ಆ್ಯಪ್ನಗರ

ಸೂರಿಲ್ಲದವರಿಗೆ ಮನೆ: ಆದ್ಯತೆ ಮೇರೆಗೆ ಕಾರ್ಯಪ್ರವೃತ್ತರಾಗಿ

ವಿಕ ಸುದ್ದಿಲೋಕ ಮಡಿಕೇರಿ ಸೂರಿಲ್ಲದವರಿಗೆ ಮನೆ ನಿರ್ಮಿಸಿ ಸೂಕ್ತ ಆಶ್ರಯ ನೀಡುವ ನಿಟ್ಟಿನಲ್ಲಿ ರೋಟರಿ ಸಂಸ್ಥೆ ಆದ್ಯತೆಯ ಮೇರೆಗೆ ಕಾರ್ಯಪ್ರವೃತ್ತವಾಗುವಂತೆ ಅಂತಾರಾಷ್ಟ್ರೀಯ ...

Vijaya Karnataka 19 Jun 2019, 9:08 pm
ಮಡಿಕೇರಿ
Vijaya Karnataka Web house for shelterless work on priority
ಸೂರಿಲ್ಲದವರಿಗೆ ಮನೆ: ಆದ್ಯತೆ ಮೇರೆಗೆ ಕಾರ್ಯಪ್ರವೃತ್ತರಾಗಿ


ಸೂರಿಲ್ಲದವರಿಗೆ ಮನೆ ನಿರ್ಮಿಸಿ ಸೂಕ್ತ ಆಶ್ರಯ ನೀಡುವ ನಿಟ್ಟಿನಲ್ಲಿ ರೋಟರಿ ಸಂಸ್ಥೆ ಆದ್ಯತೆಯ ಮೇರೆಗೆ ಕಾರ್ಯಪ್ರವೃತ್ತವಾಗುವಂತೆ ಅಂತಾರಾಷ್ಟ್ರೀಯ ರೋಟರಿಯ ಮಾಜಿ ಅಧ್ಯಕ್ಷ ಕಲ್ಯಾಣ್‌ ಬ್ಯಾನರ್ಜಿ ಕರೆ ನೀಡಿದರು.

ಮಾದಾಪುರ ಸಮೀಪದ ಇಗ್ಗೋಡ್ಲು ಗ್ರಾಮದಲ್ಲಿ ರೋಟರಿ ಜಿಲ್ಲೆ 3181ರ ವತಿಯಿಂದ ರೀ ಬಿಲ್ಡ್‌ ಕೊಡಗು ಯೋಜನೆಯಡಿ ನಿರ್ಮಿಸಲಾದ ಮನೆಗಳನ್ನು ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಹಸ್ತಾಂತರಿಸಿ ಮಾತನಾಡಿದರು.

''ದೇಶದಲ್ಲಿ ಬಹಳಷ್ಟು ಮಂದಿಗೆ ಇನ್ನೂ ಸೂರು ದೊರಕಿಲ್ಲ. ಅನೇಕ ನಗರಗಳ ರಸ್ತೆ ಬದಿಯಲ್ಲಿಯೇ ಜನ ರಾತ್ರಿ ಆಶ್ರಯ ಪಡೆಯುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಇಂಥ ಪರಿಸ್ಥಿತಿಯಲ್ಲಿ ಸೂರಿಲ್ಲದವರನ್ನು ಗುರುತಿಸಿ ಮನೆ ನಿರ್ಮಿಸಿ ಕೊಡುವ ಕಾರ್ಯಕ್ಕೆ ರೋಟರಿ ಮುಂದಾಗಬೇಕು. ಮುಂದಿನ ಹಂತದಲ್ಲಿ ಇನ್ನೂ 25 ಮನೆಗಳ ನಿರ್ಮಾಣಕ್ಕೆ ಭಾರತಾದ್ಯಂತ ರೋಟರಿ ಕ್ಲಬ್‌ಗಳ ಸಹಕಾರ ಒದಗಿಸಲಾಗುವುದು. ಕೊಡಗಿನ ಸಂತ್ರಸ್ತರಿಗೆ ಇನ್ನೂ ಹೆಚ್ಚಿನ ಮನೆಗಳ ಅಗತ್ಯವಿದ್ದರೆ ಅಷ್ಟೂ ಮನೆಗಳನ್ನು ನಿರ್ಮಿಸಲು ಯೋಜನೆ ರೂಪಿಸಿದರೆ, ಬೆಂಬಲಿಸಲಾಗುವುದು,'' ಎಂದು ಹೇಳಿದರು.

''ಮನೆ ನಿರ್ಮಿಸಿಕೊಡುವುದು ಪುಣ್ಯದ ಕೆಲಸ. ಪ್ರತಿಯೊಬ್ಬರ ಜೀವನ ಕೂಡ ಮನೆಯಿಂದಲೇ ಪ್ರಾರಂಭವಾಗುತ್ತದೆ. ಮಹಿಳೆ, ಮಕ್ಕಳಿಗೆ ಮನೆಯೇ ಭದ್ರತೆಯ ಭಾವನೆ ಮೂಡಿಸುತ್ತದೆ. ಹೀಗಿರುವಾಗ ಉತ್ತಮ ಮನೆಗಳನ್ನು ಕಡಿಮೆ ವೆಚ್ಚದಲ್ಲಿಯೂ ನಿರ್ಮಿಸಲು ಸಾಧ್ಯ ಎಂಬುದನ್ನು ರೋಟರಿ ಸಂಸ್ಥೆಯು ಹ್ಯಾಬಿಟೇಟ್‌ ಫಾರ್‌ ಹ್ಯುಮ್ಯಾನಿಟಿ ಇಂಡಿಯಾ ಸಂಸ್ಥೆಯ ಮೂಲಕ ಭಾರತಾದ್ಯಂತ ಈಗಾಗಲೇ ನಿರೂಪಿಸಿದೆ,'' ಎಂದೂ ಶ್ಲಾಘಿಸಿದರು.

ರೋಟರಿ ಜಿಲ್ಲಾ ಗವರ್ನರ್‌ ಪಿ.ರೋಹಿನಾಥ್‌, ಹ್ಯಾಬಿಟೇಟ್‌ ಫಾರ್‌ ಹ್ಯುಮ್ಯಾನಿಟಿ ಇಂಡಿಯಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಾಜನ್‌ ಸ್ಯಾಮುವೆಲ್‌, ರೋಟರಿಯ ರೀಬಿಲ್ಡ್‌ ಕೊಡಗು ಯೋಜನೆಯ ಅಧ್ಯಕ್ಷ ಡಾ.ರವಿ ಅಪ್ಪಾಜಿ, ರೋಟರಿ ಮಾಜಿ ಗೌರ್ನರ್‌ ಕೃಷ್ಣಶೆಟ್ಟಿ, ರೋಟರಿ ಜಿಲ್ಲೆ 3182ರ ಗೌರ್ನರ್‌ ಅಭಿನಂದನ್‌ ಶೆಟ್ಟಿ, ಮಾದಾಪುರ ಗ್ರಾ.ಪಂ. ಅಧ್ಯಕ್ಷೆ ಲತಾ ಮಾತನಾಡಿದರು.

ರೋಟರಿ ಜಿಲ್ಲೆಯ ಮಾಜಿ ಗೌರ್ನರ್‌ಗಳಾದ ಡಾ.ನಾಗಾರ್ಜುನ್‌, ದೇವದಾಸ ರೈ, ಮಾತಂಡ ಸುರೇಶ್‌ ಚಂಗಪ್ಪ, ಆರ್‌.ಕೃಷ್ಣ, ನಾಗೇಂದ್ರಪ್ರಸಾದ್‌, ಮುಂದಿನ ಸಾಲಿನ ರೋಟರಿ ಗೌರ್ನರ್‌ ಜ್ಯೊಸೆಫ್‌ ಮ್ಯಾಥ್ಯೂ, ನಿಯೋಜಿತ ಗೌರ್ನರ್‌ ರಂಗನಾಥ ಭಟ್‌, ರೋಟರಿ ಜಿಲ್ಲೆಯ ವಿವಿಧ ಕ್ಲಬ್‌ಗಳ ಪ್ರಮುಖರು, ಮಾದಾಪುರ ವ್ಯಾಪ್ತಿಯ ಗ್ರಾಮಸ್ಥರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಇದೇ ಸಂದರ್ಭ ರೋಟರಿಯಿಂದ ನಿರ್ಮಿಸಲಾದ ಮನೆಗಳನ್ನು ಗಣ್ಯರು ಪರಿಶೀಲಿಸಿ ಫಲಾನುಭವಿಗಳಿಗೆ ಮನೆಗಳ ಕೀಲಿಕೈ ಹಸ್ತಾಂತರಿಸಿದರು. ಕಾರ್ಯಕ್ರಮದ ನೆನಪಿಗಾಗಿ ಕಲ್ಯಾಣ್‌ ಬ್ಯಾನರ್ಜಿ ಸಸಿಯನ್ನೂ ನೆಟ್ಟರು. ಕುಶಾಲನಗರ ಇನ್ನರ್‌ ವೀಲ್‌ ಸಂಸ್ಥೆಯಿಂದ 25 ಫಲಾನುಭವಿಗಳಿಗೆ ಗ್ಯಾಸ್‌ ಸ್ಟೌ ಮತ್ತು ವಾಟರ್‌ ಫಿಲ್ಟರ್‌ ವಿತರಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ