ಆ್ಯಪ್ನಗರ

ಪೊನ್ನಂಪೇಟೆ ಸ್ಪೋರ್ಟ್ಸ್ ಹಾಸ್ಟೆಲ್‌ಗೆ ಹಾಕಿ ಟ್ರೋಫಿ

ಬೆಂಗಳೂರಿನ ಫೀಲ್ಡ್‌ಮಾರ್ಷಲ್‌ ಕೆ.ಎಂ. ಕಾರ್ಯಪ್ಪ ಆರೇನಾ ಮೈದಾನದಲ್ಲಿ ಹಾಕಿ ಕರ್ನಾಟಕದ ವತಿಯಿಂದ ನಡೆದ ರಾಜ್ಯಮಟ್ಟದ 14 ವರ್ಷದೊಳಗಿನವರ ಮಿನಿ ಒಲಿಂಪಿಕ್ಸ್‌ನ ಹಾಕಿ ಆಟದಲ್ಲಿ ಕೊಡಗು ಜಿಲ್ಲೆಯ ಪೊನ್ನಂಪೇಟೆಯ ಶಶಾಂತ್‌ ನಾಯಕತ್ವದ ಸ್ಪೋರ್ಟ್ಸ್ ಹಾಸ್ಟೆಲ್‌ ತಂಡವು ಜಯ ಗಳಿಸಿದೆ.

Vijaya Karnataka 10 Feb 2020, 5:00 am
ನಾಪೆæäೕಕ್ಲು: ಬೆಂಗಳೂರಿನ ಫೀಲ್ಡ್‌ಮಾರ್ಷಲ್‌ ಕೆ.ಎಂ. ಕಾರ್ಯಪ್ಪ ಆರೇನಾ ಮೈದಾನದಲ್ಲಿ ಹಾಕಿ ಕರ್ನಾಟಕದ ವತಿಯಿಂದ ನಡೆದ ರಾಜ್ಯಮಟ್ಟದ 14 ವರ್ಷದೊಳಗಿನವರ ಮಿನಿ ಒಲಿಂಪಿಕ್ಸ್‌ನ ಹಾಕಿ ಆಟದಲ್ಲಿ ಕೊಡಗು ಜಿಲ್ಲೆಯ ಪೊನ್ನಂಪೇಟೆಯ ಶಶಾಂತ್‌ ನಾಯಕತ್ವದ ಸ್ಪೋರ್ಟ್ಸ್ ಹಾಸ್ಟೆಲ್‌ ತಂಡವು ಜಯ ಗಳಿಸಿದೆ.
Vijaya Karnataka Web MDK9NPK10_19
ಬೆಂಗಳೂರಿನಲ್ಲಿನಡೆದ ಮಿನಿ ಒಲಿಂಪಿಕ್ಸ್‌ನ ಹಾಕಿ ಆಟದಲ್ಲಿ ಟ್ರೋಫಿ ವಿಜೇತ ಪೊನ್ನಂಪೇಟೆ ಸ್ಪೋರ್ಟ್ಸ್ ಹಾಸ್ಟೆಲ್‌ ತಂಡ.


ಪೊನ್ನಂಪೇಟೆ ತಂಡವು 4-1 ಅಂತರದಿಂದ ಬಳ್ಳಾರಿ ತಂಡವನ್ನು ಮಣಿಸಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.

ಫೈನಲ್‌ ಪಂದ್ಯದಲ್ಲಿ ಪೊನ್ನಂಪೇಟೆ ತಂಡದ ಕುಶಾಲ್‌ ಬೋಪಯ್ಯ 2 ಗೋಲುಗಳಿಸಿದ್ದರು, ಇದನ್ನು ಬಳ್ಳಾರಿ ತಂಡವು ಸಮಗೊಳಿಸಿತು. ನಂತರ ನಿಗದಿತ ಅವಧಿಯಲ್ಲಿ ಯಾವುದೇ ಗೋಲು ಬಾರದ ಕಾರಣ ಟೈಬ್ರೇಕರ್‌ ನೀಡಲಾಯಿತು. ಇದರಲ್ಲಿ ಪೊನ್ನಂಪೇಟೆ ಸ್ಪೋರ್ಟ್ಸ್ ಹಾಸ್ಟೆಲ್‌ ತಂಡವು 4-1 ಅಂತರದಿಂದ ಗೆಲುವು ಸಾಧಿಸಿತು.

ಪಂದ್ಯಾಟದ ಪ್ರಾರಂಭದಲ್ಲಿ ಕೊಡಗಿನ ಪೊನ್ನಂಪೇಟೆ ಸ್ಪೋರ್ಟ್ಸ್ ಹಾಸ್ಟೆಲ್‌ ತಂಡವು ಮೊದಲ ಪಂದ್ಯದಲ್ಲಿ ಬೆಳಗಾವಿ ತಂಡವನ್ನು 16 ಗೋಲುಗಳಿಂದ ಮಣಿಸಿತು. ಎರಡನೇ ಪಂದ್ಯದಲ್ಲಿ ಕಲಬುರಗಿ ತಂಡವನ್ನು 11 ಗೋಲುಗಳಿಂದ ಪರಾಭವ ಗೊಳಿಸಿತು. ಮೂರನೇ ಪಂದ್ಯದಲ್ಲಿ ಧಾರವಾಡ ತಂಡವನ್ನು 8 ಗೋಲುಗಳ ಅಂತರದಿಂದ ಮಣಿಸಿತು. ಸೆಮಿಫೈನಲ್‌ನಲ್ಲಿ ಕೂಡಿಗೆ ಸ್ಪೋರ್ಟ್ಸ್ ಹಾಸ್ಟೆಲ್‌ ತಂಡವನ್ನು 3 ಗೋಲುಗಳಿಂದ ಸೋಲಿಸಿ ಈ ಹಂತಕ್ಕೆ ತಲುಪಿತು. ಪೊನ್ನಂಪೇಟೆ ಸ್ಪೋರ್ಟ್ಸ್ ಹಾಸ್ಟೆಲ್‌ ತಂಡದ ತರಬೇತುದಾರರಾಗಿ ಕುಪ್ಪಂಡ ಸುಬ್ಬಯ್ಯ ಮತ್ತು ಬುಟ್ಟಿಯಂಡ ಚಂಗಪ್ಪ ಕಾರ್ಯನಿರ್ವಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ