ಆ್ಯಪ್ನಗರ

ವಿರಾಜಪೇಟೆ ನಿವಾಸಕ್ಕೆ ಬಂದ ನಟಿ ರಶ್ಮಿಕಾ : ಐಟಿ ಅಧಿಕಾರಿಗಳಿಂದ ಡ್ರಿಲ್ ಶುರು

ಖ್ಯಾತ ಸಿನಿಮಾ ನಟಿ ರಶ್ಮಿಕಾ ಮಂದಣ್ಣ ನಿವಾಸದ ಮೇಲೆ ಐಟಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಇದೀಗ ತಮ್ಮ ನಿವಾಸಕ್ಕೆ ರಶ್ಮಿಕಾ ಆಗಮಿಸಿದ್ದು ಐಟಿ ಅಧಿಕಾರಿಗಳು ರಶ್ಮಿಕಾ ಬಳಿ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.

Vijaya Karnataka Web 16 Jan 2020, 10:59 pm
ಮಡಿಕೇರಿ: ಖ್ಯಾತ ಚಿತ್ರನಟಿ ರಶ್ಮಿಕಾ ಮಂದಣ್ಣ ನಿವಾಸದ ಮೇಲೆ ಐಟಿ ದಾಳಿ ನಡೆದಿದ್ದು ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. ಗುರುವಾರ ಬೆಳಗ್ಗೆ ಐಟಿ ಅಧಿಕಾರಿಗಳ ತಂಡ ಈ ದಾಳಿ ನಡೆಸಿದ್ದು ಇದೀಗ ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿರುವ ತನ್ನ ನಿವಾಸಕ್ಕೆ ರಶ್ಮಿಕಾ ಮಂದಣ್ಣ ಆಗಮಿಸಿದ್ದಾರೆ.
Vijaya Karnataka Web income tax raid on rashmika mandanna at madikeri
ವಿರಾಜಪೇಟೆ ನಿವಾಸಕ್ಕೆ ಬಂದ ನಟಿ ರಶ್ಮಿಕಾ : ಐಟಿ ಅಧಿಕಾರಿಗಳಿಂದ ಡ್ರಿಲ್ ಶುರು


ಕಾರಲ್ಲಿ ಮನೆಗೆ ಬಂದ ರಶ್ಮಿಕಾ ಮಂದಣ್ಣ ಅವರನ್ನು ಮನೆಯ ಗೇಟು ಪ್ರವೇಶ ಮಾಡುತ್ತಿದ್ದಂತೆ ಐಟಿ ಅಧಿಕಾರಿಗಳು ಸುತ್ತುವರಿದು ಮನೆಯ ಒಳಗೆ ಕರೆದೊಯ್ದರು. ರಶ್ಮಿಕಾ ಬಳಿ ಆದಾಯ ಮೂಲ ಹಾಗೂ ಇನ್ನಿತರ ಮಾಹಿತಿಯನ್ನು ಅಧಿಕಾರಿಗಳು ಕಲೆಹಾಕುತ್ತಿದ್ದಾರೆ.

25 ಎಕರೆ ಕಾಫಿ ತೋಟ ಖರೀದಿ ಮಾಡಿದ್ದ ರಶ್ಮಿಕಾ ಮಂದಣ್ಣ: ಪರಿಶೀಲನೆ ಬಳಿಕ ಐಟಿ ಅಧಿಕಾರಿಗಳಿಂದ ಸಮನ್ಸ್?

ರಶ್ಮಿಕಾ ಇತ್ತೀಚೆಗೆ ವಿರಾಜಪೇಟೆ ಗೋಣಿಕೊಪ್ಪ ಮುಖ್ಯರಸ್ತೆಯ ಬಿಟ್ಟಂಗಾಲ ಎಂಬ ಗ್ರಾಮದಲ್ಲಿ 3 ಎಕರೆ ಜಾಗ ಖರೀದಿಸಿ ರೆಸಿಡೆನ್ಶಿಯಲ್ ಸ್ಕೂಲ್ ಆರಂಭಿಸುವ ಪ್ರಯತ್ನ ನಡೆಸುತ್ತಿದ್ದರು. ಅಲ್ಲದೆ ವಿರಾಜಪೇಟೆ ಸುತ್ತ ಮುತ್ತ ಸುಮಾರು 50 ಎಕರೆ ಕಾಫಿ ತೋಟ ಖರೀದಿಸಿದ್ದಾರೆ. ಜೊತೆಗೆ ಹಲವು ವ್ಯವಹಾರಗಳಲ್ಲೂ ಹೂಡಿಕೆ ಮಾಡಿದ್ದಾರೆ.

ರಶ್ಮಿಕಾ ಮಂದಣ್ಣ ನಿವಾಸದ ಮೇಲೆ ಐಟಿ ದಾಳಿ: ದಾಖಲೆಗಳ ಪರಿಶೀಲನೆ

ನಗದು ರೂಪದ ಸಂಭಾವನೆ, ತೆರಿಗೆ ಪಾವತಿಯಲ್ಲಿ ವಂಚನೆ ಜೊತೆಗೆ ಕೋಟ್ಯಾಂತರ ಬೆಲೆಬಾಳುವ ಕಾರು ಜಮೀನು ಖರೀದಿಯ ಮಾಹಿತಿ ಹಿನ್ನೆಲೆಯಲ್ಲಿ ಐಟಿ ಅಧಿಕಾರಿಗಳಿಂದ ದಾಳಿ ನಡೆದಿದೆ ಎನ್ನಲಾಗಿದೆ. ಗುರುವಾರ ಮುಂಜಾನೆ ಹತ್ತು ಅಧಿಕಾರಿಗಳ ತಂಡ ದಾಳಿ ನಡೆಸಿದ್ದು ನಟಿ ರಶ್ಮಿಕಾ ಶೂಟಿಂಗ್‌ಗಾಗಿ ಹೊರ ಹೋಗಿದ್ದರಿಂದ ಮನೆಯಲ್ಲಿರಲಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ