ಆ್ಯಪ್ನಗರ

ರಣ ಬಿಸಿಲಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸರಿಗೆ ಜ್ಯೂಸ್‌!

ರಣ ಬಿಸಿಲಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಂಚಾರ ಪೊಲೀಸ್‌ ಸಿಬ್ಬಂದಿಗೆ ದಣಿವಾರಿಸಲು ಮೇಲಧಿಕಾರಿಗಳು ತಂಪು ಪಾನೀಯ ವ್ಯವಸ್ಥೆ ಕಲ್ಪಿಸಿದ್ದಾರೆ !

Vijaya Karnataka 26 Mar 2019, 9:03 pm
ವಿನೋದ್‌ ಕುಶಾಲನಗರ
Vijaya Karnataka Web juice for policemen working under hot sun
ರಣ ಬಿಸಿಲಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸರಿಗೆ ಜ್ಯೂಸ್‌!


ರಣ ಬಿಸಿಲಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಂಚಾರ ಪೊಲೀಸ್‌ ಸಿಬ್ಬಂದಿಗೆ ದಣಿವಾರಿಸಲು ಮೇಲಧಿಕಾರಿಗಳು ತಂಪು ಪಾನೀಯ ವ್ಯವಸ್ಥೆ ಕಲ್ಪಿಸಿದ್ದಾರೆ !

ಪಟ್ಟಣದಲ್ಲಿ ಟ್ರಾಫಿಕ್‌ ಸಿಗ್ನಲ್‌ ಸೇರಿದಂತೆ ವಾಹನ ದಟ್ಟಣೆ ಅಧಿಕವಿರುವ ಪ್ರಮುಖ ರಸ್ತೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಂದಾಜು 18 ಸಿಬ್ಬಂದಿಗೆ ಪ್ರತಿ ದಿನ ನಾಲ್ಕು ಬಾರಿ ತಂಪು ಪಾನೀಯ ಪೂರೈಕೆ ಮಾಡಲಾಗುತ್ತಿದೆ. ಸೋಮವಾರಪೇಟೆ ಉಪ ವಿಭಾಗದ ಪೊಲೀಸ್‌ ಉಪ ಅಧೀಕ್ಷ ಕ ದಿನಕರ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷ ಕ ದಿನೇಶ್‌ ಕುಮಾರ್‌ ತಮ್ಮ ಇಲಾಖೆ ಸಿಬ್ಬಂದಿ ಬಿಸಿಲಿನ ಬೇಗೆಯಿಂದ ದಣಿವಾರಿಸಿಕೊಳ್ಳಲು ಲೆಮನ್‌ ಜ್ಯೂಸ್‌, ಮಜ್ಜಿಗೆ, ಪುನರ್ಪುಳಿ ಜೂಸ್‌ ವಿತರಣೆಗೆ ಕ್ರಮಕೈಗೊಂಡಿದ್ದಾರೆ.

18 ಮಂದಿಗೆ:
ಪಟ್ಟಣದ ಫೀಲ್ಡ್‌ ಮಾರ್ಷಲ್‌ ಕಾರ್ಯಪ್ಪ ವೃತ್ತ, ರಥಬೀದಿ, ಐಬಿ ವೃತ್ತ, ಫಾತಿಮಾ ಕಾನ್ವೆಂಟ್‌ ಜಂಕ್ಷ ನ್‌ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 13 ಮಂದಿ ಸಂಚಾರಿ ಪೊಲೀಸ್‌ ಸಿಬ್ಬಂದಿ, 5 ಜನ ಹೋಂ ಗಾರ್ಡ್ಸ್ಗಳಿಗೆ ಪ್ರತಿದಿನ ಬೆಳಗ್ಗೆ 11ಕ್ಕೆ, ಮಧ್ಯಾಹ್ನ 1, 3 ಮತ್ತು 5 ಗಂಟೆಗೆ ಜೂಸ್‌ ಪೂರೈಸಲಾಗುತ್ತಿದೆ.

ವಾಹನ ದಟ್ಟಣೆ, ಬಿಸಿಲ ಝಳ, ವಾಹನಗಳಿಂದ ಹೊರಸೂಸುವ ದಟ್ಟ ಹೊಗೆಯಲ್ಲಿ ರಸ್ತೆ ಮಧ್ಯೆ ನಿಂತು ಸುಗಮ ಸಂಚಾರಕ್ಕಾಗಿ ಶ್ರಮವಹಿಸುತ್ತಿರುವ ಪೊಲೀಸ್‌ ಸಿಬ್ಬಂದಿಗೆ ಮೇಲಧಿಕಾರಿಗಳ ಈ ಕಾಳಜಿ ತುಸು ನಿರಾಳ ಮನೋಭಾವ ಉಂಟುಮಾಡಿದೆ. ತಮ್ಮ ಬಗ್ಗೆ ಕಾಳಜಿ ವಹಿಸುತ್ತಿರುವ ಡಿವೈಎಸ್ಪಿ ಮತ್ತು ಸರ್ಕಲ್‌ ಇನ್ಸ್‌ಪೆಕ್ಟರ್‌ ಅವರಿಗೆ ಕೃತಜ್ಞತೆ ಸಲ್ಲಿಸುವುದರೊಂದಿಗೆ ಮತ್ತಷ್ಟು ಹುರುಪಿನಿಂದ ಕೆಲಸ ನಿರ್ವಹಿಸಲು ಮುಂದಾಗುತ್ತಿದ್ದಾರೆ.

''ಇದೇ ರೀತಿ ಪ್ರತಿಯೊಬ್ಬರೂ ತಮ್ಮ ಸಹೋದ್ಯೋಗಿಗಳ ಬಗ್ಗೆ ಕಾಳಜಿ ವಹಿಸಿ ಪ್ರೋತ್ಸಾಹಿಸಿದರೆ ಯಾವುದೇ ದುಗುಡವಿಲ್ಲದೆ ಕರ್ತವ್ಯ ನಿರ್ವಹಿಸಲು ಸಾಧ್ಯ. ಯುವ ಸಿಬ್ಬಂದಿಗೆ ಇಂತಹ ಕಾರ್ಯಗಳು ಮತ್ತಷ್ಟು ಸ್ಫೂರ್ತಿ ನೀಡಲಿದೆ,'' ಎನ್ನುತ್ತಾರೆ ಸಂಚಾರ ಪೇದೆ ವಿಜಯ ಹೊಸಮನಿ.


ನನ್ನ 35 ವರ್ಷದ ಅವಧಿಯಲ್ಲಿ ಇಂತಹ ಕಾರ್ಯ ಬಹಳ ಅಪರೂಪದ ವಿಚಾರ. ಈ ರೀತಿಯಲ್ಲೂ ಉನ್ನತ ಅಧಿಕಾರಿಗಳು ತಮ್ಮ ಸಹೋದ್ಯೋಗಿಗಳ ಬಗ್ಗೆ ಕಾಳಜಿ ವಹಿಸುತ್ತಿರುವುದು ಜನತೆಯ ಮೆಚ್ಚುಗೆಗೆ ಕಾರಣವಾಗಿದೆ.

-ಕೆ.ಕುಶಾಲಪ್ಪ ಮೂಲ್ಯ, ಸಂಚಾರ ಪೊಲೀಸ್‌ ಸಹಾಯಕ ಠಾಣಾಧಿಕಾರಿ



ಡಿವೈಎಸ್ಪಿ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯ ನಿರ್ವಹಿಸಲು ಸಾಧ್ಯವಾಗಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಿಸಿಲಿನ ಝಳದಲ್ಲಿ ಸಿಬ್ಬಂದಿ ಪ್ರತಿನಿತ್ಯ ಶ್ರಮವಹಿಸುತ್ತಿರುವುದು ಗಮನಕ್ಕೆ ಬಂದ ಹಿನ್ನಲೆಯಲ್ಲಿ ಈ ರೀತಿಯ ಕಾರ್ಯ ಕೈಗೊಳ್ಳಲಾಗಿದೆ. ರೋಟರಿ ಸಂಸ್ಥೆ ಸಹಯೋಗದೊಂದಿಗೆ ಮುಂದಿನ ದಿನಗಳಲ್ಲಿ ಪ್ರಮುಖ ವೃತ್ತಗಳಲ್ಲಿ ಕೊಡೆಗಳನ್ನು ಅಳವಡಿಸಿ ಸಿಬ್ಬಂದಿಗೆ ಮತ್ತಷ್ಟು ಅನುಕೂಲ ಕಲ್ಪಿಸಲಾಗುವುದು.

-ದಿನೇಶ್‌ ಕುಮಾರ್‌, ವೃತ್ತ ನಿರೀಕ್ಷ ಕ



ಕುಶಾಲನಗರ ಪಟ್ಟಣದಲ್ಲಿ ಕಾರ್ಯ ನಿರ್ವಹಿಸುವ ಸಂಚಾರಿ ಪೊಲೀಸ್‌ ಸಿಬ್ಬಂದಿಗೆ ತಂಪು ಪಾನೀಯ ಪೂರೈಸಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ