ಆ್ಯಪ್ನಗರ

ಡಿ.2ರಂದು ಕೊಡವ ನ್ಯಾಷನಲ್‌ ಡೇ

ಕೊಡವ ನ್ಯಾಷನಲ್‌ ಆಶ್ರಯದಲ್ಲಿ ಡಿ.2ರಂದು 28ನೇ ಕೊಡವ ನ್ಯಾಷನಲ್‌ ಡೇ ಆಚರಣೆಯನ್ನು ನಗರದ ಗಾಂಧಿ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್‌.ಯು.ನಾಚಪ್ಪ ತಿಳಿಸಿದ್ದಾರೆ.

Vijaya Karnataka 19 Nov 2018, 5:00 am
ಮಡಿಕೇರಿ
Vijaya Karnataka Web kodava national day on dec 2
ಡಿ.2ರಂದು ಕೊಡವ ನ್ಯಾಷನಲ್‌ ಡೇ


ಕೊಡವ ನ್ಯಾಷನಲ್‌ ಆಶ್ರಯದಲ್ಲಿ ಡಿ.2ರಂದು 28ನೇ ಕೊಡವ ನ್ಯಾಷನಲ್‌ ಡೇ ಆಚರಣೆಯನ್ನು ನಗರದ ಗಾಂಧಿ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್‌.ಯು.ನಾಚಪ್ಪ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ಪ್ರತಿ ವರ್ಷ ನ.24ರಂದು ಕೊಡವ ನ್ಯಾಷನಲ್‌ ಡೇ ಆಚರಿಸಲಾಗುತ್ತಿತ್ತು. ಪ್ರಸ್ತುತ ವರ್ಷದಲ್ಲಿ ನ.23ರಂದು ಹುತ್ತರಿ ಹಬ್ಬ ನಡೆಯುವ ಹಿನ್ನೆಲೆ ಡಿ.2ರಂದು ಆಚರಿಸಲು ನಿರ್ಧರಿಸಲಾಗಿದೆ. ಅಂದು ನಡೆಯುವ ಕಾರ್ಯಕ್ರಮಕ್ಕೆ ಜಿಲ್ಲೆಯ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು,'' ಎಂದು ಮನವಿ ಮಾಡಿದರು.

''ಪ್ರಸ್ತುತ ವರ್ಷದಲ್ಲಿ ವಾಯವ್ಯ ಕೊಡಗಿನ ಜಲ-ಸ್ಫೋಟ, ಭೂ-ಸ್ಫೋಟ ಉತ್ಪಾತ ಪೀಡಿತ 7 ನಾಡುಗಳಲ್ಲಿ ಜನತೆ ಭವಿಷ್ಯವನ್ನೇ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆ ಸಂತ್ರಸ್ತರ ಬದುಕಿನಲ್ಲಿ ಹೊಸ ಭರವಸೆ ಮೂಡಿಸಿ, ಅವರ ಕಲ್ಯಾಣ ಮತ್ತು ಪುನಃಶ್ಚೇತನಕ್ಕಾಗಿ ಅವರ ಆಶೋತ್ತರವನ್ನು ಈಡೇರಿಸುವ ಸಂಕಲ್ಪ ದಿನವನ್ನಾಗಿ ಆಚರಿಸಲಾಗುವುದು. ಅಲ್ಲದೇ, ಕೊಡವ ಲ್ಯಾಂಡ್‌ ಸ್ವಾಯುತ್ತೆಯೊಂದಿಗೆ ಏಳು ನಾಡುಗಳ ಸಂತ್ರಸ್ತರ ಕಲ್ಯಾಣ ಮತ್ತು ಉದ್ಧಾರಕ್ಕೋಸ್ಕರ ವಿವಿಧ ನಿರ್ಣಯ ಮಂಡಿಸಿ, ಅಂಗೀಕರಿಸಲಾಗುವುದು,'' ಎಂದರು.

ಬೇಡಿಕೆಗಳು: ''ವಾಯವ್ಯ ಕೊಡಗಿನ ಜಲ-ಸ್ಫೋಟ, ಭೂ-ಸ್ಫೋಟ ಉತ್ಪಾತ ಪೀಡಿತ 7 ನಾಡುಗಳನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಪತ್ತು ಪ್ರದೇಶ ಎಂದು ಘೋಷಿಸಬೇಕು. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದೊಂದಿಗೆ ಸಂಯೋಜನೆಗೊಂಡ ವಿಪತ್ತು ನಿರ್ವಹಣಾ ಮಂತ್ರಿಗಳ ನೇಮಕಮಾಡಬೇಕು. ವಿಪತ್ತಿಗೆ ಮೂಲ ಕಾರಣವಾದ ಕೊಡಗಿನ ಹೃದಯದ ಮೇಲೆ ನಿಂತಿರುವ ಜೀವಂತ ಆಟಂಬಾಂಬ್‌ ಹಾರಂಗಿ ಜಲಾಶಯವನ್ನು ತುರ್ತಾಗಿ ಕೆಡವಬೇಕು. ಕೊಡವರ ಪ್ರಧಾನ ಭೂ-ರಾಜಕೀಯ ಲ್ಯಾಂಡ್‌ ಸ್ವಾಯತ್ತ ಅನ್ವೇಷಣೆ, ಕೇಂದ್ರಾಡಳಿತ ಪ್ರದೇಶ ಹಕ್ಕೊತ್ತಾಯವು ಸೇರಿದಂತೆ ಕೊಡವ ಬುಡಕಟ್ಟು ಕುಲವನ್ನು ಸಂವಿಧಾನದ 340 ಮತ್ತು 342 ರ ವಿಧಿಯಂತೆ ಶೆಡ್ಯೂಲ್‌ ಪಟ್ಟಿಯಲ್ಲಿ ಸೇರಿಸಿ ರಾಜ್ಯಾಂಗ ಖಾತರಿ ನೀಡಬೇಕು. ಮತ್ತು ಅತಿ ಸೂಕ್ಷ್ಮಾತಿ ಸೂಕ್ಷ ್ಮ ಜನಾಂಗೀಯ ಅಲ್ಪ ಸಂಖ್ಯಾತ ಸಾಂಸ್ಕೃತಿಕ ಕೊಡವ ಬುಡಕಟ್ಟು ಕುಲವನ್ನು ಯುನೆಸ್ಕೊದ ಇಂಟ್ಯಾಂಜಿಬಲ್‌ ಕಲ್ಚರಲ್‌ ಹೆರಿಟೇಜ್‌ ಪಟ್ಟಿಯಲ್ಲಿ ಸೇರಿಸಬೇಕು,'' ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಸಿಎನ್‌ಸಿಯ ಪ್ರಮುಖರಾದ ಕಾಟುಮಣಿಯಂಡ ಉಮೇಶ್‌ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ