Please enable javascript.‘ಒಕ್ಕಲಿಗ ಎಂದೇ ನಮೂದಿಸಿ’ - ‘ಒಕ್ಕಲಿಗ ಎಂದೇ ನಮೂದಿಸಿ’ - Vijay Karnataka

‘ಒಕ್ಕಲಿಗ ಎಂದೇ ನಮೂದಿಸಿ’

ವಿಕ ಸುದ್ದಿಲೋಕ 14 Apr 2015, 4:42 am
Subscribe

ರಾಜ್ಯ ಸರಕಾರದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಗಣತಿದಾರರು ಮಾಹಿತಿ ಸಂಗ್ರಹಿಸುವ ಸಂದರ್ಭ ಪ್ರವರ್ಗ- (ಎ)ಯ ಜಾತಿ ಕಲಂನಲ್ಲಿ ಒಕ್ಕಲಿಗ ಎಂದು ನಮೂದಿಸಬೇಕು ಎಂದು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಎಸ್.ಎಂ.ಚಂಗಪ್ಪ ತಿಳಿಸಿದ್ದಾರೆ.

‘ಒಕ್ಕಲಿಗ ಎಂದೇ ನಮೂದಿಸಿ’
ಸೋಮವಾರಪೇಟೆ: ರಾಜ್ಯ ಸರಕಾರದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಗಣತಿದಾರರು ಮಾಹಿತಿ ಸಂಗ್ರಹಿಸುವ ಸಂದರ್ಭ ಪ್ರವರ್ಗ- (ಎ)ಯ ಜಾತಿ ಕಲಂನಲ್ಲಿ ಒಕ್ಕಲಿಗ ಎಂದು ನಮೂದಿಸಬೇಕು ಎಂದು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಎಸ್.ಎಂ.ಚಂಗಪ್ಪ ತಿಳಿಸಿದ್ದಾರೆ.


ಒಕ್ಕಲಿಗ ಜನಾಂಗದ ಕೋಡ್ ಸಂಖ್ಯೆ 1334 ಆಗಿರುತ್ತದೆ. ಸಮೀಕ್ಷೆ ಫಾರಂ ನಲ್ಲಿ ಜಾತಿ ಕಲಂನಲ್ಲಿ ಸರಿಯಾದ ಕೋಡ್ ಸಂಖ್ಯೆಯನ್ನು ಬರೆಯಲಾಗಿದೆಯೇ ? ಎಂದು ಪರಿಶೀಲಿಸಬೇಕು. ಈ ಬಾರಿಯ ಜಾತಿ ಗಣತಿ ಪ್ರಮುಖವಾಗಿದ್ದು, ಸರಿಯಾದ ಮಾಹಿತಿ ನೀಡಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು. ಕೊಡಗು ಜಿಲ್ಲೆಯ ಒಕ್ಕಲಿಗರಲ್ಲಿ ಉಪಜಾತಿಗಳು ಬಹಳ ಕಡಿಮೆಯಿದ್ದು, ಅದರ ಬಗ್ಗೆ ಮಾಹಿತಿ ಇದ್ದರೆ ಮಾತ್ರ ಉಪಜಾತಿಗಳ ಕೋಡ್‌ಗಳನ್ನು ನಮೂದಿಸಬಹುದು ಎಂದು ಹೇಳಿದರು.
ಜಿಲ್ಲಾ ಮಟ್ಟದಲ್ಲಿ ಒಕ್ಕಲಿಗ ಸಂಘದ ಸದಸ್ಯತ್ವ ಅಭಿಯಾನ ಪ್ರಾರಂಭಿಸಲಾಗಿದ್ದು, 6ಸಾವಿರ ಸದಸ್ಯತ್ವದ ಫಾರಂ ಗಳನ್ನು ವಿತರಿಸಲಾಗಿದೆ. ಶೈಕ್ಷಣಿಕ ಕ್ಷೇತ್ರದ ಪ್ರಗತಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಸಂಸ್ಕೃತಿ ಹಾಗೂ ಕ್ರೀಡಾ ಬೆಳವಣಿಗೆ ಸಂಘದ ಗುರಿಯಾಗಿದ್ದು, ಜಿಲ್ಲೆಯ ಮೂರು ತಾಲೂಕುಗಳಲ್ಲಿ ನಾನಾ ಕಾರ‌್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು. ಗೋಷ್ಠಿಯಲ್ಲಿ ಜಿಲ್ಲಾ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಮಹೇಶ್ ಕುಮಾರ್, ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್.ಮುತ್ತಣ್ಣ, ಪದಾಧಿಕಾರಿಗಳಾದ ಎಂ.ಎಸ್. ನಂದಕುಮಾರ್, ಎಚ್.ಸಿ.ಮಾದಪ್ಪ ಇದ್ದರು.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ