ಆ್ಯಪ್ನಗರ

ಮಲ್ಲಳ್ಳಿ ಫಾಲ್ಸ್‌ನಲ್ಲಿ ಎಂಜಿನಿಯರ್‌ ನೀರುಪಾಲು

ಮಲ್ಲಳ್ಳಿ ಜಲಪಾತದಲ್ಲಿ ಭಾನುವಾರ ಸ್ನಾನಕ್ಕೆ ತೆರಳಿ ಪ್ರಾಣಾಪಾಯಕ್ಕೆ ಸಿಲುಕಿದ್ದ ಯುವಕರನ್ನು ರಕ್ಷಿಸಲು ಮುಂದಾದ ಎಂಜಿನಿಯರ್‌ ನೀರು ಪಾಲಾಗಿದ್ದಾರೆ.

Vijaya Karnataka 4 Feb 2019, 5:00 am
ಸೋಮವಾರಪೇಟೆ: ಮಲ್ಲಳ್ಳಿ ಜಲಪಾತದಲ್ಲಿ ಭಾನುವಾರ ಸ್ನಾನಕ್ಕೆ ತೆರಳಿ ಪ್ರಾಣಾಪಾಯಕ್ಕೆ ಸಿಲುಕಿದ್ದ ಯುವಕರನ್ನು ರಕ್ಷಿಸಲು ಮುಂದಾದ ಎಂಜಿನಿಯರ್‌ ನೀರು ಪಾಲಾಗಿದ್ದಾರೆ.
Vijaya Karnataka Web engineer dump in mallahalli falls
ಮಲ್ಲಳ್ಳಿ ಫಾಲ್ಸ್‌ನಲ್ಲಿ ಎಂಜಿನಿಯರ್‌ ನೀರುಪಾಲು


ಮೈಸೂರು ವಿವಿಯ ಸಹಾಯಕ ಕುಲಸಚಿವ ಶಂಕರ್‌ ಅವರ ಪುತ್ರ, ಬೆಂಗಳೂರಿನ ಎಕ್ಸೆಂಚರ್‌ ಕಂಪನಿಯಲ್ಲಿ ಎಂಜಿನಿಯರ್‌ ಆಗಿದ್ದ ಸ್ಕಂದ (25) ಮೃತರು. ಬೆಂಗಳೂರಿನಿಂದ ಸ್ಕಂದ ಸೇರಿದಂತೆ 11 ಮಂದಿ ಸೋಮವಾರಪೇಟೆ ತಾಲೂಕಿನ ಮಲ್ಲಳ್ಳಿ ಜಲಪಾತ ವೀಕ್ಷ ಣೆಗೆ ಆಗಮಿಸಿದ್ದರು. ಬೆಳಗ್ಗೆ 11ರ ಸುಮಾರಿಗೆ ಜಲಪಾತದ ತಳಭಾಗದಲ್ಲಿರುವ ಮರಣ ಬಾವಿ ಎಂದೇ ಕರೆಸಿಕೊಂಡಿರುವ ಹೊಂಡದ ಸಮೀಪ ತೆರಳಿದ್ದಾರೆ. ಈ ಸಂದರ್ಭ ಬಿಹಾರ ಮೂಲದ, ಬೆಂಗಳೂರಿನಲ್ಲಿ ನೌಕರಿಯಲ್ಲಿರುವ ಶರ್ಮಾ ಬಿಹಾರ್‌, ನಿಲೇಶ್‌ ಮತ್ತು ಅಂಕಿತ್‌ ಚೌಧರಿ ಎಚ್ಚರಿಕೆಯ ಫಲಕವನ್ನು ಗಮನಿಸದೆ ಹೊಂಡದಲ್ಲಿ ಸ್ನಾನಕ್ಕೆ ಇಳಿದು ಮುಳುಗಿದ್ದು, ಸಹಾಯಕ್ಕಾಗಿ ಕಿರುಚಿದ್ದಾರೆ. ಅಲ್ಲಿಯೇ ಇದ್ದ ಸ್ಕಂದ ನೀರಿಗೆ ಇಳಿದು ಬಿಹಾರದ ಈ ಮೂವರನ್ನೂ ದಡ ಸೇರಿಸಿದ್ದಾರೆ. ಕೊನೆಯಲ್ಲಿ ಸ್ಕಂದ ಮೇಲೆ ಬರಲಾಗದೆ ಸ್ನೇಹಿತರು ನೋಡನೋಡುತ್ತಿದ್ದಂತೆ ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲಾಗಿದೆ.

ಕುಟುಂಬದ ರೋದನ: ಸ್ಕಂದ ಅವರು ಮೈಸೂರಿನ ವಿವೇಕಾನಂದ ನಗರದ ಮಧುವನ ಲೇಔಟ್‌ನ ನಿವಾಸಿ, ಮೈಸೂರು ವಿಶ್ವವಿದ್ಯಾಲಯದ ಸಹಾಯಕ ಕುಲಸಚಿವ ಶಂಕರ್‌, ರೇವತಿ ದಂಪತಿಯ ಒಬ್ಬನೇ ಪುತ್ರ. ಅಕಾಲಿಕವಾಗಿ ಪುತ್ರನನ್ನು ಕಳೆದುಕೊಂಡ ಪೋಷಕರ ಅಕ್ರಂದನ ಮುಗಿಲು ಮುಟ್ಟಿತ್ತು. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶವಪರೀಕ್ಷೆಯ ನಂತರ ಪೋಷಕರಿಗೆ ಒಪ್ಪಿಸಲಾಯಿತು.

ಡಿವೈಎಸ್‌ಪಿ ಮುರುಳೀಧರ್‌, ಸರ್ಕಲ್‌ ಇನ್ಸ್‌ಪೆಕ್ಟರ್‌ ನಂಜುಂಡೇಗೌಡ, ಪಿಎಸ್‌ಐ ಶಿವಶಂಕರ್‌, ಸಿಬ್ಬಂದಿ ಜಗದೀಶ್‌, ಶಿವಕುಮಾರ್‌, ಕುಮಾರ, ಪ್ರವೀಣ್‌ ಸ್ಥಳಕ್ಕೆ ತೆರಳಿ ಮಹಜರು ನಡೆಸಿ, ಮುಂದಿನ ಕ್ರಮಕೈಗೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ