ಆ್ಯಪ್ನಗರ

ದುಬೈನಿಂದ ಬಂದ ಕೊರೊನಾ ಪೀಡಿತನ ಸಂಪರ್ಕದಲ್ಲಿ 300 ಜನ: ಕೊಡಗು ತಲ್ಲಣ!

ದುಬೈನಿಂದ ಮರಳಿದ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿರುವ ಸುದ್ದಿ ಇಡೀ ಕೊಡಗು ಜಿಲ್ಲೆಯನ್ನು ಆತಂಕಗೊಳ್ಳುವಂತೆ ಮಾಡಿದ್ದು, ಈ ಮಧ್ಯೆ ಆರೋಗ್ಯ ಇಲಾಖೆ ಆತ 300ಕ್ಕೂ ಹೆಚ್ಚು ಜನರ ಸಂಪರ್ಕಕ್ಕೆ ಬಂದಿರಬಹುದಾದ ಶಂಖೆ ವ್ಯಕ್ತಪಡಿಸಿದೆ. ಅಲ್ಲದೇ ಆತ ಪ್ರಯಾಣ ಬೆಳೆಸಿದ ಇತಿಹಾಸವನ್ನು ಕೆದಕುತ್ತಾ ಆತನೊಂದಿಗೆ ಸಂಪರ್ಕಕ್ಕೆ ಬಂದಿರಬಹುದಾದ ವ್ಯಕ್ತಿಗಳಿಗಾಗಿ ಶೋಧ ನಡೆಯುತ್ತಿದೆ.

Vijaya Karnataka Web 20 Mar 2020, 1:29 pm
ಮಡಿಕೇರಿ: ದುಬೈನಿಂದ ಬೆಂಗಳೂರಿಗೆ ಬಂದು ಅಲ್ಲಿಂದ ಮಡಿಕೇರಿಗೆ ಬಂದಿರುವ ವ್ಯಕ್ತಿಯಲ್ಲಿ ಕೊರೊನಾ ವೈರಸ್ ದೃಢಪಟ್ಟ ಮಧ್ಯೆಯೇ, ಆತನ ಸಂಪರ್ಕಕ್ಕೆ ಸುಮಾರು 300 ಕ್ಕೂ ಅಧಿಕ ಜನ ಬಂದಿರಬಹುದಾದ ಶಂಕೆ ವ್ಯಕ್ತವಾಗಿದೆ.
Vijaya Karnataka Web Coronavirus
ದುಬೈನಿಂದ ಮಡಿಕೇರಿಗೆ ಮರಳಿರುವ ವ್ಯಕ್ತಿಯಲ್ಲಿ ಕೊರೊನಾ ವೈರಸ್ ಪತ್ತೆಯಾಗಿದ್ದು, ಆತ 300ಕ್ಕೂ ಅಧಿಕ ಜನರ ಸಂಪರ್ಕಕ್ಕೆ ಬಂದಿರಬಹುದಾದ ಆತಂಕ ಎದುರಾಗಿದೆ.


ಇದೇ ಮಾ.15ರಂದು ದುಬೈನಿಂದ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ ಕೊರೊನಾ ಪೀಡಿತ, ಅದೇ ದಿನ ರಾಜ್ಯ ಸಾರಿಗೆ ಬಸ್‌ನಲ್ಲಿ ಮಡಿಕೇರಿಗೆ ಪ್ರಯಾಣ ಬೆಳೆಸಿದ್ದಾನೆ.

ಮಡಿಕೇರಿಗೆ ಬಂದಿಳಿದ ಮೇಲೂ ಆತ ಹಲವರನ್ನು ಭೇಟಿಯಾಗಿದ್ದು, ಆರೋಗ್ಯ ಇಲಾಖೆ ಕೊರೊನಾ ಪೀಡಿತ ಒಟ್ಟು 300ಕ್ಕೂ ಅಧಿಕ ಜನರ ಸಂಪರ್ಕಕ್ಕೆ ಬಂದಿರಬಹುದಾದ ಶಂಕೆ ವ್ಯಕ್ತಪಡಿಸಿದ್ದಾರೆ.


ಕೊರೊನಾ ಪೀಡಿತನ ಪ್ರಯಾಣ ಇತಿಹಾಸವನ್ನು ಕೆದಕುತ್ತಿರುವ ಆರೋಗ್ಯ ಇಲಾಖೆ, ಆತ ಹೋದ ಕಡೆಗಳಲ್ಲಿ ಆತನ ಸಂಪರ್ಕಕ್ಕೆ ಬಂದಿರಬಹುದಾದ ವ್ಯಕ್ತಿಗಳ ತಪಾಸಣೆ ಮಾಡಲು ಮುಂದಾಗಿದೆ.

ಕೊಡಗಿನಲ್ಲಿ ವ್ಯಕ್ತಿಗೆ ಕೊರೊನಾ ಸೋಂಕು ದೃಢ ಹಿನ್ನಲೆ, ಜಿಲ್ಲೆಯಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆ

ಈ ಕುರಿತು ಖುದ್ದು ಆರೋಗ್ಯ ಸಚಿವ ಶ್ರೀರಾಮುಲು ಮಾಹಿತಿ ನೀಡಿದ್ದು, ಬೆಂಗಳೂರಿನ ಸ್ಯಾಟ್‌ಲೈಟ್ ಬಸ್ ನಿಲ್ದಾಣದಿಂದ KA 19 F3170 ನೋಂದಣಿ ಸಂಖ್ಯೆಯ KSRTC ರಾಜಹಂಸ ಬಸ್ಸಿನಲ್ಲಿ ಮಡಿಕೇರಿಗೆ ಪ್ರಯಾಣ ಬೆಳೆಸಿದ ಪ್ರಯಾಣಿಕನಿಗಾಗಿ ಶೋಧ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ಆರೋಗ್ಯ ಇಲಾಖೆ ಕೂಡ ಈ ಕುರಿತು ಪ್ರಕಟಣೆ ಹೊರಡಿಸಿದ್ದು, ಈ ಬಸ್ಸಿನಲ್ಲಿ ಮಡಿಕೇರಿ ಬಂದಾತ ಕೂಡಲೇ ಜಿಲ್ಲಾಸ್ಪತ್ರೆಗೆ ಭೇಟಿ ನಿಡಬೇಕು ಎಂದು ಮನವಿ ಮಾಡಿದೆ.


ದುಬೈನಿಂದ ಬಂದ ವ್ಯಕ್ತಿ 300ಕ್ಕೂ ಅಧಿಕ ಜನರ ಸಂಪರ್ಕಕ್ಕೆ ಬಂದಿದ್ದರೆ ಕೊಡಗು ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚಾಗುವ ಸಂಭವ ಅಧಿಕ ಎಂದು ಆರೋಗ್ಯ ಇಲಾಖೆ ಆತಂಕ ವ್ಯಕ್ತಪಡಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ