ಸುಂಟಿಕೊಪ್ಪ: ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ 1ನೇ ವಿಭಾಗದಲ್ಲಿ ಅಕ್ರಮ ಮದ್ಯ ಮಾರುತ್ತಿದ್ದ ಇಬ್ಬರನ್ನು ಪಟ್ಟಣ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸುಂಟಿಕೊಪ್ಪದಲ್ಲಿ ಗ್ರಾಮ ಪಂಚಾಯಿತಿ ಮರು ಚುನಾವಣೆ ಹಿನ್ನೆಲೆಯಲ್ಲಿ ಏಪ್ರಿಲ್ 4 ರಿಂದ 20 ರವರೆಗೆ ಚುನಾವಣಾಧಿಕಾರಿ ಮದ್ಯಮಾರಾಟ ನಿಷೇಧಿಸಿದ್ದರು. ಈ ಸಂದರ್ಭ ಬಳಸಿಕೊಂಡು ಪುಂಗಾವನ ಹಾಗೂ ಕೃಷ್ಣ ಅಲಿಯಾಸ್ ಕುರುವಿ ಮದ್ಯ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆ ಕಾರ್ಯಾಚರಣೆ ನಡೆದಿ ಪೊಲೀಸರು ಆರೋಪಿಗಳನ್ನು ಸೋಮವಾರ ಬಂಧಿಸಿ 37 ಮದ್ಯದ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಠಾಣಾಧಿಕಾರಿ ಪಿ. ಜಗದೀಶ್ ತಿಳಿಸಿದ್ದಾರೆ.