಾ ಸುದೀಪ್‌, ನಳಿನಿ ಗಣೇಶ್‌, ಶೋಭ ಶಿವರಾಜ್‌, ಲೀಲಾ ನಿರ್ವಾಣಿ, ಶೋಭ ಯಶ್ವಂತ್‌, ವಿಜಯಲಕ್ಷ್ಮೀ ಸುರೇಶ್‌, ಜ್ಯೋತಿ ಶುಭಾಕರ್‌, ಲತಾ ಮಂಜು ಇದ್ದರು. ನಂತರ ಕ್ರೀಡಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮನರಂಜನಾ ಕಾರ್ಯಕ್ರಮ ನಡೆಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ