ಆ್ಯಪ್ನಗರ

ವಿದ್ಯುತ್‌ ಸ್ಪರ್ಶಿಸಿ ವೃದ್ಧೆ ಸಾವು

ನೀರಿನ ಸಂಪರ್ಕ ವ್ಯವಸ್ಥೆಗೆ ಅಳವಡಿಸಿದ್ದ ವಿದ್ಯುತ್‌ ತಂತಿ ಸ್ಪರ್ಶಿಸಿ ವೃದ್ಧೆಯೊಬ್ಬರು ಮೃತಪಟ್ಟಿರುವ ಘಟನೆ ನಗರದ ಹೊರಭಾಗದಲ್ಲಿರುವ ಕೆ.ಬಾಡಗದಲ್ಲಿ ನಡೆದಿದೆ.

Vijaya Karnataka 29 Jul 2018, 5:00 am
ಮಡಿಕೇರಿ: ನೀರಿನ ಸಂಪರ್ಕ ವ್ಯವಸ್ಥೆಗೆ ಅಳವಡಿಸಿದ್ದ ವಿದ್ಯುತ್‌ ತಂತಿ ಸ್ಪರ್ಶಿಸಿ ವೃದ್ಧೆಯೊಬ್ಬರು ಮೃತಪಟ್ಟಿರುವ ಘಟನೆ ನಗರದ ಹೊರಭಾಗದಲ್ಲಿರುವ ಕೆ.ಬಾಡಗದಲ್ಲಿ ನಡೆದಿದೆ.
Vijaya Karnataka Web electric circuit
ವಿದ್ಯುತ್‌ ಸ್ಪರ್ಶಿಸಿ ವೃದ್ಧೆ ಸಾವು


ಕೆ. ಬಾಡಗ ನಿವಾಸಿ ಮಾಚವ್ವ (80) ಮೃತರು. ಕಾಲು ಜಾರಿ ಬೀಳುವಾಗ ವೈರ್‌ ಸ್ಪರ್ಶಿಸಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಮನೆಯಿಂದ ಕೊಂಚ ದೂರದಲ್ಲಿರುವ ನೀರಿನ ಮೋಟಾರ್‌ಗೆ ಮನೆಯಿಂದ ಬೇಲಿ ಬದಿಯಲ್ಲಿ ಎರಡು ವೈರ್‌ ಎಳೆಯಲಾಗಿತ್ತು. ಮುಂಜಾನೆ ಜಾರುವ ಕಡಿದಾದ ಕಾಲು ಹಾದಿಯಲ್ಲಿ ತಮ್ಮ ದೊಡ್ಡ ಮನೆಗೆ ತೆರಳುತ್ತಿದ್ದ ಮಾಚವ್ವ ಕಾಲು ಜಾರಿ ಬಿದ್ದಿದ್ದಾರೆ. ಈ ಸಂದರ್ಭ ಕಾಲುದಾರಿಯ ಬದಿಯ ಬೇಲಿಯ ಮೇಲೆ ಹಾದು ಹೋಗಿದ್ದ ವೈರ್‌ ಮಾಚವ್ವ ಅವರನ್ನು ಸ್ಪರ್ಶಿಸಿದೆ. ಪರಿಣಾಮ ವಿದ್ಯುತ್‌ ಪ್ರವಹಿಸಿ ಮಾಚವ್ವ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಸೆಸ್ಕ್‌ ಸಿಬ್ಬಂದಿ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಡಿಕೇರಿ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ