ಆ್ಯಪ್ನಗರ

ಅಪ್ಪಚ್ಚು ರಂಜನ್‌ಗೆ ಸಚಿವ ಸ್ಥಾನಕ್ಕೆ ಆಗ್ರಹಿಸಿ 'ಬೆಂಗಳೂರು ಚಲೋ', ಸಿಎಂ ಭೇಟಿಯಾಗಿ ಮನವಿ

ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್‌ ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ 500ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು 'ಬೆಂಗಳೂರು ಚಲೋ' ಹೆಸರಿನಲ್ಲಿ 'ವಾಹನ ಜಾಥಾ' ನಡೆಸಿ, ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ವಿಜಯೇಂದ್ರ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

Vijaya Karnataka Web 10 Aug 2021, 8:01 pm

ಹೈಲೈಟ್ಸ್‌:

  • ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್‌ ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ 500ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರಿಂದ 'ಬೆಂಗಳೂರು ಚಲೋ'
  • ರಾಜಧಾನಿಗೆ 'ವಾಹನ ಜಾಥಾ' ಮೂಲಕ ಆಗಮಿಸಿ ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ವಿಜಯೇಂದ್ರ ಅವರಿಗೆ ಮನವಿ ಸಲ್ಲಿಸಿದ ಬಿಜೆಪಿ ನಾಯಕರು
  • ಈ ಬಗ್ಗೆ ಪಕ್ಷದ ವರಿಷ್ಠರೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದ ಸಿಎಂ ಬಸವರಾಜ ಬೊಮ್ಮಾಯಿ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web appachu ranjan
ಕುಶಾಲನಗರ: ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್‌ಗೆ ಸಚಿವ ಸ್ಥಾನ ನೀಡಲು ಆಗ್ರಹಿಸಿ ಬೆಂಗಳೂರು ಚಲೋ ಕಾರ್ಯಕ್ರಮ ನಡೆಯಿತು.
ಕುಶಾಲನಗರದ ಬೈಚನಹಳ್ಳಿ ಮಾರಿಯಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿ ವಾಹನ ಜಾಥಾಗೆ ಚಾಲನೆ ನೀಡಲಾಯಿತು. 500ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಬೆಂಗಳೂರಿಗೆ ತೆರಳಿದರು.

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಜಮಾಯಿಸಿದ ಬಿಜೆಪಿ ಪ್ರಮುಖರು, ಕಾರ್ಯಕರ್ತರು ಕೆಲಕಾಲ ಅಪ್ಪಚ್ಚು ರಂಜನ್‌ ಪರ ಘೋಷಣೆ ಕೂಗಿ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿದರು.


ಕೆಲ ಪ್ರಮುಖರು ಸಿಎಂ ಗೃಹ ಕಚೇರಿ ಕೃಷ್ಣಾಗೆ ತೆರಳಿ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಶಾಸಕ ಅಪ್ಪಚ್ಚು ರಂಜನ್‌ ಅವರಿಗೆ ಸಚಿವ ಸ್ಥಾನ ನೀಡುವಂತೆ ಮನವಿ ಸಲ್ಲಿಸಿದರು. ಈ ಸಂದರ್ಭ ಮಾತನಾಡಿದ ಸಿಎಂ ಬಸವರಾಜು ಬೊಮ್ಮಾಯಿ, "ಹೈಕಮಾಂಡ್‌ ಸೂಚನೆಯಂತೆ ಸಚಿವ ಸಂಪುಟ ರಚಿಸಲಾಗಿದೆ. ಶಾಸಕ ರಂಜನ್‌ ಬಗ್ಗೆ ನನಗೂ ಒಲವಿದೆ. ಈ ಬಗ್ಗೆ ಪಕ್ಷದ ವರಿಷ್ಠರೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದು," ಎಂದು ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರನ್ನೂ ಭೇಟಿಯಾಗಿ ಸಚಿವ ಸ್ಥಾನಕ್ಕೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭ ಮಾತನಾಡಿದ ಯಡಿಯೂರಪ್ಪ, "ಕಳೆದ ಬಾರಿಯೇ ರಂಜನ್‌ಗೆ ಸಚಿವ ಸ್ಥಾನ ಲಭಿಸಬೇಕಿತ್ತು. ತಪ್ಪಿಹೋಗಿದೆ. ಈ ಬಗ್ಗೆ ಚರ್ಚಿಸುತ್ತೇನೆ," ಎಂದರು.

ಬಿಎಸ್‌ವೈ ಪುತ್ರ ಬಿವೈ ವಿಜಯೇಂದ್ರ ಅವರನ್ನೂ ನಾಯಕರು ಭೇಟಿಯಾಗಿ ಸಚಿವ ಸ್ಥಾನಕ್ಕಾಗಿ ಆಗ್ರಹಿಸಿದರು.

ಸೋಮವಾರಪೇಟೆ ಮಂಡಲ ಬಿಜೆಪಿ ಅಧ್ಯಕ್ಷ ಮನುಕುಮಾರ್‌ ರೈ, ಪ್ರಧಾನ ಕಾರ್ಯದರ್ಶಿ ಎಂ.ಡಿ.ಕೃಷ್ಣಪ್ಪ, ಮೋಕ್ಷಿತ್‌, ಗೌತಮ್‌, ಉಪಾಧ್ಯಕ್ಷ ವರದ, ದಾಸಂಡ ರಮೇಶ್‌, ಮಂಡಲ ವಕ್ತಾರ ಕೆ.ಜಿ.ಮನು, ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ, ಪ್ರಧಾನಕಾರ್ಯದರ್ಶಿ ವೇದಾವತಿ, ಕುಶಾಲನಗರ ಪಪಂ ಅಧ್ಯಕ್ಷ ಬಿ.ಜೈವರ್ಧನ್‌, ನಗರ ಪ್ರಮುಖ್‌ ವಿ.ಎನ್‌.ಉಮಾಶಂಕರ್‌, ಸಹ ಪ್ರಮುಖ್‌ ಎಚ್‌.ಡಿ.ಶಿವಾಜಿ, ಪ್ರಮುಖರಾದ ಚಂದ್ರಶೇಖರ್‌ ಹೆರೂರು, ಮುಳ್ಳುಸೋಗೆ ಗ್ರಾಪಂ ಆಧ್ಯಕ್ಷ ಬಿ.ಕೆ.ಚೆಲುವರಾಜು, ಜನಪ್ರತಿನಿಧಿಗಳಾದ ಅಮೃತ್‌ ರಾಜ್‌, ಡಿ.ಕೆ.ತಿಮ್ಮಪ್ಪ, ಶಂಭುಲಿಂಗಪ್ಪ, ಪ್ರಮುಖರಾದ ವೈಶಾಖ್‌, ಕಿಬ್ಬೆಟ್ಟಮಧು, ಶರತ್‌ ಚಂದ್ರ, ಜೀವನ್‌ ನೆಗಳೆ, ಬಬಿತ್‌ ದೊಡ್ಮನೆ, ಮಧು, ಮನುಮಂಜುನಾಥ್‌, ಪಿ.ಡಿ.ಪೊನ್ನಪ್ಪ ವಿವಿಧ ಘಟಕಗಳ ಪ್ರಮುಖರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ