ಆ್ಯಪ್ನಗರ

ದಸರಾ ಗಜಪಡೆಗೆ ಬೀಳ್ಕೊಡುಗೆ

ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ಕೊಡಗು ಜಿಲ್ಲೆಯಿಂದ 3 ಸಾಕಾನೆಗಳನ್ನು ಬುಧವಾರ ಮೈಸೂರಿಗೆ ಕಳುಹಿಸಿಕೊಡಲಾಯಿತು.

Vijaya Karnataka 22 Aug 2019, 5:00 am
ಕುಶಾಲನಗರ
Vijaya Karnataka Web farewell to dasara elephant
ದಸರಾ ಗಜಪಡೆಗೆ ಬೀಳ್ಕೊಡುಗೆ


ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ಕೊಡಗು ಜಿಲ್ಲೆಯಿಂದ 3 ಸಾಕಾನೆಗಳನ್ನು ಬುಧವಾರ ಮೈಸೂರಿಗೆ ಕಳುಹಿಸಿಕೊಡಲಾಯಿತು.

ದುಬಾರೆ ಸಾಕಾನೆ ಶಿಬಿರದ ಧನಂಜಯ (40), ಈಶ್ವರ (40), ವಿಜಯ (60) ಸಾಕಾನೆಗಳಿಗೆ ಕುಶಾಲನಗರ ಸಮೀಪದ ಆನೆಕಾಡು ಶಿಬಿರದಲ್ಲಿ ಪೂಜೆ ಸಲ್ಲಿಸಿದ ಅಧಿಕಾರಿಗಳು ಬೀಳ್ಕೊಟ್ಟರು. ಆನೆಗಳನ್ನು ವಿಶೇಷವಾಗಿ ಅಲಂಕರಿಸಿ, ಹೂಗಳಿಂದ ಸಿಂಗರಿಸಲಾಗಿತ್ತು. ಆನೆಗಳ ಕ್ಷೇಮಕ್ಕೆ ಮತ್ತು ದಸರಾ ಉತ್ಸವ ಯಶಸ್ವಿಗೊಳ್ಳಲಿ ಎಂದು ಸಾಂಪ್ರದಾಯಿಕವಾಗಿ ಪ್ರಾರ್ಥಿಸಿ ಆನೆಗಳಿಗೆ ಪೂಜೆ ಸಲ್ಲಿಸಲಾಯಿತು.

ಈ ಸಂದರ್ಭ ಮಾಹಿತಿ ನೀಡಿದ ಕುಶಾಲನಗರ ವಲಯ ಅರಣ್ಯ ಅಧಿಕಾರಿ ಸಿ.ಆರ್‌.ಅರುಣ್‌, ದುಬಾರೆ ಶಿಬಿರದಿಂದ ಒಟ್ಟು 6 ಆನೆಗಳು ಮೈಸೂರು ದಸರಾದಲ್ಲಿ ಪಾಲ್ಗೊಳ್ಳಲಿದೆ. ಪ್ರಥಮ ಹಂತದಲ್ಲಿ 3 ಆನೆಗಳನ್ನು ಕಳುಹಿಸಲಾಗುತ್ತಿದ್ದು, ಇನ್ನುಳಿದಂತೆ ಗೋಪಿ, ವಿಕ್ರಮ, ಕಾವೇರಿ ಆನೆಗಳನ್ನು ಎರಡನೇ ತಂಡದಲ್ಲಿ ಕಳುಹಿಸಿಕೊಡಲಾಗುವುದು ಎಂದರು.

ಸಿಬ್ಬಂದಿ ಪೂವಪ್ಪ ಆನೆಗಳಿಗೆ ಪೂಜೆ ಸಲ್ಲಿಸಿದರು. ಮಡಿಕೇರಿ ಉಪ ಅರಣ್ಯ ಸಂರಕ್ಷ ಣಾಧಿಕಾರಿ ಎಸ್‌.ಪ್ರಭಾಕರನ್‌, ಸೋಮವಾರಪೇಟೆ ಸಹಾಯಕ ಅರಣ್ಯ ಸಂರಕ್ಷ ಣಾಧಿಕಾರಿ ಕೆ.ನೆಹರು, ಉಪ ಅರಣ್ಯ ವಲಯಾಧಿಕಾರಿÜ ಕನ್ನಂಡ ರಂಜನ್‌, ಅನಿಲ್‌ ಮತ್ತು ಸಿಬ್ಬಂದಿ ಬೆಲ್ಲ, ಕಬ್ಬು, ಬಾಳೆ ಹಣ್ಣು ತಿನಿಸುವುದರೊಂದಿಗೆ ಲಾರಿ ಮೂಲಕ ವೀರನಹೊಸಳ್ಳಿ ಶಿಬಿರಕ್ಕೆ ಬೀಳ್ಕೊಟ್ಟರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ