ಆ್ಯಪ್ನಗರ

ದೂರು ಅರ್ಜಿ ಸ್ವೀಕಾರ ಮಾ.16 ರಿಂದ

ಮಡಿಕೇರಿ: ಕರ್ನಾಟಕ ಲೋಕಯುಕ್ತ ಅಧಿಕಾರಿಗಳು ಜಿಲ್ಲೆಯಲ್ಲಿ ಮಾ.16 ರಿಂದ ಸಾರ್ವಜನಕರಿಂದ ದೂರು ಅರ್ಜಿ ಸ್ವೀಕರಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ವಿಕ ಸುದ್ದಿಲೋಕ 14 Mar 2016, 4:02 am
ಮಡಿಕೇರಿ: ಕರ್ನಾಟಕ ಲೋಕಯುಕ್ತ ಅಧಿಕಾರಿಗಳು ಜಿಲ್ಲೆಯಲ್ಲಿ ಮಾ.16 ರಿಂದ ಸಾರ್ವಜನಕರಿಂದ ದೂರು ಅರ್ಜಿ ಸ್ವೀಕರಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
Vijaya Karnataka Web frommarch 16 to apply for the acceptance of the complaint
ದೂರು ಅರ್ಜಿ ಸ್ವೀಕಾರ ಮಾ.16 ರಿಂದ

ಮಾ. 16 ರಂದು ಬೆಳಗ್ಗೆ 11 ರಿಂದ 1ರವರೆಗೆ ನಗರದ ಗೌಳಿಬೀದಿ ಯಲ್ಲಿರುವ ಲೋಕಾಯುಕ್ತ ಕಚೇರಿ, ಮಾ. 17 ರಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 1 ರವರೆಗೆ ಸೋಮವಾರ ಪೇಟೆಯ ಲೋಕೋಪಯೋಗಿ ಇಲಾಖೆ ನಿರೀಕ್ಷಣಾ ಮಂದಿರದಲ್ಲಿ ಹಾಗೂ ಮಾ.18 ರಂದು ಬೆಳಗ್ಗೆ 11 ರಿಂದ 1ರವರೆಗೆ ವಿರಾಜಪೇಟೆಯ ಲೋಕೋಪ ಯೋಗಿ ಇಲಾಖೆ ನಿರೀಕ್ಷಣಾ ಮಂದಿರ ದಲ್ಲಿ ಕರ್ನಾಟಕ ಲೋಕಾಯುಕ್ತ ಕಾಯಿದೆ ಅಡಿ ದೂರು ಅರ್ಜಿಗಳನ್ನು ಸ್ವೀಕರಿಸಲಿದ್ದಾರೆ.
ಸರಕಾರಿ ಕಚೇರಿಗಳಲ್ಲಿ ಅಧಿಕೃತ ಕೆಲಸಗಳಲ್ಲಿ ವಿಳಂಬ ಹಾಗೂ ಇನ್ನಿತರೆ ತೊಂದರೆ ನೀಡುತ್ತಿರುವ ಸರಕಾರಿ ಅಧಿಕಾರಿ ಅಥವಾ ನೌಕರರ ವಿರುದ್ಧ ಸಾರ್ವಜನಿಕರು ದೂರುಗಳನ್ನು ಅಲ್ಲಿನ ಸ್ಥಳೀಯ ಅಧಿಕಾರಿಗಳ ಸಹಕಾರದೊಂದಿಗೆ ಇತ್ಯರ್ಥಪಡಿಸಲು ಪ್ರಯತ್ನಿಸಲಾಗುತ್ತದೆ.
ಸಾರ್ವಜನಿಕರು ಈ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಮತ್ತು ಹೆಚ್ಚಿನ ವಿವರಗಳಿಗೆ ಮಡಿಕೇರಿ ಲೋಕಯುಕ್ತ ಪೊಲೀಸ್ ಠಾಣೆ, ಗೌಳಿಬೀದಿ, ಮಡಿಕೇರಿ, ದೂ.ಸಂ 08272-220797 ನ್ನು ಸಂಪರ್ಕಿ ಸಬಹುದಾಗಿದೆ ಎಂದು ಕರ್ನಾಟಕ ಲೋಕಯುಕ್ತ ಪೊಲೀಸ್ ಉಪಾಧೀಕ್ಷಕ ಬಿ.ಪರಶುರಾಮ್ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ