ಆ್ಯಪ್ನಗರ

ನಾಯಕತ್ವ ಗುಣ ಬೆಳೆಸಿಕೊಳ್ಳಿ

ವಿದ್ಯಾರ್ಥಿಗಳು ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಪ್ರಾಂಶುಪಾಲ ಎಸ್.ಎಸ್. ಮಾದಯ್ಯ ಸಲಹೆ ನೀಡಿದರು.

Vijaya Karnataka Web 1 Sep 2016, 5:15 am
ಗೋಣಿಕೊಪ್ಪಲು: ವಿದ್ಯಾರ್ಥಿಗಳು ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಪ್ರಾಂಶುಪಾಲ ಎಸ್.ಎಸ್. ಮಾದಯ್ಯ ಸಲಹೆ ನೀಡಿದರು.
Vijaya Karnataka Web develop leadership qualities
ನಾಯಕತ್ವ ಗುಣ ಬೆಳೆಸಿಕೊಳ್ಳಿ


ಕಾವೇರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾಗಿ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ರಾಜಕೀಯ ಮನೋಭಾವನೆಯನ್ನು ಮೂಡಿಸುವುದು, ನಾಯಕತ್ವ ಗುಣಗಳನ್ನು ಬೆಳೆಸುವುದು, ದೇಶ-ವಿದೇಶಗಳ ರಾಜಕೀಯ ಪರಿಸ್ಥಿತಿಗಳನ್ನು ಅರಿಯಲು, ಶಿಸ್ತು-ಸಂಯಮದಂತಹ ಭಾವನೆಗಳನ್ನು ಬೆಳೆಸಿಕೊಳ್ಳಲು ಇಂತಹ ಚುನಾವಣೆಗಳು ಅಗತ್ಯ ಎಂದರು.

ವಿದ್ಯಾರ್ಥಿ ಸಂಘದ ಪದಾಧಿಕಾರಿ : ಜಂಟಿ ಕಾರ್ಯದರ್ಶಿಗಳಾಗಿ ದಿಕ್ಷಿತ್ ವಿಜಯ್‌ಕುಮಾರ್ ಮತ್ತು ಗ್ರೀಷ್ಮ ಗಂಗಮ್ಮ ತರಗತಿಯ ಪ್ರತಿನಿಧಿಗಳಾಗಿ ಸಚಿನ್ ತಮ್ಮಯ್ಯ ಎಂ.ಎಸ್., ರಶ್ಮಿ ಪಿ.ಎನ್., ದಿನೇಶ ವೈ.ಟಿ., ಋಷಿ ಪಾರ್ವತಿ ಸಿ.ಟಿ., ನಿರಂಜನ್ ಟಿ.ಆರ್., ಯೋಗಲಕ್ಷ್ಮಿ ಎ., ಲಿಖಿತ್ ಎಸ್.ಜೆ., ಗಗನ ವಿ.ಜಿ., ರೋಶನ್ ಗಣಪತಿ ಕೆ.ಡಿ., ಕಾವೇರಿ ಕೆ.ಬಿ., ಅಸ್ಬೀರ್ ಬಿ.ಎ., ಕೃತಿ ಪಿ.ಎಸ್., ಲಾವಣ್ಯ ಎ.ಬಿ., ರುಫೇದ್ ಆಯ್ಕೆಯಾದರು.

ವಿದ್ಯಾರ್ಥಿ ಸಲಹಾ ಸಮಿತಿ ಸಂಚಾಲಕರಾದ ಮೀನಾಕ್ಷಿ ಪಿ.ಸಿ, ಪದ್ಮಾವತಿ ಮಹಾವೀರ್ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ