ಆ್ಯಪ್ನಗರ

ಹಲ್ಲೆ, ಕೊಲೆ ಬೆದರಿಕೆ: ಆರೋಪಿಗೆ 9 ತಿಂಗಳು ಸಜೆ

ಕರ್ತವ್ಯದಲ್ಲಿದ್ದ ಸರಕಾರಿ ನೌಕರನ ಮೇಲೆ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿದ ಆರೋಪಿಗೆ ಇಲ್ಲಿನ ಸಿಜೆಎಂ ನ್ಯಾಯಾಲಯ 9 ತಿಂಗಳ ಸಜೆ ಹಾಗೂ 9 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

Vijaya Karnataka 23 Feb 2019, 8:33 pm
ಮಡಿಕೇರಿ: ಕರ್ತವ್ಯದಲ್ಲಿದ್ದ ಸರಕಾರಿ ನೌಕರನ ಮೇಲೆ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿದ ಆರೋಪಿಗೆ ಇಲ್ಲಿನ ಸಿಜೆಎಂ ನ್ಯಾಯಾಲಯ 9 ತಿಂಗಳ ಸಜೆ ಹಾಗೂ 9 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
Vijaya Karnataka Web assault murder threats 9 months jail
ಹಲ್ಲೆ, ಕೊಲೆ ಬೆದರಿಕೆ: ಆರೋಪಿಗೆ 9 ತಿಂಗಳು ಸಜೆ


ಚೇರಂಬಾಣೆ ಬಿ ಬಾಡಗ ಗ್ರಾಮದ ನಿವಾಸಿ ಕೆ.ಬಿ.ಬಿಪಿನ್‌ ಶಿಕ್ಷೆಗೆ ಒಳಗಾದವರು. 2014ರಲ್ಲಿ ಕೆ.ಬಿ.ಬಿಪಿನ್‌ ವಿರುದ್ಧದ ದೂರಿನ ದಸ್ತಗಿರಿ ವಾರಂಟನ್ನು ಕಾರ್ಯಗತಗೊಳಿಸಲು ಸರಕಾರಿ ಕರ್ತವ್ಯದ ಮೇರೆಗೆ ಪೊಲೀಸರು ತೆರಳಿದಾಗ ಆರೋಪಿ ಪೊಲೀಸರಿಗೆ ಬೈದು ಹಲ್ಲೆ ನಡೆಸಿ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಎಂದು ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಸಿಜೆಎಂ ನ್ಯಾಯಾಲಯದ ನ್ಯಾಯಾಧೀಶ ವಿಜಯಕುಮಾರ್‌ ಆರೋಪಿ ಕರ್ತವ್ಯದಲ್ಲಿದ್ದ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವುದು ಸಾಬೀತಾದ ಕಾರಣ ಸರಕಾರಿ ಕರ್ತವ್ಯಕ್ಕೆ ಅಡ್ಡಿ ಮಾಡಿ ಹಲ್ಲೆ ಮಾಡಿದ ಅಪರಾಧಕ್ಕಾಗಿ 6 ತಿಂಗಳು ಸಜೆ ಮತ್ತು 5 ಸಾವಿರ ರೂ. ದಂಡ, ಅವಾಚ್ಯ ಶಬ್ಧದಿಂದ ಬೈದಿರುವ ಅಪರಾಧಕ್ಕಾಗಿ 1 ತಿಂಗಳ ಸಜೆ ಹಾಗೂ 1 ಸಾವಿರ ದಂಡ ಹಾಗೂ ಕೊಲೆ ಬೆದರಿಕೆ ಹಾಕಿದ ಪ್ರಕರಣಕ್ಕಾಗಿ 2 ತಿಂಗಳ ಸಜೆ ಹಾಗೂ 3 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಪ್ರಕರಣದ ವಿಚಾರಣೆಯನ್ನು ಹಿರಿಯ ಸರಕಾರಿ ಅಭಿಯೋಜಕಿ ಕೆ.ಜಿ.ಅಶ್ವಿನಿ ವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ