ಆ್ಯಪ್ನಗರ

ಗೌಡ ಫುಟ್ಬಾಲ್‌: ಪೊನ್ನಚ್ಚನ, ಕೋಚನ ತಂಡ ಮುಂದಿನ ಹಂತಕ್ಕೆ

ಗೌಡ ಕುಟುಂಬಗಳ ನಡುವೆ ಮರಗೋಡಿನ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಕೊಡಗು ಗೌಡ ಫುಟ್ಬಾಲ್‌ ಅಕಾಡೆಮಿ ಮರಗೋಡು ವತಿಯಿಂದ ನಡೆಯುತ್ತಿರುವ 3ನೇ ವರ್ಷದ ಕ್ರೀಡಾಕೂಟದಲ್ಲಿ ಪೊನ್ನಚ್ಚನ, ಕೋಚನ, ಯಾಲದಾಳು, ಬಡುವಂಡ್ರ, ಬಿದ್ರುಪಣೆ ಹಾಗೂ ಪಾಣತ್ತಲೆ ಬಿ ಮುಂದಿನ ಹಂತ ಪ್ರವೇಶಿಸಿದೆ.

Vijaya Karnataka 24 May 2018, 5:00 am
ಮಡಿಕೇರಿ: ಗೌಡ ಕುಟುಂಬಗಳ ನಡುವೆ ಮರಗೋಡಿನ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಕೊಡಗು ಗೌಡ ಫುಟ್ಬಾಲ್‌ ಅಕಾಡೆಮಿ ಮರಗೋಡು ವತಿಯಿಂದ ನಡೆಯುತ್ತಿರುವ 3ನೇ ವರ್ಷದ ಕ್ರೀಡಾಕೂಟದಲ್ಲಿ ಪೊನ್ನಚ್ಚನ, ಕೋಚನ, ಯಾಲದಾಳು, ಬಡುವಂಡ್ರ, ಬಿದ್ರುಪಣೆ ಹಾಗೂ ಪಾಣತ್ತಲೆ ಬಿ ಮುಂದಿನ ಹಂತ ಪ್ರವೇಶಿಸಿದೆ.
Vijaya Karnataka Web gowda football ponnacchana kochana enters next round
ಗೌಡ ಫುಟ್ಬಾಲ್‌: ಪೊನ್ನಚ್ಚನ, ಕೋಚನ ತಂಡ ಮುಂದಿನ ಹಂತಕ್ಕೆ


ಬುಧವಾರ ನಡೆದ ಮೊದಲ ಪಂದ್ಯದಲ್ಲಿ ಪೋರೆಕುಂಜಿಲನ ತಂಡ ದಾಯನ ತಂಡವನ್ನು ಎದುರಿಸಿತು. ಪೋರೆಕುಂಜಿಲನ ತಂಡ ದಾಯನ ತಂಡದ ವಿರುದ್ಧ 4-1 ಗೋಲುಗಳ ಅಂತರದಲ್ಲಿ ಜಯ ಗಳಿಸಿತು. ಪೋರೆಕುಂಜಿಲ ತಂಡದ ಪರ ಸಚಿನ್‌ 2, ಪ್ರಶಾಂತ್‌ ಹಾಗೂ ವಿನಿ ಒಂದು ಗೋಲು ದಾಖಲಿಸಿದರೆ, ದಾಯನ ಸುಗು 1 ಗೋಲು ದಾಖಲಿಸಿದರು.

ಗುಡ್ಡೆಮನೆ ಹಾಗೂ ಪೊನ್ನಚ್ಚನ ನಡುವಿನ ಹಣಾಹಣಿಯಲ್ಲಿ ಪೊನ್ನಚ್ಚನ ತಂಡ 8-0 ಅಂತರದಿಂದ ಜಯ ಗಳಿಸಿತು. ತಂಡದ ಪರ ಕವನ್‌ 3, ಶ್ರೀನಿ 2, ನಿಶಾಂತ್‌ 1 ಹಾಗೂ ಮಹೇಶ್‌ 2 ಗೋಲು ದಾಖಲಿಸಿದರು.

ಪೋರೆಕುಂಜಿಲನ ಹಾಗೂ ಮುಕ್ಕಾಟಿ ಬಿ ನಡುವಿನ ಪಂದ್ಯದಲ್ಲಿ ಪೋರೆಕುಂಜಿಲನ ತಂಡ 2-1 ಗೋಲುಗಳ ಅಂತರದಿಂದ ಜಯ ಸಾಧಿಸಿತು.ಕೋಚನ ಹಾಗೂ ಕೊಂಪುಳೀರ ನಡುವಿನ ಹಣಾಹಣಿಯಲ್ಲಿ ಕೋಚನ ತಂಡ 5-4 ಅಂತರದಲ್ಲಿ ಜಯ ಸಾಧಿಸಿತು.

ಯಾಲದಾಳು ಹಾಗೂ ಕೈಕೇರಿ ಮುಕ್ಕಾಟಿ ನಡುವಣ ಹಣಾಹಣಿಯಲ್ಲಿ ಯಾಲದಾಳು ತಂಡ 2-1 ಅಂತರದಿಂದ ಜಯ ಗಳಿಸಿತು. ತೇಲೆಬೈಲು ಹಾಗೂ ಪೊನ್ನಚ್ಚನ ಹಣಾಹಣಿಯಲ್ಲಿ ಪೊನ್ನಚ್ಚನ ತಂಡ 7-0 ಅಂತರದಲ್ಲಿ ಜಯ ದಾಖಲಿಸಿತು. ಬಿಳಿಯಂಡ್ರ ಹಾಗೂ ಬಡುವಂಡ್ರ ಪಂದ್ಯದಲ್ಲಿ ಬಡುವಂಡ್ರ ತಂಡ 5-0 ಅಂತರದಲ್ಲಿ ಜಯ ಸಾಧಿಸಿತು. ಬಿದ್ರುಪಣೆ ಹಾಗೂ ಮುಂಡೋಡಿ ನಡುವಣ ಪಂದ್ಯದಲ್ಲಿ ಬಿದ್ರುಪಣೆ ಜಯ ದಾಖಲಿಸಿತು.

ಇಂದಿನ ಪಂದ್ಯ

ಬೊಳ್ಳುರು - ಬಡುವಂಡ್ರ

ಚೆರಿಯಮನೆ - ಮೂಲೆಮಜಲು

ಬಿದ್ರುಪಣೆ - ಪಾಣತ್ತಲೆ ಬಿ

ಕುಡೆಕಲ್‌ - ಚಿಲ್ಲನ

ಪರಿಚನ - ಕಡ್ಯದ

ಕುಂತೋಡಿ - ಕೊಳಂಬೆ


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ