ಆ್ಯಪ್ನಗರ

ಪ್ರಜಾಪ್ರಭುತ್ವ: ಮತದಾರನೇ ಶ್ರೇಷ್ಠ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ಪತ್ರಿಕಾ ರಂಗಕ್ಕಿಂತಲೂ ಮತದಾರನೇ ಶ್ರೇಷ್ಠ ಎಂದು ವಿಧಾನ ಪರಿಷತ್‌ ವಿರೋಧ ಪಕ್ಷ ದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.

Vijaya Karnataka 20 Mar 2019, 5:00 am
ಕುಶಾಲನಗರ
Vijaya Karnataka Web democracy voter supreme
ಪ್ರಜಾಪ್ರಭುತ್ವ: ಮತದಾರನೇ ಶ್ರೇಷ್ಠ


ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ಪತ್ರಿಕಾ ರಂಗಕ್ಕಿಂತಲೂ ಮತದಾರನೇ ಶ್ರೇಷ್ಠ ಎಂದು ವಿಧಾನ ಪರಿಷತ್‌ ವಿರೋಧ ಪಕ್ಷ ದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.

ಖಾಸಗಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪ್ರಬುದ್ಧರ ಗೋಷ್ಠಿ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ದೇಶದ ಒಳಿತು, ಕೆಡುಕು ಮತದಾರರ ಕೈಯಲ್ಲಿದೆ. ಚುನಾವಣಾ ಸಂದರ್ಭಗಳಲ್ಲಿ ಮತ ಬೇಡಿ ಜಯಗಳಿಸುವ ರಾಜಕಾರಣಿಗಳು ತಮ್ಮ ಅವಧಿಯಲ್ಲಿ ಕೈಗೊಂಡ ಕಾರ್ಯಯೋಜನೆಗಳು, ಪ್ರಗತಿಯ ಬಗ್ಗೆ ಮತದಾರನಿಗೆ ಮಾಹಿತಿ ಒದಗಿಸುವ ಜವಾಬ್ದಾರಿ ನಿಭಾಯಿಸಬೇಕಿದೆ ಎಂದರು.

ಕಳೆದ ಬಾರಿಯ ಲೋಕಸಭಾ ಚುನಾವಣಾ ಸಂದರ್ಭ ಮೋದಿಯ ಪರ ಮತ ಬೇಡಿದ ಬಿಜೆಪಿ ಕಾರ್ಯಕರ್ತರು, ಚುನಾಯಿತ ಜನಪ್ರತಿನಿಧಿಗಳು ಇದೀಗ ಮತದಾರರ ಪ್ರಶ್ನೆಗೆ ಉತ್ತರ ನೀಡುವಂತಹ ಸಂದರ್ಭ ಬಂದಿದೆ. ನರೇಂದ್ರ ಮೋದಿ ಪ್ರಧಾನಿಯಾಗಿ ಕೈಗೊಂಡ ಜನಪರ ಕಾರ್ಯಗಳ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸಬೇಕಿದೆ ಎಂದರು.

ಕಳೆದ 5 ವರ್ಷಗಳಲ್ಲಿ ಎನ್‌ಡಿಎ ತನ್ನ ಅಧಿಕಾರ ಅವಧಿಯಲ್ಲಿ ಅಭಿವೃದ್ಧಿಯಲ್ಲಿ ಅತಿ ವೇಗವಾಗಿ ದಾಪುಗಾಲಿರಿಸಿದೆ. 18 ಸಾವಿರ ಹಳ್ಳಿಗಳಿಗೆ ವಿದ್ಯುತ್‌ ಸಂಪರ್ಕ, ಉಚಿತ ಅಡುಗೆ ಅನಿಲ ಪೂರೈಕೆ, ಹಿಂದಿನ ಸರಕಾರಗಳಿಗೆ ಇಲ್ಲದಿದ್ದ ಇಚ್ಛಾಶಕ್ತಿ ತೋರುವ ಮೂಲಕ ಏಕರೂಪ ತೆರಿಗೆ ಜಾರಿಗೊಳಿಸಲಾಗಿದೆ.

ನೋಟ್‌ ಬ್ಯಾನ್‌ ಮೂಲಕ ಸಮಾಜವನ್ನು ದೋಚುತ್ತಿದ್ದವರಿಗೆ ತಕ್ಕ ಪಾಠ ಕಲಿಸಿ ದೇಶದ ಆರ್ಥಿಕ ಸುಧಾರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.

5 ವರ್ಷಗಳಲ್ಲಿ ಅನೇಕ ಸವಾಲು, ಸಮಸ್ಯೆ, ಆತಂಕಗಳ ನಡುವೆಯೂ ಕೂಡ ಹಲವು ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿ, ಮೇಲ್ಮಟ್ಟದಲ್ಲಿ ಭ್ರಷ್ಟಾಚಾರ ನಿಯಂತ್ರಿಸುವ ಮೂಲಕ ಮುಂದಿನ ದಿನಗಳಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನೀಡುವ ಭರವಸೆ ಮೂಡಿಸಿರುವ ಕೇಂದ್ರ ಸರಕಾರ ದೇಶದ ಕೀರ್ತಿ ಪತಾಕೆ ಹಾರಿಸಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ.ಭಾರತೀಶ್‌, ದೇಶದ ಹಿತ ಕಾಯುವ ಸರಕಾರ ರಚನೆಯಲ್ಲಿ ಪ್ರಬುದ್ಧ ಮತದಾರರು ಕೈಜೋಡಿಸಬೇಕಿದೆ. ನಿತ್ಯ ದೇಶಾಭಿವೃದ್ಧಿಯ ಬಗ್ಗೆ ಚಿಂತನೆ ಹರಿಸಿ ಆಂತರಿಕ ಶತ್ರುಗಳ ಸದೆಬಡಿಯುವ ಮೂಲಕ ದೇಶ ಕಟ್ಟುವ ಯುವ ಪಡೆಯ ರಚನೆ ಅಗತ್ಯವಿದೆ ಎಂದರು.

ಸಂವಾದದಲ್ಲಿ ಪಾಲ್ಗೊಂಡಿದ್ದವರು ಮೋದಿ ಸರಕಾರದ ಸಾಧನೆ, ಲೋಪಗಳು, ಜನಸಾಮಾನ್ಯರ ಇಂಗಿತ, ಆಕ್ರೋಶ, ಬೇಡಿಕೆಗಳ ಬಗ್ಗೆ ಅನಾವರಣಗೊಳಿಸಿದರು.

ಬಿಜೆಪಿ ಮಂಡಲ ಅಧ್ಯಕ್ಷ ಎಂ.ಎನ್‌.ಕುಮಾರಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಬಿನ್‌ ದೇವಯ್ಯ, ಮಾಜಿ ಸೈನಿಕ ಸುಧೀರ್‌, ನಗರ ಬಿಜೆಪಿ ಘಟಕ ಅಧ್ಯಕ್ಷ ಕೆ.ಜಿ.ಮನು, ಉಪಾಧ್ಯಕ್ಷ ಮಂಡೇಪಂಡ ಬೋಸ್‌ ಮೊಣ್ಣಪ್ಪ, ಕಾರ್ಯದರ್ಶಿ ಎಚ್‌.ಡಿ.ಶಿವಾಜಿ, ಹಿಂದುಳಿದ ವರ್ಗಗಳ ಪ್ರಮುಖ ಕೆ.ಎನ್‌.ದೇವರಾಜ್‌, ಯುವ ಮೋರ್ಚಾ ತಾಲೂಕು ಕಾರ್ಯಾಧ್ಯಕ್ಷ ಎಂ.ಡಿ.ಕೃಷ್ಣಪ್ಪ ಹಾಜರಿದ್ದರು.

ಇದಕ್ಕೂ ಮುನ್ನ ನಿಧನರಾದ ಗೋವಾ ಮುಖ್ಯಮಂತ್ರಿ ಮನೋಹರ್‌ ಪರಿಕ್ಕರ್‌ ಅವರಿಗೆ ಮೌನಾಚರಣೆ ಮೂಲಕ ಸಂತಾಪ ಸೂಚಿಸಲಾಯಿತು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ