ಆ್ಯಪ್ನಗರ

ಕೊಡುಗು ಭಾಷೆಯಲ್ಲಿ ಟ್ವೀಟ್, ಸರಕಾರಿ ಆಸ್ಪತ್ರೆ ವೈದ್ಯರಿಗೆ ಚಾಟಿ ಬೀಸಿದ ಶ್ರೀರಾಮುಲು

ಕೂರ್ಗ್ ಪ್ರವಾಸಲ್ಲಿರುವ ಆರೋಗ್ಯ ಸಚಿವ ಶ್ರೀ ರಾಮುಲು ಕೊಡಗು ಭಾಷೆಯಲ್ಲಿ ಟ್ವೀಟ್ ಮಾಡಿ ಗಮನ ಸೆಳೆದರು. ಪರಿಸ್ಥಿತಿಯನ್ನು ಅವಲೋಕಿಸಿ ಜಿಲ್ಲೆಯಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ತೆರೆಯುವ ಬಗ್ಗೆ ಭರವಸೆ ನೀಡಿದರು.

Vijaya Karnataka Web 27 Sep 2019, 5:13 pm
ಕೊಡಗು ಜಿಲ್ಲಾ ಪ್ರವಾಸಲ್ಲಿರುವ ಆರೋಗ್ಯ ಸಚಿವ ಬಿ ಶ್ರೀ ರಾಮುಲು ಗುರುವಾರ ರಾತ್ರಿ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ, ಅಲ್ಲೇ ವಾಸ್ತವ್ಯ ಹೂಡಿದರು. ಈ ವೇಳೆ ಸರಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡಲು ಶ್ರದ್ಧೆ ತೋರದ ಸರ್ಕಾರಿ ವೈದ್ಯರಿಗೆ ಆರೋಗ್ಯ ಸಚಿವ ಬಿ.ಶ್ರೀರಾಮುಲು ವಾರ್ನಿಂಗ್ ಕೊಟ್ಟರು.
Vijaya Karnataka Web ramulu




ಮಡಿಕೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶ್ರೀರಾಮುಲು, ಎಂತಹ ಪರಿಸ್ಥಿತಿ ಬಂದರೂ ನಾನು ಬಗ್ಗಲಾರೆ. ಸರಕಾರಿ ವೈದ್ಯರು ಎಂದ ಮೇಲೆ ಜನರ ಸೇವೆಯೇ ಮುಖ್ಯ. ಎರಡು ಬೋಟುಗಳ ಮೇಲೆ ಕಾಲು ಇಡಬಾರದು. ಪ್ರತಿವರ್ಷ ಸಾವಿರಾರು ವಿದ್ಯಾರ್ಥಿಗಳು ಎಂಬಿಬಿಎಸ್‌ ಪದವಿ ಮುಗಿಸಿ ಹೊರ ಬರುತ್ತಿದ್ದು, ನಿರುದ್ಯೋಗ ಸಮಸ್ಯೆ ಅವರನ್ನು ಕಾಡುತ್ತಿದೆ. ಒಂದು ವೇಳೆ ಸರಕಾರಿ ವೈದ್ಯರು ಖಾಸಗಿಯಾಗಿ ಕೂಡ ಕೆಲಸ ಮಾಡುತ್ತಿದ್ದಾರೆ ಎಂದರೆ ಅಂತವರು ಮುಲಾಜಿಲ್ಲದೆ ತೊಲಗಬಹುದು ಎಂದರು.

ಪಿಎಫ್ ಐ ಸಂಘಟನೆ ಪ್ರಭಾವಕ್ಕೆ ಒಳಗಾದ ಕೊಡಗು ಡಿಸಿ, ವೈರಲ್ ಸುದ್ದಿ ವಿರುದ್ಧ ದೂರು ಕೊಟ್ಟ ಜಾಯ್

ಜೊತೆಗೆ , ಖಾಸಗಿ ಆಸ್ಪತ್ರೆಗಳಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಸರಕಾರಿ ಆಸ್ಪತ್ರೆಯ ಪರ ಕೆಲಸ ಮಾಡುತ್ತೇನೆ. ಸರಕಾರಿ ಆಸ್ಪತ್ರೆಗಳನ್ನು ಶುಚಿಯಾಗಿಡಲು ಟೆಂಡರ್‌ ಮೂಲಕ ಕೆಲಸ ನಿರ್ವಹಿಸುವಂತೆ ಕ್ರಮ ಕೈಗೊಳ್ಳಲು ತೀರ್ಮಾನಿಸಿದ್ದು, ಕಾಪೋರೇಟ್‌ ಸೆಕ್ಟರ್‌ ಮಾದರಿಯಲ್ಲಿ ಸರಕಾರಿ ಆಸ್ಪತ್ರೆಗಳು ಬೆಳೆಯಬೇಕೆನ್ನುವುದು ನನ್ನ ಗುರಿಯಾಗಿದೆ ಎಂದರು.

ಬಳ್ಳಾರಿ ರಿಪಬ್ಲಿಕ್‌ ಇಬ್ಭಾಗಕ್ಕೆ ಗಣಿಧಣಿಗಳ ತೀವ್ರ ವಿರೋಧ: ಬಿಎಸ್‌ವೈಗೆ ಮತ್ತೊಂದು ಸಂಕಷ್ಟ

ಇದರ ಜೊತೆಗೆ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರ , ಸಿಬ್ಬಂದಿಗಳ ಕೊರತೆ ಇದೆ ಆದಷ್ಟು ಬೇಗ ಈ ಕೊರತೆಯನ್ನು ಶಮನ ಮಾಡಲಾಗುವುದು. ಈಗಾಗಲೇ ಆಯಾಯ ಜಿಲ್ಲೆಯ ಆರೋಗ್ಯಾಧಿಕಾರಿಗಳಲ್ಲಿ ವೈದ್ಯರನ್ನು ನೇಮಿಸಲು ಸೂಚನೆ ನೀಡಲಾಗಿದೆ ಎಂದರು.



ಇನ್ನು ಕೊಡಗು ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಅಗತ್ಯವಾಗಿ ಬೇಕು. ಇಲ್ಲಿಯ ಪ್ರವಾಹದ ಸ್ಥಿತಿಯ ಬಗ್ಗೆ ನಾನು ಸಂಪೂರ್ಣ ಮನಗಂಡಿರುವೆ. ಈ ಬಗ್ಗೆ ಮುಖ್ಯಮಂತ್ರಿ ಮತ್ತು ಶಾಸಕರ ಜೊತೆ ಚರ್ಚೆ ನಡೆಸುತ್ತೇನೆ ಎಂದು ಭರವಸೆ ನೀಡಿದರು.

ಇನ್ನು ಆರೋಗ್ಯ ಸಚಿವರು ಕೊಡಗಿಗೆ ಭೇಟಿ ನೀಡತ್ತಾರೆ ಎಂಬ ವಿಚಾರ ತಿಳಿದ ಜನ ಮಡಿಕೇರಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕಾಗಿ ಟ್ವಿಟರ್ ಅಭಿಯಾನ ಕೂಡ ಆರಂಭಿಸಿದ್ದರು.

ನೆರೆ ಪರಿಹಾರ ಕಾರ್ಯದಲ್ಲೂರಾಜಕೀಯ ಮೇಲಾಟ

ಟ್ವೀಟ್ ಅಭಿಯಾನದ ಬಗ್ಗೆ ಮಾಹಿತಿ ತಿಳಿದ ರಾಮುಲು, ಕೊಡಗಿನ ಮಾತೃಭಾಷೆಯಲ್ಲಿ "ಕೊಡಗಿನ ಜನತೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯ ಬೇಡಿಕೆಯನ್ನು ಮುಂದಿಟ್ಟಿದ್ದು, ವೀರ ಯೋಧರನ್ನು ನೀಡಿದ ಕೊಡಗಿಗೆ ಬೇಕಾಗುತ್ತದೆ. ಆಸ್ಪತ್ರೆ ಬಗ್ಗೆ ಆದಷ್ಟುಬೇಗ ಚರ್ಚೆ ಮಾಡಿ ಒಂದು ತೀರ್ಮಾನ ತೆಗೆದುಕೊಳ್ಳುತ್ತೇನೆ. ಕೊಡಗಿನ ಜನರೇ ಗುರುವಾರ ಸಂಜೆ 6 ಗಂಟೆಗೆ ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಇರುತ್ತೇನೆ. ಎಲ್ಲರೂ ಒಟ್ಟಿಗೆ ಸೇರಿ ಆಸ್ಪತ್ರೆ ಬೇಡಿಕೆ ಬಗ್ಗೆ ಚರ್ಚೆ ಮಾಡೋಣ ಎಂದು ಟ್ವೀಟ್ ಮಾಡಿ ಗಮನ ಸೆಳೆದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ