ಆ್ಯಪ್ನಗರ

ಬೀದಿ ಬದಿಯಲ್ಲಿ ಸಂತ್ರಸ್ತರ ಬಟ್ಟೆ: ತನಿಖೆಗೆ ಆದೇಶ

ಇಂದಿರಾನಗರಕ್ಕೆ ತೆರಳುವ ರಸ್ತೆ ಬದಿಯಲ್ಲಿ ರಾಶಿ ರಾಶಿ ಬಟ್ಟೆ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿ ಶ್ರೀವಿದ್ಯಾ ಪೊಲೀಸರಿಗೆ ಸೂಚನೆ ನೀಡಿದ್ದಾರೆ.

Vijaya Karnataka 1 Sep 2018, 5:00 am
ಮಡಿಕೇರಿ : ಇಂದಿರಾನಗರಕ್ಕೆ ತೆರಳುವ ರಸ್ತೆ ಬದಿಯಲ್ಲಿ ರಾಶಿ ರಾಶಿ ಬಟ್ಟೆ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿ ಶ್ರೀವಿದ್ಯಾ ಪೊಲೀಸರಿಗೆ ಸೂಚನೆ ನೀಡಿದ್ದಾರೆ.
Vijaya Karnataka Web cloth on the street order to investigate
ಬೀದಿ ಬದಿಯಲ್ಲಿ ಸಂತ್ರಸ್ತರ ಬಟ್ಟೆ: ತನಿಖೆಗೆ ಆದೇಶ


ದಾನಿಗಳಿಂದ ಸಂಗ್ರಹಿಸಿ ನಿರಾಶ್ರಿತರಿಗೆ ವಿತರಿಸಲು ಇಟ್ಟಿದ್ದ ಬಟ್ಟೆಗಳನ್ನು ಜಿಲ್ಲಾಡಳಿತ ಇಂದಿರಾನಗರದ ಮುಖ್ಯ ರಸ್ತೆಯಲ್ಲಿ ಸುರಿದಿದೆ ಎಂದು ಆರೋಪಿಸಿ ಅಲ್ಲಿನ ನಿವಾಸಿಗಳು ಪ್ರತಿಭಟನೆ ನಡೆಸಿರುವ ಬಗ್ಗೆ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿದೆ.

ಈ ಸಂಬಂಧ ಜಿಲ್ಲಾಡಳಿತ ಪರಿಶೀಲಿಸಿದ್ದು, ಇಂದಿರಾನಗರದ ನಿವಾಸಿ ರಾಜು ಮತ್ತು ಇತರೆ ಇಪ್ಪತ್ತು ಜನರು ತಮಗೆ ಬಟ್ಟೆ ಅವಶ್ಯಕತೆ ಇದ್ದು, ಬಟ್ಟೆ ನೀಡುವಂತೆ ವಿನಂತಿಸಿದ್ದರು. ಆ ನಿಟ್ಟಿನಲ್ಲಿ ಜಿಲ್ಲಾಡಳಿತ ಭವನದಲ್ಲಿರುವ ಪರಿಹಾರ ಸಾಮಗ್ರಿಗಳ ದಾಸ್ತಾನು ಕೇಂದ್ರದಿಂದ 5 ಬಂಡಲ್‌ ಹಳೇ ಬಟ್ಟೆಗಳನ್ನು ಪಡೆದುಕೊಂಡು ಸಿಟಿಎಂ 4505 ಸಂಖ್ಯೆಯ ವಾಹನದಲ್ಲಿ ಹೋಗಿರುವುದಾಗಿ ದಾಸ್ತಾನು ಕೇಂದ್ರದ ನೋಡಲ್‌ ಅಧಿಕಾರಿ ತಿಳಿಸಿದ್ದಾರೆ.

ಬಟ್ಟೆಯ ಅವಶ್ಯಕತೆ ಇದೆ ಎಂದು ವಿನಂತಿಸಿ ಪಡೆದುಕೊಂಡು ಉಪಯೋಗಿಸದೆ ಬಿಸಾಡುವುದರ ಮೂಲಕ ಜಿಲ್ಲಾಡಳಿತಕ್ಕೆ ಮುಜುಗರ ಉಂಟು
ಮಾಡಿದ್ದಾರೆ. ಆದ್ದರಿಂದ ಈ ಬಗ್ಗೆ ತನಿಖೆ ನಡೆಸಿ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕಾನೂನು ಕ್ರಮವಹಿಸಲು ಹಾಗೂ ತೆಗೆದುಕೊಂಡ ಕ್ರಮದ ಬಗ್ಗೆ ವರದಿ ನೀಡುವಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯವರಿಗೆ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಪತ್ರ ಬರೆದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ