ಆ್ಯಪ್ನಗರ

ಸರ್ವರಿಗೂ ಸೂರು: ಮನೆ ಮನೆ ಸಮೀಕ್ಷೆಗೆ ಚಾಲನೆ

ಕೇಂದ್ರ ಸರಕಾರ ಪಟ್ಟಣದಲ್ಲಿ ವಾಸಿಸುತ್ತಿ ರುವ ಎಲ್ಲ ಬಡ ಕುಟುಂಬಗಳಿಗೆ 2022ರೊಳಗೆ ಮನೆ ಒದಗಿಸುವ ನಿಟ್ಟಿನಲ್ಲಿ ‘ಸರ್ವರಿಗೂ ಸೂರು 2022’ ಯೋಜನೆಯಡಿ ವಿರಾಜಪೇಟೆ ಪಟ್ಟಣ ಪಂಚಾಯಿತಿಯ 15 ಮಂದಿ ಸಿಬ್ಬಂದಿಗೆ ಪಂಚಾಯಿತಿಯ ಸಭಾಂಗಣದಲ್ಲಿ ಗುರುವಾರ ತರಬೇತಿ ನೀಡಲಾಯಿತು.

ವಿಕ ಸುದ್ದಿಲೋಕ 23 Jul 2016, 4:04 pm
ವಿರಾಜಪೇಟೆ: ಕೇಂದ್ರ ಸರಕಾರ ಪಟ್ಟಣದಲ್ಲಿ ವಾಸಿಸುತ್ತಿ ರುವ ಎಲ್ಲ ಬಡ ಕುಟುಂಬಗಳಿಗೆ 2022ರೊಳಗೆ ಮನೆ ಒದಗಿಸುವ ನಿಟ್ಟಿನಲ್ಲಿ ‘ಸರ್ವರಿಗೂ ಸೂರು 2022’ ಯೋಜನೆಯಡಿ ವಿರಾಜಪೇಟೆ ಪಟ್ಟಣ ಪಂಚಾಯಿತಿಯ 15 ಮಂದಿ ಸಿಬ್ಬಂದಿಗೆ ಪಂಚಾಯಿತಿಯ ಸಭಾಂಗಣದಲ್ಲಿ ಗುರುವಾರ ತರಬೇತಿ ನೀಡಲಾಯಿತು.
Vijaya Karnataka Web achieving the eaves house survey inaguration
ಸರ್ವರಿಗೂ ಸೂರು: ಮನೆ ಮನೆ ಸಮೀಕ್ಷೆಗೆ ಚಾಲನೆ

ಯೋಜನೆಯ ಪ್ರಕಾರ ಆರ್ಥಿಕವಾಗಿ ಹಿಂದುಳಿದವರು, ಬಡವರು, ಕಡು ಬಡವರು ನಿರ್ಗತಿಕರು, ದುರ್ಬಲರು, ನಿರಾಶ್ರಿತರು, ನಿವೇಶನ ಇದ್ದು ಮನೆ ಕಟ್ಟಲು ಆಗದವರು, ಸಣ್ಣ ಮನೆಯ ಮಾಲೀಕರು ಅದನ್ನು ವಿಸ್ತರಿಸಲು, ನಿವೇಶನ ರಹಿತರನ್ನು ಈ ಯೋಜನೆಯ ಅರ್ಹತೆಯ ಆಧಾರದ ಮೇಲೆ ಫಲಾನುಭವಿ ಗಳನ್ನಾಗಿ ಆಯ್ಕೆ ಮಾಡಲಾಗುವುದು ಎಂದು ತರಬೇತಿ ಸಮಯದಲ್ಲಿ ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ತಿಳಿಸಿದರು.
ಪಟ್ಟಣ ಅಥವಾ ನಗರದಲ್ಲಿರುವ ಕೊಳಚೆ ಪ್ರದೇಶದಲ್ಲಿ ಖಾಲಿ ಇರುವ ಜಾಗವನ್ನು ಗುರುತಿಸಿ ನಿವೇಶನ ರಹಿತ ಫಲಾನುಭವಿಗಳಿಗೆ ಸಾಮೂಹಿಕವಾಗಿ ಆರ್‌ಸಿಸಿ ಮನೆ ಕಟ್ಟಿಕೊಡಲಾಗುವುದು. ಖಾಲಿ ಇರುವ ಜಾಗವನ್ನು ಗುರುತಿಸಿ ಕಡು ಬಡವರಿಗೆ ಮನೆ ಕಟ್ಟಲು ಈ ಯೋಜನೆಯಲ್ಲಿ ಆದ್ಯತೆ ನೀಡಲಾಗು ವುದು ಎಂದು ಮಾಹಿತಿ ನೀಡಿದರು.
ಇನ್‌ಸೈಟ್ ಯೋಜನೆ: ಭೂಮಿಯನ್ನು ಸಂಪನ್ಮೂನವಾಗಿರಿಸಿಕೊಂಡು ಕೊಳಚೆ ಪ್ರದೇಶಗಳ ಅಭಿವೃದ್ಧಿ ಯೋಜನೆಯಡಿ ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ ಮಾಡಿ ಅರ್ಹರನ್ನು ಗುರುತಿಸಿ ಪಟ್ಟಿ ಮಾಡಿ ಅನುಷ್ಠಾನಗೊಳಿಸಲಾಗು ವುದು. ಕ್ರೆಡಿಟ್ ಲಿಂಕ್ ಸಬ್ಸಿಡಿ ಯೋಜನೆ ಯಲ್ಲಿ ಕಡಿಮೆ ಆದಾಯ ವರ್ಗದವರಿಗೆ ಶೇಕಡ 6.5ರ ಸಬ್ಸಿಡಿ ಸಹಾಯಧನದ ಬಡ್ಡಿಯಲ್ಲಿ ಮನೆ ನಿರ್ಮಾಣ, ಖರೀದಿ, ವಿಸ್ತರಣೆಗೆ 6 ಲಕ್ಷ ರೂ.ವರೆಗೆ ಬ್ಯಾಂಕ್ ಸಾಲ ಒದಗಿಸಲಾಗುವುದು. ಫಲಾನುಭವಿಗಳ ನೇತೃತ್ವದಲ್ಲಿ ಸ್ವಯಂ ಮನೆ ನಿರ್ಮಾಣಕ್ಕೆ ವಾಜಪೇಯಿ ವಸತಿ ಯೋಜನೆಯಡಿಯಲ್ಲಿ ಹಾಗೂ ಅಂಬೇಡ್ಕರ್ ವಸತಿ ಯೋಜನೆಯಲ್ಲಿ ಸಾಮಾನ್ಯ ವರ್ಗದವರಿಗೆ, ಎಸ್.ಸಿ, ಎಸ್.ಟಿ. ವರ್ಗದವರಿಗೆ 1.20ಲಕ್ಷ ರೂ.ದಿಂದ 1.80ಲಕ್ಷ ರೂ.ವರೆಗೆ ಸಹಾಯಧನ ನೀಡಲಾಗುವುದು ಎಂದು ಸಿಬ್ಬಂದಿ ತರಬೇತಿ ಸಂದರ್ಭದಲ್ಲಿ ಕೃಷ್ಣಪ್ರಸಾದ್ ತಿಳಿಸಿದರು. ವಿರಾಜಪೇಟೆ ಪಟ್ಟಣ ಪಂಚಾಯಿತಿಯ ಯೋಜನಾಧಿಕಾರಿ ಶೈಲಾ ಮಾತನಾಡಿ, ನಿಗದಿತ ಫಾರಂಗಳು ಕಚೇರಿಯಲ್ಲಿ ದೊರೆಯಲಿದೆ. ಹೆಚ್ಚಿನ ಮಾಹಿತಿಯನ್ನು ಕಚೇರಿ ವೇಳೆಯಲ್ಲಿ ಪಡೆಯಲು ಅವಕಾಶವಿದೆ ಎಂದರು.
ಮನೆ ಮನೆ ಭೇಟಿಗೆ ಚಾಲನೆ: ಇನ್‌ಸೈಟ್ ಯೋಜನೆಯ ಪ್ರಯುಕ್ತ ಪಟ್ಟಣ ಪಂಚಾಯಿತಿಯ ತರಬೇತಿ ಪಡೆದ 15 ಮಂದಿ ಸಿಬ್ಬಂದಿಗಳು ಶುಕ್ರವಾರದಿಂದ ಎಲ್ಲ ವಾರ್ಡ್‌ಗಳಲ್ಲಿ ಸಮೀಕ್ಷೆ ನಡೆಸಿ ಅರ್ಹರನ್ನು ಭೇಟಿ ಮಾಡಿ ಫಲಾನುಭವಿ ಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ