ಆ್ಯಪ್ನಗರ

ಹೈನುಗಾರಿಕಾ ಅಭಿವೃದ್ಧಿ ಯೋಜನೆ ವಿಸ್ತರಣೆ

ಕೇಂದ್ರ ಕೃಷಿ ಮತ್ತು ರೈತ ಕ್ಷೇಮ ಸಚಿವಾಲಯ ಹೈನುಗಾರಿಕೆ ಅಭಿವೃದ್ಧಿ ಯೋಜನೆಯನ್ನು ದ್ವಿತೀಯ ವರ್ಷಕ್ಕೂ (2018-19) ವಿಸ್ತರಿಸಿದೆ ಎಂದು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ (ನಬಾರ್ಡ್‌) ಸಹಾಯಕ ಮಹಾ ಪ್ರಬಂಧಕ ಮುಂಡಂಡ ಸಿ.ನಾಣಯ್ಯ ಅವರು ತಿಳಿಸಿದ್ದಾರೆ.

Vijaya Karnataka 22 Jun 2018, 5:00 am
ಮಡಕೇರಿ: ಕೇಂದ್ರ ಕೃಷಿ ಮತ್ತು ರೈತ ಕ್ಷೇಮ ಸಚಿವಾಲಯ ಹೈನುಗಾರಿಕೆ ಅಭಿವೃದ್ಧಿ ಯೋಜನೆಯನ್ನು ದ್ವಿತೀಯ ವರ್ಷಕ್ಕೂ (2018-19) ವಿಸ್ತರಿಸಿದೆ ಎಂದು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ (ನಬಾರ್ಡ್‌) ಸಹಾಯಕ ಮಹಾ ಪ್ರಬಂಧಕ ಮುಂಡಂಡ ಸಿ.ನಾಣಯ್ಯ ಅವರು ತಿಳಿಸಿದ್ದಾರೆ.
Vijaya Karnataka Web dairy farming development schem
ಹೈನುಗಾರಿಕಾ ಅಭಿವೃದ್ಧಿ ಯೋಜನೆ ವಿಸ್ತರಣೆ


ಹೈನುಗಾರಿಕೆ ಅಭಿವೃದ್ಧಿ ಯೋಜನೆಯನ್ನು ಅನುಷ್ಠಾನ ಮತ್ತು ಅದಕ್ಕೆ ಸಂಬಂಧಿಸಿದ ಪ್ರೋತ್ಸಾಹ ಧನವನ್ನು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ (ನಬಾರ್ಡ್‌) ಕಲ್ಪಿಸಲಿದೆ ಎಂದು (ನಬಾರ್ಡ್‌) ಸಹಾಯಕ ಮಹಾ ಪ್ರಬಂಧಕರು ತಿಳಿಸಿದ್ದಾರೆ.

ಈ ಯೋಜನೆಯ ಪ್ರಯೋಜನೆಯನ್ನು ಹೈನುಗಾರಿಕಾ ರೈತರ, ಮಹಿಳಾ ಸ್ವ-ಸಹಾಯ ಸಂಘ, ಸಹಕಾರಿ ಸಂಘಗಳು, ರೈತ ಉತ್ಪಾದಕ ಸಂಘಟನೆಗಳಿಗೆ ಆದ್ಯತೆಯಿದೆ. ಜತೆಗೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ, ಭೂರಹಿತ, ಸಣ್ಣ ಮತ್ತು ಮಧ್ಯಮ ರೈತರ ಬಡತನ ರೇಖೆಯ ಕೆಳಗಿರುವ ಹಾಗೂ ಪ್ರಕೃತಿ ವಿಕೋಪಕ್ಕೆ ತುತ್ತಾದ ಪ್ರದೇಶದ ಫಲಾನುಭವಿಗಳಿಗೆ ವಿಷೇಷ ಆದ್ಯತೆ ನೀಡಲಾಗುತ್ತದೆ ಎಂದು ಮುಂಡಂಡ ಸಿ.ನಾಣಯ್ಯ ಅವರು ಹೇಳಿದ್ದಾರೆ.

ಈ ಯೋಜನೆಯಡಿ ಶೇ. 25 ಪ್ರೋತ್ಸಾಹ ಧನ ಸಾಮಾನ್ಯ ವರ್ಗದವರಿಗೆ ಲಭ್ಯವಿದ್ದು, ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲನುಭವಿಗಳಿಗೆ ಶೇ.33.33 ಪ್ರೋತ್ಸಾಹ ಧನ ನೀಡಲಾಗುತ್ತದೆ. ರಾಷ್ಟ್ರ ಮಟ್ಟದಲ್ಲಿ 323 ಕೋಟಿ ರೂ.ಗಳನ್ನು ಈ ಯೋಜನೆಯ ಅನುಷ್ಠಾನಕ್ಕಾಗಿ ಕಾಯ್ದಿರಿಸಿದ್ದು, ಕರ್ನಾಟಕ ರಾಜ್ಯಕ್ಕೆ ರೂ.12.46 ಕೋಟಿ ನಿಗದಿಪಡಿಸಲಾಗಿದೆ. ಈ ಪ್ರೋತ್ಸಾಹ ಧನವನ್ನು ಆದ್ಯತೆಯ ಮೇಲೆ ವಿತರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಈ ಯೋಜನೆಯಡಿ ಕನಿಷ್ಠ 2 ರಿಂದ 10 ಹಸುಗಳ ಹೈನುಗಾರಿಕಾ ಘಟಕ, ಗರಿಷ್ಠ 20 ಗುಣಮಟ್ಟದ ಕರುಗಳ ಸಾಕಣೆ, ಎರೆಹುಳ ಗೊಬ್ಬರದ ಉತ್ಪಾದನಾ ಘಟಕ, ಹಸು ಸಾಕಣೆಯ ಜತೆಯಲ್ಲಿ, ಹಾಲಿನ ಉಪಕರಣಗಳ ಖರೀದಿ ಮತ್ತು ಶಿತಲೀಕರಣ ಘಟಕದ ಸ್ಥಾಪನೆ, ಹಾಲು ಸಂರಕ್ಷ ಣಾ ಘಟಕ ಮತ್ತು ಉಪಕರಣಗಳ ಖರೀದಿ, ಹಾಲು ಮತ್ತು ಅದರ ಉತ್ಪನ್ನಗಳ ಸಾಗಣೆ ವ್ಯವಸ್ಥೆ, ಶೈತ್ಯಾಗಾರದ ವ್ಯವಸ್ಥೆ, ಪಶು ಚಿಕಿತ್ಸಾಲಯದ ಘಟಕದ ಸ್ಥಾಪನೆ, ಡೈರಿ ಉತ್ಪನ್ನಗಳ ಮಾರಾಟ ಕೇಂದ್ರದ ಸ್ಥಾಪನೆ ಮತ್ತಿತರವನ್ನು ನಿರ್ವಹಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃಧ್ಧಿ ಬ್ಯಾಂಕ್‌ ಸಿದ್ಧಪಡಿಸಿರುವ ಪ್ರದೇಶವಾರು ಅಭಿವೃದ್ಧಿ ಯೋಜನೆಯಲ್ಲಿ ಹೈನುಗಾರಿಕೆಯೂ ಕೂಡ ಒಂದಾಗಿದ್ದು, ಈ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲು ಜಿಲ್ಲೆಯ ಎಲ್ಲ ಬ್ಯಾಂಕಿನ ವ್ಯವಸ್ಥಾಪಕರಿಗೆ ಮತ್ತು ಸಂಬಂಧಿತ ಇಲಾಖೆಗಳಿಗೆ ಈಗಾಗಲೇ ತಿಳಿಸಲಾಗಿದೆ.

ಆದ್ದರಿಂದ ಜಿಲ್ಲೆಯ ಆಸಕ್ತ ರೈತರು, ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರು, ರೈತ ಉತ್ಪಾದಕ ಸಂಸ್ಥೆಗಳು ಯೋಜನೆಯ ಸಂಪೂರ್ಣ ಪ್ರಯೋಜನೆ ಪಡೆದು, ಕೊಡಗು ಜಿಲ್ಲೆಯಲ್ಲಿ ಕ್ಷೀರ ಉತ್ಪಾದನಾ ಕ್ರಾಂತಿ ಮಾಡಿ, ರೈತರ ಆದಾಯವನ್ನು ಮುಂದಿನ 2022 ರಲ್ಲಿ ದ್ವಿಗುಣಗೊಳಿಸುವ ನಿಟ್ಟಿನಲಿ,್ಲ ಈ ಅವಕಾಶ ಬಳಸಿಕೊಳ್ಳುವಂತೆ ಕೋರಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ