ಆ್ಯಪ್ನಗರ

ನಟಿ ಹರ್ಷಿಕಾ ಜತೆ ಅಸಭ್ಯ ವರ್ತನೆ: ಆರೋಪಿ ಸೆರೆ

ನಟಿ ಹರ್ಷಿಕಾ ಪೂಣಚ್ಚ ಜೊತೆ ಇಬ್ಬರು ಯುವಕರು ಅಸಭ್ಯವಾಗಿ ವರ್ತಿಸಿರುವ ಆರೋಪ ಕೇಳಿ ಬಂದಿದ್ದು, ಒಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

Vijaya Karnataka 4 May 2019, 5:00 am
ಮಡಿಕೇರಿ: ನಟಿ ಹರ್ಷಿಕಾ ಪೂಣಚ್ಚ ಜೊತೆ ಇಬ್ಬರು ಯುವಕರು ಅಸಭ್ಯವಾಗಿ ವರ್ತಿಸಿರುವ ಆರೋಪ ಕೇಳಿ ಬಂದಿದ್ದು, ಒಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
Vijaya Karnataka Web actress harshikas indecent behavior accused arrested
ನಟಿ ಹರ್ಷಿಕಾ ಜತೆ ಅಸಭ್ಯ ವರ್ತನೆ: ಆರೋಪಿ ಸೆರೆ


ಬನ್ಸಿ ನಾಣಯ್ಯ ಬಂಧಿತ ಆರೋಪಿ. ಗುರುವಾರ ರಾತ್ರಿ ಹರ್ಷಿಕಾ ಪೂಣಚ್ಚ ಹಾಗೂ ಬಿಗ್‌ಬಾಸ್‌ ಖ್ಯಾತಿಯ ಭುವನ್‌ ಪೊನ್ನಣ್ಣ ಮಡಿಕೇರಿ ತಾಲೂಕಿನ ನೀರುಕೊಲ್ಲಿ ಗ್ರಾಮದ ಬಳಿ ಇರುವ ಖಾಸಗಿ ರೆಸಾರ್ಟ್‌ನಲ್ಲಿ ನಡೆದ ಸಂಬಂಧಿಕರೊಬ್ಬರ ನಿಶ್ಚಿತಾರ್ಥದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭ ಬನ್ಸಿ ನಾಣಯ್ಯ ಹಾಗೂ ಬಿಪಿನ್‌ ದೇವಯ್ಯ ತನ್ನ ಬಳಿ ಮಾತನಾಡಬಾರದು ಎಂದು ಹರ್ಷಿಕಾ ಪೂಣಚ್ಚ ಹೇಳಿದ್ದಾರೆ ಎನ್ನಲಾಗಿದೆ. ಇದರಿಂದ ಮಾತಿಗೆ ಮಾತು ಬೆಳೆದಾಗ ಭುವನ್‌ ಹರ್ಷಿಕಾ ಪರ ನಿಂತಿದ್ದಾರೆ. ಈ ವೇಳೆ ಹೊಡೆದಾಟ ಕೂಡ ನಡೆದಿದ್ದು, ಭುವನ್‌ರ ಮುಖ ಹಾಗೂ ಕೈಗೆ ಗಾಯವಾಗಿದೆ.

ರಾತ್ರಿಯೇ ಜಿಲ್ಲಾಸ್ಪತ್ರೆಯಲ್ಲಿ ಭುವನ್‌ ಚಿಕಿತ್ಸೆ ಪಡೆದಿದ್ದಾರೆ. ಅಲ್ಲದೆ ಹರ್ಷಿಕಾ ಪೂಣಚ್ಚ ಜತೆ ಗ್ರಾಮಾಂತರ ಠಾಣೆಗೆ ಆಗಮಿಸಿ, ಬನ್ಸಿ ನಾಣಯ್ಯ ಹಾಗೂ ಬಿಪಿನ್‌ ದೇವಯ್ಯ ಎಂಬ ಇಬ್ಬರು ಹರ್ಷಿಕಾರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.

ದೂರು ದಾಖಲಿಸಿಕೊಂಡ ಪೊಲೀಸರು, ಆರೋಪಿ ಬನ್ಸಿ ನಾಣಯ್ಯ ಎಂಬುವವರನ್ನು ಬಂಧಿಸಿದ್ದು, ಮಡಿಕೇರಿ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಈ ಸಂಬಂಧ ಹರ್ಷಿಕಾ ಕೂಡಾ ನ್ಯಾಯಾಲಯಕ್ಕೆ ಹಾಜರಾಗಿ ಹೇಳಿಕೆ ನೀಡಿದ್ದಾರೆ.

ಇನ್ನೊಬ್ಬ ಆರೋಪಿ ಬಿಪಿನ್‌ಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ. ನಟ ಭುವನ್‌ ಪೊನ್ನಣ್ಣ ಹಾಗೂ ನಟಿ ಹರ್ಷಿಕಾ ಪೂಣಚ್ಚ ಬೆಂಗಳೂರಿಗೆ ತೆರಳಿದ್ದಾರೆ ಎನ್ನಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ