ಆ್ಯಪ್ನಗರ

ಜಿಲ್ಲಾದ್ಯಂತ ಹರನಾಮ ಸ್ಮರಣೆ

ಜಿಲ್ಲೆಯ ಹಲವೆಡೆ ಮಹಾಶಿವರಾತ್ರಿ ಹಬ್ಬವನ್ನು ಶ್ರದ್ಧಾಭಕ್ತಿ ಯಿಂದ ಆಚರಿಸಲಾಯಿತು, ವಿಶೇಷ ಪೂಜೆಗಳೂ ನೆರವೇರಿದವು.

ವಿಕ ಸುದ್ದಿಲೋಕ 8 Mar 2016, 4:22 am
ಮಡಿಕೇರಿ: ಜಿಲ್ಲೆಯ ಹಲವೆಡೆ ಮಹಾಶಿವರಾತ್ರಿ ಹಬ್ಬವನ್ನು ಶ್ರದ್ಧಾಭಕ್ತಿ ಯಿಂದ ಆಚರಿಸಲಾಯಿತು, ವಿಶೇಷ ಪೂಜೆಗಳೂ ನೆರವೇರಿದವು.
Vijaya Karnataka Web haranama district memory
ಜಿಲ್ಲಾದ್ಯಂತ ಹರನಾಮ ಸ್ಮರಣೆ

ನಗರದ ಇತಿಹಾಸ ಪ್ರಸಿದ್ಧ ಓಂಕಾರೇಶ್ವರ ದೇವಸ್ಥಾನ ದಲ್ಲಿ ಮಹಾಶಿವರಾತ್ರಿಯ ವಿಶೇಷ ಪೂಜೆ, ಅಭಿಷೇಕ ನಡೆ ಯಿತು. ಉಷಾಕಾಲದಿಂದ ವಿಶೇಷ ಕಲಶ ಪ್ರತಿಷ್ಠಾಪನೆ ಜರುಗಿತು. ಶತರುದ್ರಾಭಿಷೇಕ ಸಂಕಲ್ಪ, ಮಹಾಮೃತ್ಯುಂಜಯ ಹೋಮ, ಮಧ್ಯಾಹ್ನದ ವಿಶೇಷ ಅಭಿಷೇಕ, ಮಹಾಪೂಜೆ, ಬಿಲ್ವಾರ್ಚನೆ, ಕ್ಷೀರಾಭಿಷೇಕ ಮುಂತಾದ ಸೇವೆಗಳು ನಡೆ ಯಿತು. ಭಕ್ತಾಧಿಗಳಿಗೆ ಅಹೋರಾತ್ರಿ ಓಂಕಾರೇಶ್ವರನ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ರಾಮಾಂಜನೇಯ ಭಜನಾ ಮಂಡಳಿಯ ಭಜನೆ, ಸುಳ್ಯದ ಕಲಾತಂಡದಿಂದ ಓಂ ನಮಃ ಶಿವಾಯ ಎಂಬ ಯಕ್ಷಗಾನ ಪ್ರದರ್ಶಿಸಲಾಯಿತು.
ಗೌರಿ ಶಂಕರ ದೇಗುಲ: ಮಡಿಕೇರಿ ಸಮೀಪದ ಮೇಕೇರಿ ಗ್ರಾಮದ ಗೌರಿ ಶಂಕರ ದೇವಸ್ಥಾನದಲ್ಲಿ ಮಹಾಗಣಪತಿ ಹೋಮ, ಮಹಾಮೃತ್ಯುಂಜಯ ಹೋಮ ನಡೆಯಿತು. 11ಕ್ಕೆ ಗ್ರಾಮದ ನಾಲ್ಕು ದಿಕ್ಕುಗಳಿಂದ ಮೆರವಣಿಗೆಯಲ್ಲಿ ಹೊರೆ ಕಾಣಿಕೆ ತಂದು ಅರ್ಪಿಸಲಾಯಿತು.
ಸಂಜೆ ಗೋಧೂಳಿ ಪೂಜೆ, ದೀಪಾಲಂಕಾರ, ರುದ್ರಾಭಿಷೇಕ ಪೂಜೆ ವಿಶೇಷವಾಗಿ ನಡೆಯಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮ, ರಂಗಪೂಜೆ, ಸಿಡಿಮದ್ದಿನ ಪ್ರದರ್ಶನ ನೆರೆದಿದ್ದ ಭಕ್ತರನ್ನು ಆಕರ್ಷಿಸಿತು.
ಮುನೇಶ್ವರ ದೇವಸ್ಥಾನ: ನಗರದ ದೋಬಿಕೆರೆ ಬಳಿ ಯಿರುವ ಶ್ರೀ ವೀರಭದ್ರೇಶ್ವರ ಮುನೇಶ್ವರ ದೇವಸ್ಥಾನದಲ್ಲಿಯೂ ವಿಶೇಷವಾದ ಪೂಜಾ ಕಾರ್ಯ ನೆರವೇರಿತು. ಮಕ್ಕಳಿಗೆ ಶಿವನ ಹೆಸರು ಬಿಡಿಸುವುದು, ಹಿಂದೂ ದೇವರುಗಳ ಹೆಸರು ಬರೆಯುವ ಸ್ಪರ್ಧೆ ನಡೆಯಿತು. ಸಂಜೆ ರಾಗ ತಾಳ ಭಾರತಿ, ಸೋಮವಾರಪೇಟೆ ತಂಡದಿಂದ ನೃತ್ಯ, ಡಾ.ವೀಣಾ ತಂಡದಿಂದ ಯಕ್ಷಗಾನ ನಡೆಯಿತು.
ಬ್ರಹ್ಮಕುಮಾರಿ ಆಶ್ರಮ: ನಗರದ ದಾಸವಾಳದಲ್ಲಿರುವ ಬ್ರಹ್ಮಕುಮಾರಿ ಆಶ್ರಮದಲ್ಲಿ 11 ಶಿವಲಿಂಗಗಳನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.

ವಿಶ್ವನಾಥನಿಗೆ ವಿಶೇಷ ಪೂಜಾ ಕೈಂಕರ್ಯ ಸುಂಟಿಕೊಪ್ಪ: ಸುಂಟಿಕೊಪ್ಪ ಸುತ್ತ ಮುತ್ತಲಿನ ದೇಗುಲಗಳಲ್ಲಿ ಮಹಾ ಶಿವರಾತ್ರಿ ಹಬ್ಬ ಆಚರಿಸಲಾಯಿತು. ಬೈತುರಪ್ಪ ಪೊವ್ವದಿ ಬಸವೇಶ್ವರ ದೇಗುಲ: ಇಲ್ಲಿಗೆ ಸಮೀಪದ ಕೊಡಗರಹಳ್ಳಿಯ ಬೈತೂರಪ್ಪ ಪೊವ್ವದಿ ಬಸವೇಶ್ವರ ದೇವಾಲಯದಲ್ಲಿ ಬೆಳಗ್ಗೆ ರುದ್ರಾಭಿಷೇಕ ಹಾಗೂ ವಿಶೇಷ ಪೂಜಾ ಕೈಂಕರ್ಯಗಳು ನಡೆದವು.
ವಿಶ್ವನಾಥ ದೇವಾಲಯ: ಇಲ್ಲಿಗೆ ಸಮೀ ಪದ ಕಂಬಿಬಾಣೆಯಲ್ಲಿರುವ ವಿಶ್ವನಾಥ ದೇವಾಲಯದಲ್ಲಿ ಭಾನುವಾರದಿಂದಲೇ ವಿಶೇಷ ಪೂಜೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಬೆಳಗ್ಗೆಯಿಂದಲೇ ವಿಶೇಷ ಪೂಜೆಗಳು ನಡೆದು ಮಹಾಮಂಗಳಾರತಿ, ಪ್ರಸಾದ ವಿತರಣೆ, ಬಳಿಕ ಅನ್ನಸಂತರ್ಪಣೆಯಲ್ಲಿ ನೂರಾರು ಭಕ್ತರು ಪಾಲ್ಗೊಂಡರು. ರಾತ್ರಿ ಕೇರಳ ಮತ್ತು ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಶ್ರೀರಾಮ, ಚಾಮುಂಡೇಶ್ವರಿ ದೇವಾ ಲಯ: ಕಂಬಿಬಾಣೆಯ ಶ್ರೀರಾಮ ಮತ್ತು ಚಾಮುಂಡೇಶ್ವರಿ ದೇಗುಲದಲ್ಲಿ ಶಿವರಾತ್ರಿ ಪ್ರಯುಕ್ತ ಸೋಮವಾರ ಬೆಳಗ್ಗೆ ಸಾರ್ವಜನಿಕ ಸಾಮೂಹಿಕ ಸತ್ಯ ನಾರಾಯಣ ಪೂಜೆ ನಡೆಸಲಾಯಿತು. ಸುತ್ತಮುತ್ತಲಿನ ಗ್ರಾಮದ ನೂರಾರು ಭಕ್ತರು ಪಾಲ್ಗೊಂಡಿದ್ದರು.



ಕೂಡಿಗೆ ವ್ಯಾಪ್ತಿಯಲ್ಲಿ ಶಿವರಾತ್ರಿ ಪೂಜೋತ್ಸವ ಕುಶಾಲನಗರ: ಇಲ್ಲಿಗೆ ಸಮೀಪದ ಕೂಡಿಗೆಯ ಉದ್ಬವ ಸುಬ್ರಹ್ಮಣ್ಯ ಸ್ವಾಮಿ ದೇಗುಲ ಆವರಣದಲ್ಲಿ ಮಹಾಶಿವರಾತ್ರಿ ಅಂಗವಾಗಿ ಉದ್ಬವ ಸುಬ್ರಹ್ಮಣ್ಯ ಸ್ವಾಮಿಗೆ ವಿಶೇಷ ಪೂಜೆ ಹಾಗೂ ಅಭಿಷೇಕಗಳು ಬೆಳಗ್ಗಿನಿಂದಲೇ ನೆರವೇರಿದವು. ಕೂಡಿಗೆ ಕೂಡುಮಂಗಳೂರು ವ್ಯಾಪ್ತಿಯ ನೂರಾರು ಭಕ್ತರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಹುದುಗೂರಿನ ಉಮಾಮಹೇಶ್ವರ ಕ್ಷೇತ್ರದಲ್ಲಿ ಮಹಾಗಣಪತಿಹೋಮ, ಮಹಾಮೃತ್ಯುಂಜಯ ಹೋಮ, ರುದ್ರಹೋಮ, ರುದ್ರಾಭಿಷೇಕ ಸೇರಿದಂತೆ ಪೂಜಾ ಕೈಂಕರ್ಯಗಳು ನಡೆದವು.
ಸ್ವಾಮಿಯ ಉತ್ಸವ ಮೂರ್ತಿಯನ್ನು ಅಲಂಕೃತ ಮಂಟಪದಲ್ಲಿ ಕುಳ್ಳಿರಿಸಿ, ಮೆರವಣಿಗೆಯು ಹುದುಗೂರು ಯಡವನಾಡು ರಸ್ತೆಯಲ್ಲಿ ಸಾಗಿ, ಮದಲಾಪುರ, ಕೂಡಿಗೆ ಮಾಗವಾಗಿ ಸನ್ನಿದಾನವನ್ನು ಸೇರಿತು.
ಸೋಮೇಶ್ವರ ದೇಗುಲ: ಕುಶಾಲನಗರದ ಪ್ರಮುಖ ಶಿವನ ದೇವಾಲಯವಾಗಿರುವ ಸೋಮೇಶ್ವರ ದೇವಸ್ಥಾನದಲ್ಲಿ ಬೆಳಗ್ಗಿನಿಂದಲೇ ಶಿವನ ವಿಗ್ರಹಕ್ಕೆ ವಿಶೇಷ ಪೂಜೆ ಹಾಗೂ ಅಭಿಷೇಕ ಸೇರಿದಂತೆ ಪೂಜಾ ಕೈಂಕರ್ಯಗಳು ನೆರವೇರಿದವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ