ಆ್ಯಪ್ನಗರ

ದುಬೈನಲ್ಲಿ ಕೇಶ ವಿನ್ಯಾಸ ಸ್ಪರ್ಧೆ: ಕೊಡಗಿನ ಸುನಿಲ್‌ಗೆ ಪ್ರಶಸ್ತಿ

ವಿಕ ಸುದ್ದಿಲೋಕ, ಮಡಿಕೇರಿ ಬ್ರಿಟಿಷ್‌ ಬಾರ್‌ಬಾರ್ಸ್‌ ಅಸೋಸಿಯೇಷನ್‌ ವತಿಯಿಂದ ಯುಎಇ(ದುಬೈ)ನಲ್ಲಿ ನಡೆದ ಕೇಶ ವಿನ್ಯಾಸ ಸ್ಪರ್ಧೆಯಲ್ಲಿ ಕೊಡಗಿನ ಸುಂಟಿಕೊಪ್ಪದ ಸುನಿಲ್‌ ಭಾಸ್ಕರ ...

ವಿಕ ಸುದ್ದಿಲೋಕ 4 Nov 2016, 4:00 am

ಮಡಿಕೇರಿ: ಬ್ರಿಟಿಷ್‌ ಬಾರ್‌ಬಾರ್ಸ್‌ ಅಸೋಸಿಯೇಷನ್‌ ವತಿಯಿಂದ ಯುಎಇ(ದುಬೈ)ನಲ್ಲಿ ನಡೆದ ಕೇಶ ವಿನ್ಯಾಸ ಸ್ಪರ್ಧೆಯಲ್ಲಿ ಕೊಡಗಿನ ಸುಂಟಿಕೊಪ್ಪದ ಸುನಿಲ್‌ ಭಾಸ್ಕರ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ತಮ್ಮ 18ನೇ ವಯಸ್ಸಿನಲ್ಲಿ ಸುಂಟಿಕೊಪ್ಪದಲ್ಲಿ ಬಾರ್‌ಬಾರ್‌ ಅಂಗಡಿಯ ಮೂಲಕ ವೃತ್ತಿ ಆರಂಭಿಸಿದ ಸುನಿಲ್‌, 13 ವರ್ಷಗಳಿಂದ ಯುನೈಟೆಡ್‌ ಅರಬ್‌ ಎಮಿರೇಟ್ಸ್‌(ದುಬೈ)ನಲ್ಲಿ ಕಾರ್ಯರ್ನಿಹಿಸುತ್ತಿದ್ದಾರೆ. ಬ್ರಿಟಿಷ್‌ ಬಾರ್‌ಬಾರ್ಸ್‌ ಅಸೋಸಿಯೇಷನ್‌ ದುಬೈನಲ್ಲಿ ಆಯೋಜಿಸಿದ್ದ ದುಬೈನ ಉತ್ತಮ ಕೇಶ ವಿನ್ಯಾಸಕ ಸ್ಪರ್ಧೆಯಲ್ಲಿ ಅಂತಿಮ ಹಂತಕ್ಕೆ ನಾಲ್ಕು ಮಂದಿ ಸ್ಪರ್ಧಿಗಳು ಪ್ರವೇಶಿಸಿದರು. ಸ್ಪರ್ಧೆಯಲ್ಲಿ ಸುನಿಲ್‌ ಭಾಸ್ಕರ ವಿಜಯಿಯಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು.

ಬಾಕ್ಸಿಂಗ್‌ ರಿಂಗ್‌ನಲ್ಲಿ ಸ್ಪರ್ಧೆ ನಡೆಸಲಾಯಿತು. 45 ನಿಮಿಷದಲ್ಲಿ ಸ್ಪೀಡ್‌, ಟೆಕ್ನಿಕ್‌, ಫಿನಿಶಿಂಗ್‌, ಟ್ರೆಂಡ್‌ ಆಧಾರದ ಮೇಲೆ ಸುನಿಲ್‌ಗೆ ಪ್ರಶಸ್ತಿ ಲಭಿಸಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ