ಆ್ಯಪ್ನಗರ

ಮುಖ್ಯಮಂತ್ರಿ ಭೇಟಿ: ಹೆಲಿಪ್ಯಾಡ್‌ ಪರಿಶೀಲನೆ

ಜಿಲ್ಲೆಗೆ ಫೆ.28ರಂದು ಮುಖ್ಯಮಂತ್ರಿ ಕುಮಾರಸ್ವಾಮಿ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ಹೆಲಿಪ್ಯಾಡ್‌ ಪರಿಶೀಲನೆ ನಡೆಯಿತು.

Vijaya Karnataka 25 Feb 2019, 5:00 am
ಕುಶಾಲನಗರ
Vijaya Karnataka Web cm visit helipad inspected
ಮುಖ್ಯಮಂತ್ರಿ ಭೇಟಿ: ಹೆಲಿಪ್ಯಾಡ್‌ ಪರಿಶೀಲನೆ


ಜಿಲ್ಲೆಗೆ ಫೆ.28ರಂದು ಮುಖ್ಯಮಂತ್ರಿ ಕುಮಾರಸ್ವಾಮಿ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ಹೆಲಿಪ್ಯಾಡ್‌ ಪರಿಶೀಲನೆ ನಡೆಯಿತು.

ಕೊಡಗು ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಅಧಿಕಾರಿಗಳೊಂದಿಗೆ ಹಾರಂಗಿಯಲ್ಲಿ ನಿರ್ಮಿಸಿರುವ ಹೆಲಿಪ್ಯಾಡ್‌ ಪರಿಶೀಲನೆ ನಡೆಸಿದರು. ದಿಡ್ಡಳ್ಳಿಯಿಂದ ತೆರವುಗೊಳಿಸಿದ ಆದಿವಾಸಿಗಳಿಗೆ ಸಮೀಪದ ಬ್ಯಾಡಗೊಟ್ಟ ಮತ್ತು ಬಸವನಹಳ್ಳಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಮನೆಗಳ ಹಸ್ತಾಂತರ ಫೆ. 28ರಂದು ನಡೆಯಲಿರುವ ಬಗ್ಗೆ ಮಾಹಿತಿ ತಿಳಿದುಬಂದಿದೆ. ಎರಡು ಪುನರ್ವಸತಿ ಶಿಬಿರಗಳಲ್ಲಿ ಒಟ್ಟು 528 ಮನೆಗಳ ಪೈಕಿ 300 ಮನೆಗಳು ಈಗಾಗಲೇ ಪೂರ್ಣಗೊಂಡಿದ್ದು ಬಾಕಿ ಉಳಿದ ಮನೆಗಳು ಮುಕ್ತಾಯ ಹಂತದಲ್ಲಿದೆ. ಪೂಣಗೊಂಡಿರುವ ಮನೆಗಳು ಮತ್ತು ಹಕ್ಕು ಪತ್ರವನ್ನು ಕುಮಾರಸ್ವಾಮಿ ಅವರು ಹಸ್ತಾಂತರಿಸಲಿದ್ದಾರೆ. ಬಸವನಹಳಿಯಲ್ಲಿ ಸರಕಾರಿ ಪ್ರೌಢಶಾಲಾ ಆವರಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮನೆಗಳ ಉದ್ಘಾಟನೆ ಮತ್ತು ಫಲಾನಭವಿಗಳಿಗೆ ಮನೆಗಳ ಹಸ್ತಾಂತರ ಕಾರ್ಯ ನಡೆಯಲಿದೆ. ಮುಖ್ಯಮಂತ್ರಿಗಳ ಆಗಮನದ ಹಿನ್ನಲೆಯಲ್ಲಿ ಪುನರ್ವಸತಿ ಕೇಂದ್ರದಲ್ಲಿ ಕಾಂಕ್ರಿಟ್‌ ರಸ್ತೆ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ