ಆ್ಯಪ್ನಗರ

ಕೊರೊನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆ, 'ಕೊಡಗು ಲಾಕ್ ಡೌನ್'

ಕೊರೊನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆಯಾಗಿ ಕೊಡಗು ಜಿಲ್ಲೆಯನ್ನು ಲಾಕ್‌ಡೌನ್ ಮಾಡಲಾಗಿದೆ. ಹೊರ ಜಿಲ್ಲೆಗಳಿಂದ ಬರುವ ವಾಹನಗಳಿಗೆ ಜಿಲ್ಲೆಯ ಗಡಿಭಾಗದಲ್ಲಿ ತಡೆಹಿಡಿಯಲಾಗಿದೆ.

Vijaya Karnataka Web 23 Mar 2020, 9:06 am
ಮಡಿಕೇರಿ: ಕೊಡಗು ಸೇರಿ 9 ಜಿಲ್ಲೆಗಳನ್ನು ಲಾಕ್‌ಡೌನ್‌ ಮಾಡಲು ಸಿಎಂ ಯಡಿಯೂರಪ್ಪ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಸರಕಾರದ ಆದೇಶದ ಜೊತೆ ಜಿಲ್ಲಾಡಳಿತದಿಂದ ಕೆಲವು ನಿರ್ಣಯ ತೆಗೆದುಕೊಳ್ಳ ಲಾಗಿದೆ ಎಂದು ಕೊಡಗು ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ತಿಳಿಸಿದ್ದಾರೆ.
Vijaya Karnataka Web kodagu lockdown


ಲಾಕ್‌ಡೌನ್‌ ತಕ್ಷಣವೇ ಹೇರಿದ್ದರಿಂದ ಜನರಿಗೆ ತೊಂದರೆ ಆಗಬಹುದು. ಹಾಗಾಗಿ ಜನರಿಗೆ ತೊಂದರೆ ಆಗದಂತೆ ಪ್ರತೀ ಹೋಬಳಿಗೆ ಜಿಲ್ಲಾಮಟ್ಟದ ಅಧಿಕಾರಿ ನೇಮಕ ಮಾಡಲಾಗಿದೆ. ಪ್ರತೀ ಗ್ರಾಮ ಪಂಚಾಯ್ತಿಯಲ್ಲಿ ಹೋಮ್‌ ಕ್ವಾರಂಟೈನ್‌ ಸೌಲಭ್ಯ ಕಲ್ಪಿಸಲು ಯೋಜನೆ ತಯಾರಿಸಲಾಗುತ್ತಿದೆ. ಎರಡು ತಿಂಗಳ ರೇಷನ್ ಅನ್ನು ಜಿಲ್ಲೆಯ ಜನರಿಗೆ ವಿತರಣೆ ಮಾಡಲಾಗುತ್ತದೆ. ಜಿಲ್ಲೆಯ ಪಿಯುಸಿ ಮಕ್ಕಳು ಹೊರಗೆ ಓದುತ್ತಿದ್ದರೆ ಜಿಲ್ಲೆಯ ಹೊರಗೆ ಹೋಗುವಾಗ ಚೆಕ್‌ಪೋಸ್ಟ್‌ನಲ್ಲಿ ಪಾಸ್‌ ವಿತರಣೆ ಮಾಡಲಾಗುವುದು. ತುರ್ತು ಸಂದರ್ಭ ದಲ್ಲಿ ರಿಲ್ಯಾಕ್ಸೇಷನ್ ಕೊಡಲು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕ್ರಮ ತೆಗೆದುಕೊಳ್ಳುತ್ತಾರೆ ಎಂದರು. ಹೋಮ್‌ ಕ್ವಾರಂಟೈನ್‌ನಲ್ಲಿರುವವರ ಪೈಕಿ ಕುಟುಂಬದ ಒಬ್ಬರು ಬಂದು ದಿನಸಿ ಸಾಮಗ್ರಿ ತೆಗೆದುಕೊಂಡು ಹೋಗಬೇಕು ಎಂದು ಹೇಳಿದ್ದಾರೆ.

ಒಟ್ಟು 247 ಮಂದಿ ವಿದೇಶ ಪ್ರವಾಸ ಮಾಡಿದವರನ್ನು ಹೋಮ್‌ ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ಐಸೋಲೇಷನ್‌ನಲ್ಲಿ ಇದ್ದ 4 ಮಂದಿ ರಿಪೋರ್ಟ್‌ ನೆಗೆಟಿವ್‌ ಬಂದಿದೆ, ಹಾಗಾಗಿ ಮನೆಗೆ ಕಳುಹಿಸಲಾಗಿದೆ. ಒಂದು ಪಾಸಿಟೀವ್‌ ಸೇರಿ ಹೊಸದಾಗಿ ನಾಲ್ವರನ್ನು ಐಸೋಲೇಷನ್‌ನಲ್ಲಿ ಇಡಲಾಗಿದೆ. ಆ ನಾಲ್ವರ ರಿಪೋರ್ಟ್‌ ಬರಬೇಕಾಗಿದೆ, ಅದಕ್ಕಾಗಿ ಕಾಯಲಾಗುತ್ತಿದೆ. ಪಾಸಿಟೀವ್‌ ಇದ್ದ ವ್ಯಕ್ತಿಯ ಸಂಪರ್ಕದಲ್ಲಿದ್ದ 70 ಮಂದಿಯನ್ನು ಪತ್ತೆ ಹಚ್ಚಿ ಹೋಮ್‌ ಕ್ವಾರಂಟೈನ್‌ ಮಾಡಲಾಗಿದೆ. ಪಾಸಿಟಿವ್‌ ಇದ್ದವರ ಕುಟುಂಬದ ಸದಸ್ಯರನ್ನು ಪರೀಕ್ಷೆಗೆ ಒಳಪಡಿಸಲಾಗುವುದು. ಪಾಸಿಟಿವ್‌ ವ್ಯಕ್ತಿ ಜೊತೆ ವಿಮಾನ ಮತ್ತು 2 ಬಸ್ಸುಗಳಲ್ಲಿ ಪ್ರಯಾಣಿಸಿದವರ ಪತ್ತೆ ಕಾರ್ಯ ಪ್ರಗತಿಯಲ್ಲಿದೆ. ಸ್ಟೇಟ್‌ ಸರ್ವೆಯಲನ್ಸ್‌ ಟೀಮ್‌ ಈ ಕಾರ್ಯದಲ್ಲಿ ನಿರತವಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಶಿಕ್ಷಣ ಸಚಿವರ ಆದೇಶದಂತೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮುಂದೂಡಲಾಗಿದೆ. ಶಿಕ್ಷಕರಿಗೆ ರಜೆ ನೀಡಲಾಗಿದೆ. ಆದರೆ ಸಿಬ್ಬಂದಿ ಕೊರತೆ ಹಿನ್ನೆಲೆ ಇವರು ಜಿಲ್ಲಾಡಳಿತದೊಂದಿಗೆ ಕಾರ್ಯ ನಿರ್ವಹಿಸಲಿದ್ದಾರೆ ಎಂದರು. ಜಿಲ್ಲಾಎಸ್ಪಿ ಡಾ.ಸುಮನ್‌ ಡಿ.ಪನ್ನೇಕರ್‌, ಡಿಎಚ್‌ಒ ಡಾ.ಮೋಹನ್‌ ಇದ್ದರು.

ಕೊಡಗು ಲಾಕ್ ಡೌನ್
ಕೊರೊನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆಯಾಗಿ ಕೊಡಗು ಜಿಲ್ಲೆಯನ್ನು ಲಾಕ್‌ಡೌನ್ ಮಾಡಲಾಗಿದೆ. ಹೊರ ಜಿಲ್ಲೆಗಳಿಂದ ಬರುವ ವಾಹನಗಳಿಗೆ ಜಿಲ್ಲೆಯ ಗಡಿಭಾಗದಲ್ಲಿ ತಡೆಹಿಡಿಯಲಾಗಿದ್ದು, ಬೆಳ್ಳಂಬೆಳಗ್ಗೆ ಗೇಟ್ ಬಂದ್ ಮಾಡಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ