ಆ್ಯಪ್ನಗರ

ಜಿಲ್ಲಾಪೊಲೀಸ್‌ ಕ್ರೀಡಾಕೂಟಕ್ಕೆ ಚಾಲನೆ

ಅಂತಾರಾಷ್ಟ್ರೀಯ ಹಾಕಿಪಟು ಎಸ್‌ವಿ...

Vijaya Karnataka 19 Dec 2019, 5:00 am
ಮಡಿಕೇರಿ: ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿಹೆಚ್ಚಿನ ಶ್ರಮ ವಹಿಸಿದ್ದಲ್ಲಿಮಾತ್ರ ಯಶಸ್ಸು ಸಾಧಿಸಲು ಸಾಧ್ಯ. ಆ ನಿಟ್ಟಿನಲ್ಲಿಪ್ರಯತ್ನ ಪಡುವಂತಾಗಬೇಕು ಎಂದು ಅಂತಾರಾಷ್ಟ್ರೀಯ ಹಾಕಿಪಟು ಎಸ್‌.ವಿ.ಸುನಿಲ್‌ ಆಚಾರ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
Vijaya Karnataka Web MDK18JAY2_19
ನಗರದ ಪೊಲೀಸ್‌ ಕವಾಯತು ಮೈದಾನದಲ್ಲಿಕೊಡಗು ಜಿಲ್ಲಾಪೊಲೀಸ್‌ ವಾರ್ಷಿಕ ಕ್ರೀಡಾಕೂಟಕ್ಕೆ ಪಾರಿವಾಳ ಹಾರಿ ಬಿಡುವ ಮೂಲಕ ಅಂತಾರಾಷ್ಟ್ರೀಯ ಹಾಕಿಪಟು ಎಸ್‌.ವಿ.ಸುನಿಲ್‌ ಆಚಾರ್ಯ ಚಾಲನೆ ನೀಡಿದರು.


ನಗರದ ಪೊಲೀಸ್‌ ಕವಾಯತು ಮೈದಾನದಲ್ಲಿಕೊಡಗು ಜಿಲ್ಲಾಪೊಲೀಸ್‌ ವಾರ್ಷಿಕ ಕ್ರೀಡಾಕೂಟಕ್ಕೆ ಪಾರಿವಾಳ ಹಾರಿ ಬಿಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಕ್ರೀಡೆ, ಕೃಷಿ, ಸಾಹಿತ್ಯ, ವಿಜ್ಞಾನ, ತಂತ್ರಜ್ಞಾನ, ವಾಣಿಜ್ಯ ಹೀಗೆ ವಿವಿಧ ಕ್ಷೇತ್ರದಲ್ಲಿಹೆಚ್ಚಿನ ಆಸಕ್ತಿ, ಶ್ರದ್ಧೆ ಮತ್ತು ಪರಿಶ್ರಮದಿಂದ ತೊಡಗಿಸಿಕೊಂಡಲ್ಲಿಯಶಸ್ಸು ಗಳಿಸಬಹುದು ಎಂದು ಅವರು ಸಲಹೆ ಮಾಡಿದರು.

ಪೊಲೀಸರು ದಿನದ 24 ಗಂಟೆಯೂ ಸಮಾಜದಲ್ಲಿಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡಲು ಶ್ರಮಿಸುತ್ತಾರೆ. ಇವರ ಸೇವೆ ಶ್ಲಾಘನೀಯ. ಪೊಲೀಸರ ಕರ್ತವ್ಯ ನಿಷ್ಠೆ ಮತ್ತು ಸಮಯ ಪ್ರಜ್ಞೆ ಮೆಚ್ಚುವಂತಹದ್ದು. ದಿನನಿತ್ಯದ ಕರ್ತವ್ಯದ ಜೊತೆಗೆ ಬಿಡುವು ಮಾಡಿಕೊಂಡು ಕ್ರೀಡಾ ಚಟುವಟಿಕೆಯಲ್ಲಿಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ ಎಂದು ಹೇಳಿದರು.

ನನ್ನ ಕ್ರೀಡಾ ಜೀವನದಲ್ಲಿಸೋಮವಾರಪೇಟೆಯ ಹಾಕಿ ತಂಡದವರ ಸಹಕಾರ ಮರೆಯಲು ಸಾಧ್ಯವಿಲ್ಲ. ಕೊಡಗಿನ ಜನರು ಪ್ರೀತಿ ತೋರಿಸಿದ್ದಾರೆ. ಇದರಿಂದ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿತೊಡಗಿಸಿಕೊಳ್ಳಲು ಸಾಧ್ಯವಾಯಿತು. ಕ್ರೀಡೆಯೇ ನನ್ನ ಜೀವನವಾಗಿದೆ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿಒಲಿಂಪಿಕ್ಸ್‌ನಲ್ಲಿಭಾಗವಹಿಸಿ ದೇಶಕ್ಕೆ ಕೀರ್ತಿ ತರಬೇಕು ಎಂಬ ಉದ್ದೇಶವಿದೆ. ಆ ನಿಟ್ಟಿನಲ್ಲಿಎಲ್ಲರ ಸಹಕಾರ ಅಗತ್ಯ ಎಂದು ಅವರು ಇದೇ ಸಂದರ್ಭದಲ್ಲಿಹೇಳಿದರು.

ಜಿಲ್ಲಾಪೊಲೀಸ್‌ ವರಿಷ್ಠಾಧಿಕಾರಿ ಸುಮನ್‌ ಡಿ.ಪೆನ್ನೇಕರ್‌ ಮಾತನಾಡಿ, ಪೊಲೀಸರು ವೈಯಕ್ತಿಕ ಬದುಕು ಬದಿಗೊತ್ತಿ ಸಾರ್ವಜನಿಕ ಸೇವೆಯಲ್ಲಿತೊಡಗಿಸಿಕೊಳ್ಳುತ್ತಾರೆ. ಕಾನೂನು ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿಹಗಲಿರುಳು ಶ್ರಮಿಸುತ್ತಾರೆ. ಪೊಲೀಸರ ಕರ್ತವ್ಯ ನಿಷ್ಠೆ, ಸಮಯ ಪ್ರಜ್ಞೆ, ಹಾಗೂ ಕಾರ್ಯ ವೈಖರಿ ಶ್ಲಾಘನೀಯ ಎಂದರು.

ದಿನ ನಿತ್ಯದ ಕರ್ತವ್ಯದ ಒತ್ತಡವನ್ನು ಮರೆತು ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಿರಲು ಕ್ರೀಡೆ ಸಹಕಾರಿಯಾಗಿದ್ದು, ಆ ನಿಟ್ಟಿನಲ್ಲಿಕ್ರೀಡಾ ಚಟುವಟಿಕೆ ಆಯೋಜಿಸಲಾಗಿದೆ ಎಂದರು.

ನಿವೃತ್ತ ಪೊಲೀಸ್‌ ಅಧೀಕ್ಷಕರಾದ ಪೂಣಚ್ಚ, ರವಿರಾಜ್‌, ಮೇಜರ್‌(ನಿವೃತ್ತ) ನಂಜಪ್ಪ, ನಿವೃತ್ತ ಪೊಲೀಸ್‌ ಉಪಾಧೀಕ್ಷಕರಾದ ಕುಶಾಲಪ್ಪ, ನಿಂಗಪ್ಪ, ಲಯನ್ಸ್‌ ಸಂಸ್ಥೆಯ ವಲಯ ಅಧ್ಯಕ್ಷರಾದ ದಾಮೋದರ, ಧನಂಜಯ, ಉಪ ಪೊಲೀಸ್‌ ಅಧೀಕ್ಷಕರಾದ ದಿನೇಶ್‌ ಕುಮಾರ್‌, ಜಯಕುಮಾರ್‌, ಮುರಳೀಧರ, ಪೊಲೀಸ್‌ ಅಧಿಕಾರಿಗಳಾದ ದಯಾನಂದ, ಮೇದಪ್ಪ, ಅನೂಪ್‌ ಮಾದಪ್ಪ, ರಾಚಯ್ಯ, ಮಹೇಶ್‌ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ