ಆ್ಯಪ್ನಗರ

ಕ್ಲೋಸ್ಬರ್ನ್‌ ಶಾಲೆ: ಶೀಘ್ರ ಕಾಮಗಾರಿ ಆರಂಭಕ್ಕೆ ಆಗ್ರಹ

ತಾಲೂಕಿನ ಕ್ಲೋಸ್ಬರ್ನ್‌ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹೊಸ ಕಟ್ಟಡ ಕಾಮಗಾರಿಗೆ ಟೆಂಡರ್‌ ಆಗಿದೆಯಾದರೂ ಸಂಬಂಧಪಟ್ಟವರು ಇದರತ್ತ ಗಮನಹರಿಸದೇ ಇರುವ ಬಗ್ಗೆ ಸ್ಥಳೀಯರು ಹಾಗೂ ಶಾಲಾ ಅಭಿವೃದ್ಧಿ ಸಮಿತಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಆರಂಭಿಸುವಂತೆ ಆಗ್ರಹಿಸುತ್ತಿದ್ದಾರೆ.

Vijaya Karnataka 23 Jun 2019, 9:15 pm
ಮಡಿಕೇರಿ: ತಾಲೂಕಿನ ಕ್ಲೋಸ್ಬರ್ನ್‌ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹೊಸ ಕಟ್ಟಡ ಕಾಮಗಾರಿಗೆ ಟೆಂಡರ್‌ ಆಗಿದೆಯಾದರೂ ಸಂಬಂಧಪಟ್ಟವರು ಇದರತ್ತ ಗಮನಹರಿಸದೇ ಇರುವ ಬಗ್ಗೆ ಸ್ಥಳೀಯರು ಹಾಗೂ ಶಾಲಾ ಅಭಿವೃದ್ಧಿ ಸಮಿತಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಆರಂಭಿಸುವಂತೆ ಆಗ್ರಹಿಸುತ್ತಿದ್ದಾರೆ.
Vijaya Karnataka Web closeburn school demands for rapid work
ಕ್ಲೋಸ್ಬರ್ನ್‌ ಶಾಲೆ: ಶೀಘ್ರ ಕಾಮಗಾರಿ ಆರಂಭಕ್ಕೆ ಆಗ್ರಹ


1,996ರಲ್ಲಿ ನಿರ್ಮಾಣವಾದ ಶಾಲೆ ಮೂರೂವರೆ ವರ್ಷದ ಹಿಂದೆ ಶಿಥಿಲಾವಸ್ಥೆಗೆ ತಲುಪಿತ್ತು. ಚಾವಣಿ ಹಾಗೂ ಗೋಡೆಯನ್ನು ಸರಿಪಡಿಸಿ ಎಂದು ಶಾಲೆಯ ಹಳೆ ವಿದ್ಯಾರ್ಥಿಗಳು, ಪೋಷಕರು, ಶಾಲಾ ಅಭಿವೃದ್ಧಿ ಸಮಿತಿಯವರು ಸಂಬಂಧಪಟ್ಟ ಇಲಾಖೆಗೆ ನಿರಂತರವಾಗಿ ಮನವಿ ಸಲ್ಲಿಸಿದ್ದರು. ಸುಮಾರು ಎರಡು ವರ್ಷಗಳ ನಂತರ ಎಚ್ಚೆತ್ತ ಇಲಾಖೆಯ ಅಧಿಕಾರಿಗಳು ಚಾವಣಿ ದುರಸ್ತಿಗೆ ಮುಂದಾದರು. ಆದರೆ, ಇಷ್ಟರಲ್ಲಾಗಲೇ ಚಾವಣಿ ಮಾತ್ರವಲ್ಲದೇ ಗೋಡೆ ಕೂಡ ಬೀಳುವ ಹಂತದಲ್ಲಿದ್ದರಿಂದ ಹೊಸ ಕಟ್ಟಡ ಮಾಡುವಂತೆ ಸಂಬಂಧಪಟ್ಟವರು ಇಲಾಖೆಗೆ ಮನವಿ ಮಾಡಿದರು.

ಇದೇ ಸಂದರ್ಭ ಶಾಲಾಭಿವೃದ್ಧಿ ಸಮಿತಿ ತುಸು ಕಾಳಜಿ ತೋರಿ ತಾ.ಪಂ. ಮೇಲೆ ಒತ್ತಡ ಹೇರಿ ಬೀಳುವ ಹಂತದಲ್ಲಿದ್ದ ಕಟ್ಟಡ ತೆರವು ಮಾಡಿತು. ವಿದ್ಯಾರ್ಥಿಗಳಿಗೆ ಪರ್ಯಾಯ ಕಟ್ಟಡದಲ್ಲಿ ತರಗತಿ ನಡೆಸಲು ವ್ಯವಸ್ಥೆಯಾಯಿತು. ಈ ನಡುವೆ ತಾ.ಪಂ. ಸದಸ್ಯರ ಅನುದಾನ 2.5 ಲಕ್ಷ ರೂ. ವೆಚ್ಚದಲ್ಲಿ ಒಂದು ಕೊಠಡಿಯ ನವೀಕರಣ ಮಾಡಲಾಯಿತು. ಇದರೊಂದಿಗೆ ಹೊಸ ಕಟ್ಟಡ ನಿರ್ಮಾಣಕ್ಕೆ ಜಿ.ಪಂ. ಮೂಲಕ 21 ಲಕ್ಷ ರೂ. ಮಂಜೂರಾಯಿತು. ಈಗ ಇದೇ ಹಣದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲು ಸರಕಾರವೇ ಸೂಚಿಸಿದೆಯಾದರೂ ಸಂಬಂಧಪಟ್ಟವರು ಮಾತ್ರ ಇನ್ನು ಇತ್ತ ತಲೆ ಹಾಕಿಲ್ಲ. ಈಗಾಗಲೇ ಶಾಲೆಗಳು ಆರಂಭವಾಗಿದ್ದು, ಅಪಾಯದಲ್ಲಿರುವ ಗೋಡೆಗಳಿಂದ ಶಿಕ್ಷ ಕರು ಹಾಗೂ ವಿದ್ಯಾರ್ಥಿಗಳು ಶಾಲಾ ವಾತಾವರಣದಲ್ಲಿ ಆತಂಕದಿಂದಲೇ ಕಾಲ ಕಳೆಯುವಂತೆ ಆಗಿದೆ. ಪ್ರಸ್ತುತ ಶಾಲೆಯಲ್ಲಿ 72 ವಿದ್ಯಾರ್ಥಿಗಳು ಕಲಿಕೆಯಲ್ಲಿ ತೊಡಗಿಕೊಂಡಿದ್ದಾರೆ.

ಈಗಾಗಲೇ ಮಳೆಗಾಲ ಆರಂಭವಾಗಿದೆ. ಆದರೂ ಹೊಸ ಕಟ್ಟಡ ಕಾಮಗಾರಿ ಆಗುವ ಲಕ್ಷ ಣ ಕಾಣುತ್ತಿಲ್ಲ. ಈಗ ಚಾವಣಿ ತೆರವಾಗಿ ಉಳಿದಿರುವ ಗೋಡೆ ಮತ್ತೆ ಆತಂಕ ಹುಟ್ಟಿಸುತ್ತಿದೆ. ಯಾವಾಗ ಯಾರ ಮೇಲೆ ಬೀಳುತ್ತೋ ಗೊತ್ತಿಲ್ಲ. ಪಾಠ ಮಾಡುವ ಜತೆಗೆ ಮಕ್ಕಳು ಈ ಪಾಳು ಕಟ್ಟಡದೆಡೆಗೆ ಹೋಗದಂತೆ ನೋಡಿಕೊಳ್ಳೋದು ಶಿಕ್ಷ ಕರ ಹೆಚ್ಚುವರಿ ಹೊಣೆಯಾಗಿದೆ. ಆದರಿಂದ ಕೂಡಲೇ ಕಾಮಗಾರಿ ಪೂರ್ಣಗೊಳಿಸುವಂತೆ ಸಂಬಂಧಪಟ್ಟವರು ಆಗ್ರಹಿಸುತ್ತಿದ್ದಾರೆ.

ಈ ಬಗ್ಗೆ ವಿಕಗೆ ಪ್ರತಿಕ್ರಿಯಿಸಿದ ಮಡಿಕೇರಿ ಕ್ಷೇತ್ರ ಶಿಕ್ಷ ಣಾಧಿಕಾರಿ ಗಾಯತ್ರಿ, ಚುನಾವಣೆ ಹಿನ್ನೆಲೆ ಕೆಲಸ ನಿಧಾನವಾಗಿದೆ. ಈ ಬಗ್ಗೆ ಸಂಬಂಧಪಟ್ಟವರೊಂದಿಗೆ ಈಗಾಗಲೇ ಚರ್ಚೆ ನಡೆಸಿದ್ದು, ಶೀಘ್ರದಲ್ಲಿಯೇ ಕೆಲಸ ಪ್ರಾರಂಭಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ