ಆ್ಯಪ್ನಗರ

ಮೈತುಂಬಿ ಹರಿಯುತ್ತಿದೆ ಕಾಜೂರು ಹೊಳೆ

5 ದಿನಗಳಿಂದ ಶನಿವಾರಸಂತೆ ವ್ಯಾಪ್ತಿಯಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ದುಂಡಳ್ಳಿ ಗ್ರಾ.ಪಂ.ಗೆ ಸೇರಿದ ಕಾಜೂರು ಹೊಳೆ ಮೈತುಂಬಿ ಹರಿಯುತ್ತಿದೆ.

Vijaya Karnataka 14 Jun 2018, 5:00 am
ಶನಿವಾರಸಂತೆ: 5 ದಿನಗಳಿಂದ ಶನಿವಾರಸಂತೆ ವ್ಯಾಪ್ತಿಯಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ದುಂಡಳ್ಳಿ ಗ್ರಾ.ಪಂ.ಗೆ ಸೇರಿದ ಕಾಜೂರು ಹೊಳೆ ಮೈತುಂಬಿ ಹರಿಯುತ್ತಿದೆ.
Vijaya Karnataka Web kajooru river in full flow
ಮೈತುಂಬಿ ಹರಿಯುತ್ತಿದೆ ಕಾಜೂರು ಹೊಳೆ


ಕಾಜೂರು ಹೊಳೆ ದುಂಡಳ್ಳಿ ಮತ್ತು ಬ್ಯಾಡಗೊಟ್ಟ ಗ್ರಾ.ಪಂ.ವ್ಯಾಪ್ತಿಯ ರೈತರಿಗೆ ಜೀವನದಿ. ಸೋಮವಾರಪೇಟೆ ತಾಲೂಕಿನ ಕೂತಿ ಗ್ರಾಮದ ಬೆಟ್ಟದ ತಪ್ಪಲಿನಲ್ಲಿ ಹುಟ್ಟುವ ಕಾಜೂರು ಹೊಳೆ ಕಾಜೂರು, ದುಂಡಳ್ಳಿ, ಬ್ಯಾಡಗೊಟ್ಟ ಗ್ರಾ.ಪಂ.ಗೆ ಸೇರಿದ ಕ್ಯಾತೆ ಗ್ರಾಮದ ಮೂಲಕ ಕೊಡ್ಲಿಪೇಟೆ ಬಳಿಯ ಶಾಂತಪುರ ಸಮೀಪ ಹೇಮಾವತಿಗೆ ಸೇರುತ್ತದೆ. ಸುಮಾರು 53 ಕಿ.ಮೀ.ದೂರ ಕ್ರಮಿಸುವ ಕಾಜೂರು ಹೊಳೆ ಈ ಭಾಗದ ಜನರಿಗೆ ಮತ್ತು ರೈತರಿಗೆ ಜೀವನದಿ. ಬೇಸಿಗೆ ಕಾಲದಲ್ಲಿ ಈ ಭಾಗದ ರೈತರಿಗೆ ಕಾಜೂರು ಹೊಳೆ ವ್ಯವಸಾಯ ಮಾಡಲು ಆಧಾರ. ಆದರೆ, 3 ವರ್ಷಗಳಿಂದ ಬೇಸಿಗೆಯಲ್ಲಿ ಬಿಸಿಲಿನ ತಾಪಕ್ಕೆ ಕಾಜೂರು ಹೊಳೆ ಸಂಪೂರ್ಣವಾಗಿ ಬತ್ತಿ ಹೋಗುತ್ತಿದೆ. ಈ ವರ್ಷ ಮುಂಗಾರು ವ್ಯಾಪಕವಾಗಿ ಆಗುತ್ತಿದ್ದು, ಸೋಮವಾರಪೇಟೆ ತಾಲೂಕಿನ ಕೂತಿ ಮುಂತಾದ ಕಡೆ ಭಾರಿ ಮಳೆಯಾಗುತ್ತಿರುವುದರಿಂದ ಕಾಜೂರು ಹೊಳೆ ತುಂಬಿ ಹರಿಯುತ್ತಿದೆ. ವಾಡಿಕೆಗೆ ಮುಂಚೆಯೇ ಕಾಜೂರು ಹೊಳೆ ತುಂಬಿ ಹರಿಯುತ್ತಿರುವುದರಿಂದ ಈ ಭಾಗದ ರೈತರು ಮುಂದಿನ ಬೇಸಿಗೆಯಲ್ಲಿ ಬರಿದಾಗುವುದಿಲ್ಲ ಎಂದು ಸಂತಸಗೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ