Please enable javascript.ಭಾರತ ವಿಶ್ವ ಗುರು: ಸೋಮೇಶ್ - ಭಾರತ ವಿಶ್ವ ಗುರು: ಸೋಮೇಶ್ - Vijay Karnataka

ಭಾರತ ವಿಶ್ವ ಗುರು: ಸೋಮೇಶ್

ವಿಕ ಸುದ್ದಿಲೋಕ 26 Jun 2015, 4:51 am
Subscribe

ಸಮರ್ಥ ನಾಯಕತ್ವ ದೊಂದಿಗೆ ಭಾರತ ಮತ್ತೊಮ್ಮೆ ವಿಶ್ವಗುರು ವಾಗಿ ಸಾರ್ವಭೌಮತ್ವ ಸಾಧಿಸುವ ದಿಸೆಯಲ್ಲಿ ಆಶಾಭಾವನೆ ಮೂಡುತ್ತಿದ್ದು, ವಿಶ್ವ ಗುರು ವಾಗುವ ಕಾಲ ಸನ್ನಿಹಿತವಾಗುತ್ತಿದೆ ಎಂದು ಆರ್‌ಎಸ್‌ಎಸ್ ಜಿಲ್ಲಾ ಸಂಪರ್ಕ ಪ್ರಮುಖ್ ಚಿ.ನಾ. ಸೋಮೇಶ್ ವಿಶ್ಲೇಷಿಸಿದರು.

ಭಾರತ ವಿಶ್ವ ಗುರು: ಸೋಮೇಶ್
ಸೋಮವಾರಪೇಟೆ: ಸಮರ್ಥ ನಾಯಕತ್ವ ದೊಂದಿಗೆ ಭಾರತ ಮತ್ತೊಮ್ಮೆ ವಿಶ್ವಗುರು ವಾಗಿ ಸಾರ್ವಭೌಮತ್ವ ಸಾಧಿಸುವ ದಿಸೆಯಲ್ಲಿ ಆಶಾಭಾವನೆ ಮೂಡುತ್ತಿದ್ದು, ವಿಶ್ವ ಗುರು ವಾಗುವ ಕಾಲ ಸನ್ನಿಹಿತವಾಗುತ್ತಿದೆ ಎಂದು ಆರ್‌ಎಸ್‌ಎಸ್ ಜಿಲ್ಲಾ ಸಂಪರ್ಕ ಪ್ರಮುಖ್ ಚಿ.ನಾ. ಸೋಮೇಶ್ ವಿಶ್ಲೇಷಿಸಿದರು.
ಸಮೀಪದ ಶಾಂತಳ್ಳಿ ಶ್ರೀ ಕುಮಾರ ಲಿಂಗೇಶ್ವರ ಸಮುದಾಯ ಭವನದಲ್ಲಿ ನಡೆದ ಸಂಘದ ಗುರುಪೂಜಾ ಉತ್ಸವದಲ್ಲಿ ಅವರು ಮಾತನಾಡಿದರು.
ದಶಕಗಳ ಹಿಂದೆ ಕಾರ್ಗಿಲ್ ಯುದ್ಧ ಸಂದರ್ಭ ಪಾಕಿಸ್ತಾನಕ್ಕೆ ಭಾರತ ನೀಡಿದ ತಿರು ಗೇಟು ಹಾಗೂ ಇತ್ತೀಚೆಗಿನ ಮ್ಯಾನ್ಮಾರ್ ಉಗ್ರ ರನ್ನು ಹತ್ತಿಕ್ಕಿದ ಕ್ಷಣವನ್ನು ಉದಾಹರಿಸಿದ ಅವರು, ಇಂದು ದೇಶದ ಸಾಮರ್ಥ್ಯ ವಿಶ್ವಕ್ಕೆ ಅರಿವಾಗುತ್ತಿದೆ ಎಂದರು. ಆಧ್ಯಾತ್ಮಿಕ ರಾಷ್ಟ್ರ ಭಾರತದ ಯೋಗವನ್ನು ಇಂದು ಜಗತ್ತು ಒಪ್ಪಿ ಕೊಂಡಿದೆ. ಆ ಮೂಲಕ ಜಾಗತಿಕ ಶಾಂತಿ ಯುಗಕ್ಕೆ ಮುನ್ನುಡಿ ಬರೆದಂತಾಗಿದೆ ಎಂದರು.
ಕಳೆದ 90 ವರ್ಷಗಳಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಯುವಶಕ್ತಿಯಲ್ಲಿ ಸಂಸ್ಕಾರದೊಂದಿಗೆ ದೇಶಭಕ್ತಿ, ಸಚ್ಛಾರಿತ್ರ್ಯದ ಮೂಲಕ ವಿಶ್ವ ತಲೆಬಾಗುವ ನಾಯಕತ್ವ ಗುಣವನ್ನು ಕಲಿಸುತ್ತಿದೆ. ಈ ದಿಸೆಯಲ್ಲಿ ಗ್ರಾಮ ಸ್ವರಾಜ್ಯದಿಂದ ರಾಮರಾಜ್ಯದ ಕಲ್ಪನೆ ಸಾಕಾರಗೊಳಿಸಲು ಪ್ರತಿಯೊಬ್ಬರೂ ಸಂಘಕಾರ್ಯದಲ್ಲಿ ಕೈಜೋಡಿಸುವಂತೆ ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಶಾಂತಳ್ಳಿ ಪ.ಪೂ. ಕಾಲೇಜು ಉಪನ್ಯಾಸಕ ಸುರೇಶ್ ಮಾತ ನಾಡಿ, ಅನ್ಯರ ಓಲೈಕೆಯಿಂದ ದೇಶಭಕ್ತಿ ಯನ್ನು ಮತ್ತು ಸಂಘಟಿತರಾಗದಂತೆ ಹಿಂದೂಗಳನ್ನು ವಿಘಟಿಸುವ ಯತ್ನ ನಡೆ ಯುತ್ತಿದ್ದು, ಈ ಬಗ್ಗೆ ಹಿಂದೂ ಸಮುದಾಯ ಜಾಗೃತೆ ವಹಿಸಬೇಕು ಎಂದರು. ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ, ಸಂಘದ ತಾಲೂಕು ಸಹಕಾರ್ಯವಾಹ ದಾಮೋ ದರ್ ಸೇರಿದಂತೆ ಗ್ರಾಮದ ಹಿರಿಯರು, ನಾನಾ ಕ್ಷೇತ್ರಗಳ ಪ್ರಮುಖರು ಪಾಲ್ಗೊಂಡಿದ್ದರು.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ