ಆ್ಯಪ್ನಗರ

ಸಂತ್ರಸ್ತರಿಗೆ ಶಾಶ್ವತ ಸೂರು ಕಲ್ಪಿಸಿ

ನದಿ ದಡಗಳಲ್ಲಿವಾಸಿಸುತ್ತಿರುವ ಕುಟುಂಬಗಳು ಮನೆ, ಆಸ್ತಿ ಪಾಸ್ತಿ ಪ್ರವಾಹದಿಂದ ಕಳೆದುಕೊಂಡು ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿರುವ ಹಿನ್ನೆಲೆಯಲ್ಲಿಸರಕಾರ ಹಾಗೂ ಜಿಲ್ಲಾಡಳಿತ ಸಂತ್ರಸ್ತರಿಗೆ ಶಾಶ್ವತ ಸೂರು ಕಲ್ಪಿಸಬೇಕು ಎಂದು ನಮ್ಮ ಕೊಡಗು ತಂಡದ ಅಧ್ಯಕ್ಷ ನೌಷಾದ್‌ ಜನ್ನತ್‌ ಒತ್ತಾಯಿಸಿದರು .

Vijaya Karnataka 10 Sep 2019, 8:53 pm
ಸಿದ್ದಾಪುರ: ನದಿ ದಡಗಳಲ್ಲಿವಾಸಿಸುತ್ತಿರುವ ಕುಟುಂಬಗಳು ಮನೆ, ಆಸ್ತಿ ಪಾಸ್ತಿ ಪ್ರವಾಹದಿಂದ ಕಳೆದುಕೊಂಡು ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿರುವ ಹಿನ್ನೆಲೆಯಲ್ಲಿಸರಕಾರ ಹಾಗೂ ಜಿಲ್ಲಾಡಳಿತ ಸಂತ್ರಸ್ತರಿಗೆ ಶಾಶ್ವತ ಸೂರು ಕಲ್ಪಿಸಬೇಕು ಎಂದು ನಮ್ಮ ಕೊಡಗು ತಂಡದ ಅಧ್ಯಕ್ಷ ನೌಷಾದ್‌ ಜನ್ನತ್‌ ಒತ್ತಾಯಿಸಿದರು .
Vijaya Karnataka Web create permanent shelter for victims
ಸಂತ್ರಸ್ತರಿಗೆ ಶಾಶ್ವತ ಸೂರು ಕಲ್ಪಿಸಿ


ಜಿಲ್ಲೆಯಲ್ಲಿಸಂಭವಿಸಿದ ಪ್ರವಾಹದಿಂದ ಸಂತ್ರಸ್ತರಾಗಿರುವ ಅದೆಷ್ಟೋ ಕುಟುಂಬಗಳನ್ನು ಶಾಶ್ವತ ಯೋಜನೆಗಳ ಮೂಲಕ ಮುಂದೆ ತರಬೇಕೆಂದ ಅವರು, ಈಚೆಗೆ ಅಸ್ತಿತ್ವಕ್ಕೆ ಬಂದ ನಮ್ಮ ಕೊಡಗು ತಂಡ ಸಮಾಜಮುಖಿ ಕಾರ್ಯಗಳೊಂದಿಗೆ ಸಮಾಜ ಸೇವೆಯಲ್ಲಿತೊಡಗಿಸಿಕೊಳ್ಳುವ ಮೂಲಕ ಸಂತ್ರಸ್ತರಿಗೆ ನೆರವಾಗುತ್ತಿದೆ. ನಮ್ಮ ಕೊಡಗು ತಂಡದ ನೇತೃತ್ವದಲ್ಲಿ ಬೆಂಗಳೂರಿನ ಬನವಾಸಿ ಕನ್ನಡಿಗರು ಮತ್ತು ಉದಯ್‌ ನೇತೃತ್ವದ ವೇ ಫಾರ್‌ ಲೈಫ್‌ ಹಾಗೂ ಜಯಂತಿ ಗ್ರೂಪಿನಿಂದ 5 ಲಕ್ಷ ಮೌಲ್ಯದ ಸಾಮಗ್ರಿಗಳ 400 ಕಿಟ್‌ ಗಳನ್ನು ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಹ್ಯ, ಕಕ್ಕಟಕಾಡು, ಕೂಡುಗದ್ದೆ, ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಬಾರಗುಂಡಿ, ಬೆಟ್ಟದಕಾಡು ಪ್ರವಾಹ ಪೀಡಿತ ಪ್ರದೇಶಗಳ ಕುಟುಂಬಗಳಿಗೆ ವಿತರಣೆ ಮಾಡಲಾಯಿತು.

ಈ ಸಂದರ್ಭ ಬೆಂಗಳೂರು ಸಂಘಟನೆಗಳ ಪ್ರಮುಖರಾದ ಜೈ ಕಿರಣ್‌, ಉದಯ್‌, ಚಂದನ್‌ , ಸೀಮಾ, ಕಿರಣ್‌ ಮಾಯಿ, ಅಜಿತ್‌, ಉಮೇಶ್‌, ರೋಷನ್‌, ಲೋಹಿತ್‌, ಬಶೀರ್‌, ರೆಜಿತ್‌ ಕುಮಾರ್‌, ಗಿರೀಶ್‌ ಜಾಸ್ನ, ಕೃಷ್ಣ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ