ಆ್ಯಪ್ನಗರ

ಕಾಟಕೇರಿ ರಸ್ತೆ ಬಿರುಕಿಗೆ ಸಿಮೆಂಟ್‌

ರಾಷ್ಟ್ರೀಯ ಹೆದ್ದಾರಿ 275 ರ ಕಾಟಕೇರಿ ಗ್ರಾಮದ ಬಳಿ ರಸ್ತೆಯಲ್ಲಿ ಸಣ್ಣದ್ದಾಗಿ ಬಿರುಕು ಕಾಣಿಸಿಕೊಂಡಿದ್ದನ್ನು ಸಿಮೆಂಟ್‌ ಹಾಕಿ ಮುಚ್ಚಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಧೀಕ್ಷ ಕ ಎಂಜಿನಿಯರ್‌ ರಾಘವನ್‌ ಮತ್ತು ಕಾರ‍್ಯಪಾಲಕ ಎಂಜಿನಿಯರ್‌ ಎಸ್‌.ಹೊಳ್ಳ ತಿಳಿಸಿದ್ದಾರೆ.

Vijaya Karnataka 6 Jul 2019, 5:00 am
ಮಡಿಕೇರಿ: ರಾಷ್ಟ್ರೀಯ ಹೆದ್ದಾರಿ 275 ರ ಕಾಟಕೇರಿ ಗ್ರಾಮದ ಬಳಿ ರಸ್ತೆಯಲ್ಲಿ ಸಣ್ಣದ್ದಾಗಿ ಬಿರುಕು ಕಾಣಿಸಿಕೊಂಡಿದ್ದನ್ನು ಸಿಮೆಂಟ್‌ ಹಾಕಿ ಮುಚ್ಚಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧೀಕ್ಷ ಕ ಎಂಜಿನಿಯರ್‌ ರಾಘವನ್‌ ಮತ್ತು ಕಾರ‍್ಯಪಾಲಕ ಎಂಜಿನಿಯರ್‌ ಎಸ್‌.ಹೊಳ್ಳ ತಿಳಿಸಿದ್ದಾರೆ.
Vijaya Karnataka Web cement for cracking at katakeri road
ಕಾಟಕೇರಿ ರಸ್ತೆ ಬಿರುಕಿಗೆ ಸಿಮೆಂಟ್‌


ಶುಕ್ರವಾರ ಸ್ಥಳ ಪರಿಶೀಲಿಸಿದ ಅವರು, ಸಣ್ಣ ಬಿರುಕು ಕಾಣಿಸಿಕೊಂಡಿದ್ದನ್ನು ಗಮನಿಸಿ ಮುಚ್ಚಲು ಕ್ರಮವಹಿಸಿದರು. ಹಾಗೆಯೇ ರಸ್ತೆಯ ಬದಿ ನೀರು ಸರಾಗವಾಗಿ ಹೋಗಲು ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಶಾಶ್ವತ ಕಾಮಗಾರಿ ಕೈಗೊಳ್ಳಲು ಕೇಂದ್ರ ಭೂ ಸಾರಿಗೆ ಇಲಾಖೆಗೆ 47 ಕೋಟಿ ರೂ. ಅನುದಾನ ಬಿಡುಗಡೆಗೆ ಈಗಾಗಲೇ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ತಿಳಿಸಿದರು. ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಚಂದ್ರಪ್ಪ, ಸಹಾಯಕ ಎಂಜಿನಿಯರ್‌ ರಮೇಶ್‌ ಬಾಬು ಇದ್ದರು.

-------------

ಮರಳಿನ ಚೀಲದ ಕಟ್ಟೆ ಇಲ್ಲಿ ಬಾಳಿಕೆ ಬರುವುದಿಲ್ಲ. ತಡೆಗೋಡೆಯನ್ನು ನಿರ್ಮಿಸಿದ ನಂತರವೇ ಹೆದ್ದಾರಿ ದುರಸ್ತಿಪಡಿಸಿ ಎಂದು ಈ ಹಿಂದೆಯೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಆದರೆ, ಅವರು ನಮ್ಮ ಮಾತು ಕೇಳಲಿಲ್ಲ. ಈಗಂತೂ ತಡೆಗೋಡೆ ಕಟ್ಟುವಷ್ಟು ಸಮಯ ಇಲ್ಲ. ಕೂಡಲೇ ಬಿರುಕು ಸರಿಪಡಿಸಲು ಕ್ರಮ ತೆಗೆದುಕೊಳ್ಳಲಿ. ನೀರು ಹರಿದು ಹೋಗಲು ಸರಿಯಾದ ಚರಂಡಿ ವ್ಯವಸ್ಥೆ ಮಾಡಲಿ.
-ಎಂ.ಪಿ. ಅಪ್ಪಚ್ಚು ರಂಜನ್‌, ಶಾಸಕ, ಮಡಿಕೇರಿ ವಿಧಾನಸಭಾ ಕ್ಷೇತ್ರ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ