ಆ್ಯಪ್ನಗರ

ತುಟಿಗೆ ತುಪ್ಪ ಸವರುವ ಕೆಲಸ ಬೇಡ: ಈಶ್ವರ ಖಂಡ್ರೆ

ತಾಲೂಕಿನ ನಾನಾ ಕಡೆ ಕಾಳಜಿ ಕೇಂದ್ರಗಳಿಗೆ ಸೋಮವಾರ ಭೇಟಿ ನೀಡಿದ್ದ ಕೆಪಿಸಿಸಿ ಕಾರಾರ‍ಯಧ್ಯಕ್ಷ ಈಶ್ವರ ಖಂಡ್ರೆ ಸಂತ್ರಸ್ತರಿಗೆ ಸಾಂತ್ವನ ಹೇಳಿದರು.

Vijaya Karnataka 13 Aug 2019, 5:00 am
ವಿರಾಜಪೇಟೆ: ತಾಲೂಕಿನ ನಾನಾ ಕಡೆ ಕಾಳಜಿ ಕೇಂದ್ರಗಳಿಗೆ ಸೋಮವಾರ ಭೇಟಿ ನೀಡಿದ್ದ ಕೆಪಿಸಿಸಿ ಕಾರಾರ‍ಯಧ್ಯಕ್ಷ ಈಶ್ವರ ಖಂಡ್ರೆ ಸಂತ್ರಸ್ತರಿಗೆ ಸಾಂತ್ವನ ಹೇಳಿದರು.
Vijaya Karnataka Web eshwar khandre
ತುಟಿಗೆ ತುಪ್ಪ ಸವರುವ ಕೆಲಸ ಬೇಡ: ಈಶ್ವರ ಖಂಡ್ರೆ


ಹೆಗ್ಗಳದ ಕಾಳಜಿ ಕೇಂದ್ರಗಳು ಹಾಗೂ ವಿರಾಜಪೇಟೆಯ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿದ್ದ ಅವರು ನಂತರ ಪಟ್ಟಣದಲ್ಲಿ ಸುದ್ದಿಗಾರರ ಜತೆ ಮಾತನಾಡಿದರು.

ನಮ್ಮ ಪಕ್ಷ ದ ಎಲ್ಲ ಮುಖಂಡರು ಕರ್ನಾಟಕದಾದ್ಯಂತ ಮಳೆ ಮತ್ತು ಪ್ರವಾಹ ಪೀಡಿತ ಜಾಗಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಜನ ಜೀವನ ಅಸ್ತವ್ಯಸ್ತವಾಗಿದೆ. ಒಂದು ಕಡೆ ಅತಿವೃಷ್ಟಿ ಇದ್ದರೆ ಮತ್ತೆ ಕೆಲವೆಡೆ ಅನಾವೃಷ್ಟಿ ಇದೆ. ಜಲಪ್ರಳಯದಿಂದಾಗಿ ಸಾವಿರಾರು ಹೆಕ್ಟೇರ್‌ ಭೂಮಿ ನೀರಿನಲ್ಲಿ ಮುಳುಗಿದೆ. ಜನ, ಜಾನುವಾರುಗಳು ಬದುಕು ಸಂಕಷ್ಟದಲ್ಲಿದೆ. ಕೊಡಗಿನಲ್ಲಿ 7 ಜನರು ಮೃತಪಟ್ಟಿದ್ದು, 12 ಮಂದಿ ಕಣ್ಮರೆಯಾಗಿದ್ದಾರೆ. ಇವತ್ತು ಸಂತ್ರಸ್ತರಿಗೆ ಪರಿಹಾರ ಕಾರ‍್ಯವನ್ನು ಸಮರೋಪಾದಿಯಲ್ಲಿ ನಡೆಸಲಾಗುತ್ತಿದೆ ಎಂದು ಈಶ್ವರ ಖಂಡ್ರೆ ಹೇಳಿದರು.

ಆದರೆ, ಸರಕಾರ ಅದರೊಂದಿಗೆ ಪರಿಹಾರ, ಪುನರ್ವಸತಿ ಕೆಲಸಗಳನ್ನು ಮಾಡಬೇಕಾಗಿದೆ. ಅದು ಸರಕಾರದ ಆದ್ಯ ಕರ್ತವ್ಯವಾಗಬೇಕು. ತಾಲೂಕು ಆಡಳಿತ, ಜಿಲ್ಲಾಡಳಿತ ಸಾಧ್ಯವಾದಷ್ಟು ಮಟ್ಟಿಗೆ ಮಾಡುತ್ತಿದೆ. ಆದರೆ, ಅದು ಸಾಲುತ್ತಿಲ್ಲ. ಸರಕಾರ ಈ ಮೂರು ಕೆಲಸಗಳಿಗೆ ವೇಗವನ್ನು ಕೊಡಬೇಕಿದೆ ಎಂದರು.

ಹೊಸ ಸರಕಾರ ಬಂದು ತಿಂಗಳಾಗುತ್ತ ಬಂತು. ಇನ್ನೂ ಕೂಡಾ ಸಂಪುಟ ರಚನೆಯಾಗಲಿಲ್ಲ. ಸಂತ್ರಸ್ತಿಗೆ ಪರಿಹಾರ ಕೊಡುವಲ್ಲಿ ವಿಳಂಬವಾಗುತ್ತಿದೆ. ಬಿಜೆಪಿಯವರು ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಸರಕಾರ ಇದ್ದಾಗ ಕೆಲಸಗಳು ಚೆನ್ನಾಗಿ ಆಗುತ್ತವೆ ಎನ್ನುತ್ತಿದ್ದರು. ಆದರೆ, ಎಲ್ಲಿ ಕೂಡಾ ಕೇಂದ್ರ ಸರಕಾರ ತನ್ನ ನೆರವನ್ನು ಘೋಷಣೆ ಮಾಡಲಿಲ್ಲ. ಕಳೆದ ಬಾರಿ ಕೇಂದ್ರ ಸರಕಾರ ಕೊಡಗು ಜಿಲ್ಲೆಯ ವಿಚಾರದಲ್ಲಿ ಮಲತಾಯಿ ಧೋರಣೆ ಅನುಸರಿಸಿತ್ತು. ಮಹಾರಾಷ್ಟ್ರಕ್ಕೆ ದೊಡ್ಡ ಮಟ್ಟದ ಪರಿಹಾರ ಕೊಟ್ಟು , ಕೊಡಗನ್ನು ಕಡೆಗಣಿಸಿತು ಎಂದು ದೂರಿದರು.

ಕೇಂದ್ರ ಸರಕಾರ ತಕ್ಷ ಣ ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಬೇಕು. ಅಲ್ಲಿ ತನಕ ಮಧ್ಯಂತರ ಪರಿಹಾರವನ್ನಾದರೂ ಕೊಡಬೇಕು. ತುಟಿಗೆ ತುಪ್ಪ ಸವರುವ ಕೆಲಸ ಸರಕಾರದಿಂದ ಆಗಬಾರದು. ನರೆ ಹಾವಳಿಯಿಂದ ನೊಂದಜನತೆ ಬದುಕು ಕಟ್ಟಿಕೊಳ್ಳುವ ತನಕ ನಮ್ಮ ಪಕ್ಷ ದ ನೈತಿಕ ಬೆಂಬಲ ಇದ್ದೇ ಇರುತ್ತದೆ ಎಂದರು.

ವಿಧಾನ ಪರಿಷತ್‌ ಸದಸ್ಯರಾದ ವೀಣಾ ಅಚ್ಚಯ್ಯ, ಕಾಂಗ್ರೆಸ್‌ ಮುಖಂಡ ಅರುಣ್‌ ಮಾಚಯ್ಯ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಮಂಜುನಾಥ್‌ ಕೆ.ಕೆ, ನಗರ ಘಟಕದ ಅಧ್ಯಕ್ಷ ಜಿ.ಜಿ ಮೋಹನ್‌, ಕಾಂಗ್ರೆಸ್‌ ಬ್ಲಾಕ್‌ ಅಧ್ಯಕ್ಷ ಆರ್‌.ಕೆ ಅಬ್ದುಲ್‌ ಸಲಾಂ, ಮಾಲೇಟಿರ ಪ್ರಶಾಂತ್‌ ಪಪಂ ಚುನಾಯಿತ ಸದಸ್ಯರಾದ, ಪಟ್ಟಡ ರಂಜಿ ಪೂಣಚ್ಚ, ರಾಜೇಶ್‌ ಪದ್ಮನಾಭ, ಸಿ.ಕೆ.ಪೃಥ್ವಿನಾಥ್‌, ಮೊಹಮ್ಮದ್‌ ರಾಫಿ, ಅಗಸ್ಟಿನ್‌ ಬೆನ್ನಿ, ಶೀಬಾ ಪೃಥ್ವಿನಾಥ್‌, ಗಾಯತ್ರಿ ನರಸಿಂಹನ್‌,ಪೊನ್ನಕ್ಕಿ ಇನ್ನಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ