ಆ್ಯಪ್ನಗರ

ಮೃತ ರಿಕ್ಷಾ ಚಾಲಕನ ಕುಟುಂಬಕ್ಕೆ ಚೆಕ್‌ ವಿತರಣೆ

ಸಮೀಪದ ಹೊಸತೋಟ ನಿವಾಸಿ ಗಣೇಶ್‌ ಎಂಬುವವರು ಅಪಘಾತದಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ ಅವರ ಕುಟುಂಬದ ಕಣ್ಣೀರ ಕಥೆಯನ್ನು ವಿಜಯ ಕರ್ನಾಟಕ ವರದಿ ಮಾಡಿತ್ತು.

Vijaya Karnataka 19 Jul 2018, 5:00 am
ಸೋಮವಾರಪೇಟೆ: ಸಮೀಪದ ಹೊಸತೋಟ ನಿವಾಸಿ ಗಣೇಶ್‌ ಎಂಬುವವರು ಅಪಘಾತದಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ ಅವರ ಕುಟುಂಬದ ಕಣ್ಣೀರ ಕಥೆಯನ್ನು ವಿಜಯ ಕರ್ನಾಟಕ ವರದಿ ಮಾಡಿತ್ತು.
Vijaya Karnataka Web cheque distributed to dead rickshaw drivers family
ಮೃತ ರಿಕ್ಷಾ ಚಾಲಕನ ಕುಟುಂಬಕ್ಕೆ ಚೆಕ್‌ ವಿತರಣೆ


ವರದಿಗೆ ಸ್ಪಂದಿಸಿದ ಮೈಸೂರು ರೋಟರಿ ಮಿಡ್‌ ಟೌನ್‌ ಸಂಸ್ಥೆಯು ಬುಧವಾರ ಹೊಸತೋಟದಲ್ಲಿರುವ ಮೃತರ ಮನೆಗೆ ಭೇಟಿ ನೀಡಿ 25 ಸಾವಿರ ರೂ. ಚೆಕ್ಕನ್ನು

ಅವರ ಪತ್ನಿ ಸವಿತಾ ಅವರಿಗೆ ಹಸ್ತಾಂತರಿಸಿದೆ. ಇದೇ ಸಂದರ್ಭ ಮೈಸೂರಿನ ಕಂಪ್ಯೂಟೆಕ್‌ ಸಂಸ್ಥೆಯ ಪ್ರದೀಪ್‌ ಎಂಬುವವರು ವೈಯಕ್ತಿಕವಾಗಿ 5 ಸಾವಿರ ರೂ. ನೀಡಿದರು.

ಈ ಸಂದರ್ಭ ರೋಟರಿ ಸಂಸ್ಥೆಯ ಪದಾಧಿಕಾರಿ ರಾಜು ಬಾಳಿಗ ಮಾತನಾಡಿ, ಸವಿತಾ ಮತ್ತು ಗಣೇಶ್‌ ದಂಪತಿಯ ವಿಶೇಷ ಚೇತನ ಪುತ್ರಿಯರಾದ ರಮ್ಯಾ ಮತ್ತು ರಶ್ಮಿ ವಿದ್ಯಾಭ್ಯಾಸಕ್ಕೆ ಮೈಸೂರಿನಲ್ಲಿರುವ ವಿಶೇಷ ಶಿಕ್ಷ ಣ ಸಂಸ್ಥೆಗೆ ಸೇರಿಸಲು ಪ್ರಯತ್ನಿಸುತ್ತೇನೆ ಎಂಬ ಭರವಸೆ ನೀಡಿದರು. ಇದರೊಂದಿಗೆ ಮಕ್ಕಳ ವೈದ್ಯ ದಾಖಲೆಗಳನ್ನು ನೀಡಿದ್ದೇ ಆದಲ್ಲಿ ಅವರ ಮುಂದಿನ ಚಿಕಿತ್ಸೆಗೆ ಸಹಕರಿಸಲಾಗುವುದು ಎಂದರು.

ಈಗಾಗಲೇ ದಂಪತಿಯ ಇನ್ನೊಬ್ಬ ಪುತ್ರಿ ಸೋಮವಾರಪೇಟೆಯ ಸಾಂದೀಪನಿ ವಿದ್ಯಾ ಸಂಸ್ಥೆಯಲ್ಲಿ 2ನೇ ತರಗತಿ ಓದುತ್ತಿದ್ದು, ಈಕೆಯ ವಿದ್ಯಾಭ್ಯಾಸವನ್ನು ವಿದ್ಯಾಸಂಸ್ಥೆಯ ಮುಖ್ಯಸ್ಥ ರೊಟೇರಿಯನ್‌ ಲಿಖಿತ್‌ ದಾಮೋದರ್‌ ಉಚಿತವಾಗಿ ನೀಡುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

ಚೆಕ್‌ ವಿತರಣೆ ಸಂದರ್ಭ ಮೈಸೂರು ರೋಟರಿ ಮಿಡ್‌ ಟೌನ್‌ ಸಂಸ್ಥೆ ಪದಾಧಿಕಾರಿಗಳಾದ ಆಲೆಮಾಡ ಅಯ್ಯಣ್ಣ, ಸಂಜಯ್‌ , ಸೋಮವಾರಪೇಟೆ ರೋಟರಿ ಸಂಸ್ಥೆಯ ಪದಾಧಿಕಾರಿ ಭರತ್‌ ಭೀಮಯ್ಯ, ಮೋಹನ್‌ ರಾಮ್‌, ಪ್ರಕಾಶ್‌ ಮತ್ತು ನಾಗೇಶ್‌ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ