ಆ್ಯಪ್ನಗರ

ಪೇರೂರಿನಲ್ಲಿ ಕಾಡಾನೆ ಹಾವಳಿ: ಅಪಾರ ನಷ್ಟ

ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೇರೂರು ಗ್ರಾಮಕ್ಕೆ ಲಗ್ಗೆ ಇಟ್ಟ ಕಾಡಾನೆಗಳು ಹುತ್ತರಿ ಹಬ್ಬ ಆಚರಣೆಗೆ ಆತಂಕ ತಂದೊಡ್ಡಿವೆ.

Vijaya Karnataka 25 Nov 2018, 5:00 am
ನಾಪೋಕ್ಲು
Vijaya Karnataka Web elephant menace in peruru crop loss
ಪೇರೂರಿನಲ್ಲಿ ಕಾಡಾನೆ ಹಾವಳಿ: ಅಪಾರ ನಷ್ಟ


ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೇರೂರು ಗ್ರಾಮಕ್ಕೆ ಲಗ್ಗೆ ಇಟ್ಟ ಕಾಡಾನೆಗಳು ಹುತ್ತರಿ ಹಬ್ಬ ಆಚರಣೆಗೆ ಆತಂಕ ತಂದೊಡ್ಡಿವೆ.

ಕದಿರು ತೆಗೆಯುವ ಗದ್ದೆಗೆ ಕಾಡಾನೆಗಳು ದಾಳಿ ಇಟ್ಟು ಧ್ವಂಸ ಮಾಡಿವೆ. ಕೊಡಗಿನ ರೈತಾಪಿ ಜನರು ಧಾನ್ಯ ಲಕ್ಷ್ಮೇಯನ್ನು ಬರಮಾಡಿಕೊಳ್ಳುವ ಸಂಭ್ರಮದಲ್ಲಿದ್ದಾರೆ. ಆದರೆ ಪೇರೂರು ಗ್ರಾಮಸ್ಥರಿಗೆ ಆತಂಕ ಎದುರಾಗಿದೆ. ಪೇರೂರು ಗ್ರಾಮದ ತಾಪಂಡ ಕುಟುಂಬಸ್ಥರು ತಮ್ಮ ಹಿರಿಯರ ಕಾಲದಿಂದ ಹುತ್ತರಿ ಕದಿರು ತೆಗೆಯುವ ಗದ್ದೆಯಲ್ಲಿ ಒಂದು ದಿನ ಇರುವಂತೆ ಆನೆಗಳು ದಾಳಿ ಇಟ್ಟಿರುವುದು ಗ್ರಾಮಸ್ಥರನ್ನು ಕಂಗಾಲುಮಾಡಿದೆ. ತಾಪಂಡ ಗಣೇಶ್‌ ಮತ್ತಿತರರು ಕಷ್ಟಪಟ್ಟು ಬೆಳೆದ ಭತ್ತ ಕೈಗೆ ಹತ್ತದಂತೆ ಆಗಿದೆ.

ಕಾಡಾನೆಗಳು ಈ ವ್ಯಾಪ್ತಿಯಲ್ಲಿ ಆಗಾಗ ಕಾಣಿಸಿಕೊಂಡು ರೈತರು ಬೆಳೆದ ಫಸಲು ನಷ್ಟವಾಗುತ್ತಿದೆ. ಅರಣ್ಯ ಇಲಾಖೆ ಕಾಡಾನೆಗಳ ಉಪಟಳಕ್ಕೆ ಕಡಿವಾಣ ಹಾಕಬೇಕು. ನಷ್ಟಕ್ಕೊಳಗಾದ ರೈತರಿಗೆ ಪರಿಹಾರ ವಿತರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ